Breaking News

Breaking News

ಬಿಜೆಪಿಯ ದೊಡ್ಡ ನಾಯಕರು ಅಫೀಮು ಗುಂಗಿಲ್ಲದೇ ಮನೆಯಿಂದ ಹೊರಗೆ ಬರುತ್ತಿರಲಿಲ್ಲ.

ಬೆಳಗಾವಿ: ಆರ್ ಎಸ್ ಎಸ್ ಗೂ ಕಾಂಗ್ರೆಸ್ ತರಬೇತಿ ಶಿಬಿರಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾತನಾಡಿದರು. ಆರ.ಎಸ.ಎಸ ತರಹ ನಮ್ಮ ಶತ್ರುಗಳನ್ನು ಸಹ ತಯಾರು ಮಾಡಲ್ಲ. ಆರ.ಎಸ.ಎಸ ತರಹ ಸಂಘಟನೆ ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಅಡಿಯಲ್ಲಿ, ಪಕ್ಷದ ಇತಿಹಾಸ ಇಟ್ಟುಕೊಂಡು ದೇಶದ ಅಭಿವೃದ್ಧಿಗಾಗಿ ಕೈ …

Read More »

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ AK-47 ಗೆ ಬಳಿಸುವ ಜೀವಂತ ಗುಂಡು ಪತ್ತೆ…

ಬೆಳಗಾವಿ- ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುವಾಗ ಸೈನಿಕನ ಬಳಿ ಜೀವಂತ ಗುಂಡುಗಳು ಪತ್ತೆಯಾದ ಹಿನ್ನಲೆಯಲ್ಲಿ ಪೋಲೀಸರು ಸೈನಿಕನನ್ನು ವಶಕ್ಕೆ ಪಡೆದಿದ್ದಾರೆ ಇಂದು ಬೆಳಿಗ್ಗೆ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ,ಸೈನಿಕನ ಹತ್ತಿರ, ಒಂದು ರೌಂಡ್ ಜೀವಂತ ಗುಂಡಿನ ಸರ,ಮತ್ತು ಬಳಿಸಿದ ಗುಂಡಿನ ಒಂದು ಕೇಸ್ ಪತ್ತೆಯಾಗಿದೆ. ಈತ ದೆಹಲಿಯಿಂದ,ಬೆಂಗಳೂರು,ಮತ್ತು ಬೆಂಗಳೂರಿನಿಂದ,ಬೆಳಗಾವಿಗೆ ವಿಮಾನ ಮೂಲಕ ಬಂದಿದ್ದಾನೆ,ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಎ.ಕೆ ,47 ಗೆ ಬಳಿಸುವ ದು ರೌಂಡ್ ಜೀವಂತ ಗುಂಡುಗಳು …

Read More »

ಬೆಳಗಾವಿ ಕ್ರೈಂ ಎಸಿಪಿಯಾಗಿ ನಾರಾಯಣ ,ಮತ್ತೆ ಬೆಳಗಾವಿಗೆ ಬಂದಿತು ಪೋಲೀಸ್ ಟೈಗರ್

ಬೆಳಗಾವಿ- ಬೆಳಗಾವಿ ಮಹಾನಗರ ಪೋಲೀಸ್ ವಿಭಾಗದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.ಖಾನಾಪೂರ ಪೋಲೀಸ್ ತರಬೇತಿ ಶಾಲೆಗೆ ವರ್ಗಾವಣೆಯಾಗಿದ್ದ,ಎಸಿಪಿ ನಾರಾಯಣ ಭರಮಣಿ ಅವರನ್ನು ಸರ್ಕಾರ ಮತ್ತೆ ಬೆಳಗಾವಿ ಕ್ರೈಂ ಎಸಿಪಿ ಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಬೆಳಗಾವಿಗೆ ಮತ್ತೆ ಬರತೈತಿ ಪೋಲೀಸ್ ಟೈಗರ್ ಎಂದು ಬೆಳಗಾವಿ ಸುದ್ಧಿ ಡಾಟ್ ಕಾಮ್,ವರದಿ ಮಾಡಿತ್ತು ಎಸಿಪಿ ನಾರಾಯಣ ಭರಮಣಿ ಅವರು ಬೆಳಗಾವಿ ಕ್ರೈಂ ವಿಭಾಗದ ಎಸಿಪಿಯಾಗಿ ಮತ್ತೆ ಗರ್ಜಿಸಲಿದ್ದಾರೆ.

Read More »

ನಾಮಕರಣ ಮಾಡಿ,ಭೂಮಿ ಪೂಜೆ,ನೆರವೇರಿಸಿ,ಉತ್ಸವ ಆಚರಿಸಿ….!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಚೆಲ್ಲಾಟ ಮುಂದುವರೆದಿದ್ದು,ಈ ಬಾರಿಯೂ ಕೊರೋನಾ ಕರಿನೆರಳು ಕಿತ್ತೂರು ಉತ್ಸವದ ಮೇಲೆ ಬಿದ್ದಿದೆ. ಕಳೆದ ಬಾರಿಯೂ ಕಿತ್ತೂರು ಉತ್ಸವ ಮಹಾಪೂರದಲ್ಲಿ ತೇಲಿ ಹೋಗಿತ್ತು,.ಈ ಬಾರಿಯೂ ಮಹಾಮಾರಿ ಕೊರೋನಾ ಕಿತ್ತೂರು ಉತ್ಸವದ ಸಂಬ್ರಮಕ್ಕೆ ಬ್ರೇಕ್ ಹಾಕಿದೆ. ಈ ವರ್ಷದ ಕಿತ್ತೂರು ಉತ್ಸವವನ್ನು ಸಿಂಪಲ್ ಅಂದ್ರೆ ಸಾಂಕೇತಿಕವಾಗಿ, ಆಚರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ,ಕಿತ್ತೂರು ಶಾಸಕ ಮಹಾಂತೇಶ್ ದೊಡಗೌಡ್ರು ಅವರು ಕಿತ್ತೂರು ಉತ್ಸವ ಆಚರಣೆ ಮಾಡುವ ವಿಷಯವನ್ನು ಅಧಿವೇಶನದಲ್ಲಿ …

Read More »

ಡ್ರಗ್ಸ್ ಕುರಿತು,ಸ್ಯಾಂಡಲ್ ವುಡ್ ನಡುಗಿಸಿದ ಸಂಬರಗಿ ರಾಣಿ ಚನ್ನಮ್ಮನ ಮರಿ ಮೊಮ್ಮಗನಂತೆ….!

ಬೆಳಗಾವಿ- ಡ್ರಗ್ಸ್ ಮಾಫಿಯಾ ಬಯಿಲೆಗೆಳೆದು ಸ್ಯಾಂಡಲ್ ವುಡ್ ರಂಗವನ್ನೇ ನಡುಗಿಸಿದ ಸಮಾಜ ಸೇವಕ ಪ್ರಶಾಂತ ಸಂಬರಗಿ ಮೂಲತಹ ಬೆಳಗಾವಿ ಜಿಲ್ಲೆಯವರು ಎನ್ನುವದು ಹೆಮ್ಮೆಯ ಸಂಗತಿಯಾಗಿದೆ. ಸಮಾಜ ಸೇವಕ ಪ್ರಶಾಂತ ಸಂಬರಗಿ ಅವರು,ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಮುನವಳ್ಳಿ ಗ್ರಾಮದವರಾಗಿದ್ದು,ನಾನು ಕಿತ್ತೂರು ರಾಣಿ ಚನ್ನಮ್ಮನ ವಂಶಸ್ಥ,ಚನ್ನಮ್ಮನ ಮರಿ ಮೊಮ್ಮಗ ಎಂದು ಪ್ರಶಾಂತ ಸಂಬರಗಿ ಅವರು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಆರಂಭವಾದಾಗ ಫೇಸ್ ಬುಕ್ …

Read More »

ಬೆಳಗಾವಿ ಜಿಲ್ಲೆಯಲ್ಲಿ, ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಬೆಳಗಾವಿ,-): ಸಮಗ್ರ ಶಿಕ್ಷಣ ಯೋಜನೆಯ ಸಮನ್ವಯ ಶಿಕ್ಷಣ ಮಧ್ಯವರ್ತನೆ ಚಟುವಟಿಕೆಯಡಿಯಲ್ಲಿ 2020-21 ನೇ ಸಾಲಿಗೆ ಕಿತ್ತೂರು, ಖಾನಾಪುರ ಹಾಗೂ ರಾಮದುರ್ಗ ವಲಯಗಳಲ್ಲಿ ಖಾಲಿ ಇರುವ ನಿಗದಿಪಡಿಸಿದ ವಿಶೇಷ ಸಂಪನ್ಮೂಲ ಶಿಕ್ಷಕರಿಗಾಗಿ ವಿದ್ಯಾರ್ಹತೆ ಹೊಂದಿದ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕವಾಗಿ ನೇರ ಗುತ್ತಿಗೆ ಮೂಲಕ ಇಲಾಖಾ ನಿಯಮಾನುಸಾರ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿಶೇಷ ಡಿ.ಇಡಿ(ಪ್ರಾಥಮಿಕ ಮತ್ತು ವಿಶೇಷ ಬಿ.ಇಡಿ(ಪ್ರೌಢ) ಪದವಿ ಪಡೆದಿರುವ ಆರ್.ಸಿ.ಆಯ್. ಪ್ರಮಾಣ ಪತ್ರ ಹೊಂದಿರುವ ಸರ್ಕಾರಿ ಶಾಲಾ ಶಿಕ್ಷಕರು …

Read More »

ವಿಡಿಯೋದಲ್ಲಿ ಯೋಧನ, ರೋಧನ….ಮೂವರ ಬಂಧನ…!

ಯೋಧನ ಕುಟುಂಬದ ಮೇಲೆ ಹಲ್ಲೆ,ಭೀತಿಯಿಂದ ಗ್ರಾಮ ತೊರೆದ ಯೋಧನ ಕುಟುಂಬ….! ಬೆಳಗಾವಿ- ಅಣ್ಣ ಮತ್ರು ತಂಗಿ ಇಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಮಾಡುತ್ತಿದ್ದಾರೆ,ಈ ಯೋಧನ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಮನೆಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಯೋಧ ಮತ್ತು ಯೋಧನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಗಾವಿ ಸಮೀಪದ ಕಿಣಿಯೇ ಗ್ರಾಮದಲ್ಲಿ ನಡೆದಿದೆ. ಮೂಳೆ ಚಿಕಿತ್ಸೆಗೆ ಪ್ರಸಿದ್ದಿ ಪಡೆದಿರುವ ಕಿಣಿಯೇ ಗ್ರಾಮದಲ್ಲಿ ಈ ಘಟನೆ ನಡೆದಿದೆ,ನನ್ನ ಹಾಗು ನನ್ನ ಕುಟುಂಬದವರ …

Read More »

ಬೆಳಗಾವಿ ಮಹಾನಗರದ ಹೊಸ ಡಿಸಿಪಿ ವಿಕ್ರಂ ಆಮಟೆ

ಬೆಳಗಾವಿ- ಬೆಳಗಾವಿಯ ಕಾನೂನು ಮತ್ತು ಸುವ್ಯೆವಸ್ಥೆ ವಿಭಾಗದ ಡಿಸಿಪಿ ಯನ್ನಾಗಿ ವಿಕ್ರಂ ಆಮಟೆ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ಅವರ ವರ್ಗಾವಣೆಯಿಂದ ತೆರುವಾದ ಸ್ಥಾನಕ್ಕೆ ವಿಕ್ರಂ ಆಮಟೆ ಅವರನ್ನು ಡಿಸಿಪಿ ಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಬೆಳಗಾವಿಯ ಪೋಲೀಸ್ ಇಲಾಖೆಯಲ್ಲಿ ವರ್ಗಾವಣೆಯ ಪರ್ವ ಆರಂಭವಾಗಿದ್ದು, ಇತ್ತೀಚಿಗಷ್ಟೆ ಡಿಸಿಪಿ,ಸೀಮಾ ಲಾಟ್ಕರ್, ಮತ್ತು ಎಸಿಪಿ ನಾರಾಯಣ ಭರಮಣಿ ಅವರ ವರ್ಗಾವಣೆ ಆಗಿತ್ತು ವಿಕ್ರಂ ಆಮಟೆ …

Read More »

ಶಾಲೆಗಳ ಆರಂಭಕ್ಕೆ ಶುರುವಾದ ಚಿಂತನೆ….!

ಬೆಳಗಾವಿ- ಸೆಪ್ಟೆಂಬರ್ 21 ರಿಂದ ಶಿಕ್ಷಕರು 9 ನೇಯ ತರಗತಿಯಿಂದ 12 ನೇಯ ತರಗತಿಯ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬಹುದು ಎಂದು ಕೇಂದ್ರ ಮಾರ್ಗಸೂಚಿ ಪ್ರಕಟಿಸಿದ್ದು ಇದನ್ನು ರಾಜ್ಯದಲ್ಲಿ ಯಾವ ರೀತಿ ಅನುಷ್ಠಾನ ಮಾಡಬಹುದು ಎಂದು ರಾಜ್ಯ ಸರ್ಕಾರ ಚಿಂತನೆ ಶುರು ಮಾಡಿದೆ. ಈಗಾಗಲೇ ಈ ಕುರಿತು ಕೇಂದ್ರ ಸರ್ಕಾರದಿಂದ SOP ,ಬಂದಿದೆ ಕರ್ನಾಟಕ ಸರ್ಕಾರ SOP ಮಾಡಿಕೊಳ್ಳುತ್ತದೆ,ಶಾಲೆಗಳ ಆರಂಭದ ಕುರಿತು ಸರ್ಕಾರ ಸೆಪ್ಟೆಂಬರ್ 12 ಅಥವಾ 13 ಕ್ಕೆ SOP …

Read More »

ಚನ್ನಮ್ಮನ ಮೂರ್ತಿಗೆ ಜೇನಿನ ಮುಸುಕು….!

ಹುಬ್ಬಳ್ಳಿ- ಬ್ರಿಟೀಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ಚನ್ನಮ್ಮನ ಮೂರ್ತಿಗೆ ಜೇನು ಮುಸುಕು ಹಾಕಿದೆ. ಹುಬ್ಬಳ್ಳಿಯ ಹಳೆಯ ಬಸ್ ನಿಲ್ಧಾಣದ ಎದುರಿನ ಚನ್ನಮ್ಮನ ವೃತ್ತದಲ್ಲಿರುವ ಮೂರ್ತಿಗೆ ಜೇನಿನ ಮುಸುಕು,ಅತ್ಯಂತ ಜನನಿಬಿಡ ಪ್ರದೇಶದ್ಲಿರುವ ಈ ಮೂರ್ತಿ ಈಗ ಜನರ ಗಮನ ಸೆಳೆಯುತ್ತಿದೆ. ಮೂರ್ತಿಯ ಮುಖಕ್ಕೆ ಸಂಪೂರ್ಣವಾಗಿ ಜೇನುನೊಣಗಳು ಮುಸುಕು ಹಾಕಿದ್ದು ವಿಶೇಷವಾಗಿದೆ.

Read More »