Breaking News

Breaking News

ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಖಡಕ್ ಲಾಕ್ ಡೌನ್…..!

ಬೆಳಗಾವಿ-ಬೆಳಗಿನ ಜಾವ ಪೋಲೀಸರು ಫೀಲ್ಡ್ ಗೆ ಇಳಿದಿದ್ದಾರೆ,ರಸ್ತೆಗಳ ಮೇಲೆ ವಾಹನಗಳ ಓಡಾಟ ಇಲ್ಲವೇ ಇಲ್ಲ,ಜನರಂತೂ ಕಾಣಿಸುತ್ತಿಲ್ಲ,ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣ ಬಿಕೋ ಎನ್ನುತ್ತಿದೆ.ಬೆಳಗಾವಿ ನಗರ ಮತ್ತು ಸಂಪೂರ್ಣ ಜಿಲ್ಲೆಯಲ್ಲಿ ಫುಲ್ ಖಡಕ್ ಲಾಕ್ ಡೌನ್ ಅನುಷ್ಠಾನಗೊಂಡಿರುವದು ಸತ್ಯ. ಬೆಳಗಾವಿ ನಗರದಲ್ಲಿ ಹಾಲು,ಔಷಧಿ ಅಂಗಡಿ ಹೊರತುಪಡಿಸಿದರೆ ಬೇರೆ ಯಾವ ಅಂಗಡಿಯೂ ಬಾಗಿಲು ತೆರೆದಿಲ್ಲ,ಬೆಳಗಾವಿಯ ಹೋಲ್ ಸೇಲ್ ತರಕಾರಿಯ ಎಪಿಎಂಸಿ ಮಾರುಕಟ್ಟೆಯೂ ಸಂಪೂರ್ಣವಾಗಿ ಬಂದ್ ಆಗಿದೆ.ಅಗತ್ಯ ವಸ್ತುಗಳ ಸರಕು ವಾಹನಗಳನ್ನು ಹೊರತುಪಡಿಸಿ ಬೇರೆ …

Read More »

ಇಂದು ಒಂದೇ ದಿನ ಬೆಳಗಾವಿಯಲ್ಲಿ ಕೊರೋನಾ ಸೊಂಕಿಗೆ ಇಬ್ಬರು ಬಲಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮೃತ್ಯು ತಾಂಡವ ಮುಂದುವರೆದಿದ್ದು ಇಂದು ಶನಿವಾರ ಮಹಾಮಾರಿ ವೈರಸ್ ಗೆ ಒಂದೇ ದಿನ ಇಬ್ಬರು ಬಲಿಯಾಗಿದ್ದಾರೆ ಮದ್ಯಾಹ್ನ ರಾಯಬಾಗ ಕುಡಚಿಯ 70 ವರ್ಷದ ಸೊಂಕಿತ ಸಾವನ್ನೊಪ್ಪಿದರೆ,ಇಂದು ರಾತ್ರಿ 9 ಗಂಟೆಗೆ ಬೆಳಗಾವಿಯ ವೀರಭದ್ರ ನಗರದ 48 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಇಬ್ಬರೂ ಉಸಿರಾಟದ ತೊಂದರೆಯಿಂದಾಗಿ ಭೀಮ್ಸ ಆಸ್ಪತ್ರೆಗೆ ದಾಖಲಾಗಿದ್ದರು ಒಬ್ಬ ಇಂದು ಮದ್ಯಾಹ್ನ ಮೃತಪಟ್ಟರೆ ಮೊತ್ತೊಬ್ಬ ರಾತ್ರಿ ಮೃತಪಟ್ಟಿದ್ದು ,ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿಗೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಇಂದು ಶನಿವಾರ ಮತ್ತೆ 27 ಜನ ಸೊಂಕಿತರ ಪತ್ತೆ ಒಂದು ಬಲಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಕಾಟ ಇಂದು ಶನಿವಾರವೂ ಮುಂದುವರೆದಿದೆ. ಇಂದು ರಾಯಬಾಗ ಕುಡಚಿಯ ಸೊಂಕಿತ ಬಲಿಯಾಗಿದ್ದು ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 5 ಕ್ಕೇರಿದ್ದುಇಂದಿನ ಹೆಲ್ತ್‌ ಬುಲಿಟೀನ್ ನಲ್ಲಿ  ಬೆಳಗಾವಿ ಜಿಲ್ಲೆಯ27ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಶನಿವಾರ 27 ಜನ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 383 ಕ್ಕೆ ಏರಿದಂತಾಗಿದೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ 27 ಜನ ಸೊಂಕಿತರ ಪೈಕಿ , ಬೆಳಗಾವಿಯ …

Read More »

ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರ ಕಾರ್ಯಶೈಲಿ ಬದಲಾಗಬೇಕು- ಸತೀಶ್ ಜಾರಕಿಹೊಳಿ

ಬೆಳಗಾವಿ-ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಲು ಪಕ್ಷ ಹಲವಾರು ಯೋಜನೆಗಳನ್ನು ರೂಪಿಸಿದೆ,ಪಕ್ಷದ ಪದಾಧಿಕಾರಿಗಳು ಕ್ರೀಯಾಶೀಲವಾಗಬೇಕು,ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರುಗಳ ಕಾರ್ಯಶೈಲಿ ಬದಲಾಗಬೇಕು ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಪಕ್ಷದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು. ಕೆಪಿಸಿಸಿ ಕಾರ್ಯಾದ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಅವರನ್ನು ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಅದ್ಧೂರಿ ಯಾಗಿ ಸ್ವಾಗತಿಸಿ ಸತ್ಕರಿಸಿದರು.ಕಾರ್ಯಕರ್ತರಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದ …

Read More »

ಬೆಳಗಾವಿಯ ಬಳೆ ತೊಡಿಸುವ ಮಹಿಳೆಗೂ ಕೊರೋನಾ,

ಬೆಳಗಾವಿ- ಪ್ರತಿ ದಿನ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಬಳಿ ತೊಡಿಸುವ 58 ವರ್ಷದ ಬಳಿಗಾರ ಮಹಿಳೆಗೂ ಸೊಂಕು ತಗಲಿದ್ದು ಮಹಿಳೆಯ ಪ್ರಾಥಮಿಕ ಸಂಪರ್ಕ ದಲ್ಲಿ ಬಂದವರನ್ನು ಪತ್ತೆ ಮಾಡಲು ಅಧಿಕಾರಿಗಳು ಸುಸ್ತಾಗಿ ಹೋಗಿದ್ದಾರೆ. ಬೆಳಗಾವಿ ನಗರ ಮಾಳಿ ಗಲ್ಲಿಯ 58 ವರ್ಷದ ಬಳಿಗಾರ ಮಹಿಳೆ ಪ್ರತಿ ದಿನ ನಗರದ ಗಲ್ಲಿ ಗಲ್ಲಿ ಗಳಲ್ಲಿ ಸುತ್ತಾಡಿ 200 ಕ್ಕೂ ಹೆಚ್ಚು ಮನೆಗಳ ಮಹಿಳೆಯರಿಗೆ ಬಳೆ ತೊಡೆಸಿದ್ದಾಳೆ ಎಂದು ತಿಳಿದು ಬಂದಿದ್ದು ಈ …

Read More »

ಬೆಳಗಾವಿ ಮೂವರು ಡಿಆರ್ ಪೋಲೀಸರಿಗೂ ಕೊರೋನಾ ಸೊಂಕು

ಬೆಳಗಾವಿ- ನಿಪ್ಪಾಣಿಯ ಕುಗನೊಳ್ಳಿ,ರಾಯಬಾಗ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕರ್ತವ್ಯ ನಿಭಾಯಿಸಿದ ಮೂವರು ಪೋಲೀಸ್ ಪೇದೆಗಳಿಗೆ ಕೊರೋನಾ ಸೊಂಕು ಇರುವದು ದೃಡವಾದ ಹಿನ್ನಲೆಯಲ್ಲಿ ಮೂವರನ್ನು ಐಸೋಲೇಟ್ ಮಾಡಲಾಗಿದೆ. ಸೊಂಕು ಪತ್ತೆಯಾದ ಮೂವರು ಡಿ ಆರ್ ಪೇದೆಗಳು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಕರ್ತವ್ಯ ನಿಭಾಯಿಸಿದ್ದು ಈ ಮೂವರು ಪೇದೆಗಳು ಬೆಳಗಾವಿ ನಗರದ ಪೋಲೀಸ್ ಹೆಡ್ ಕ್ವಾಟರ್ಸ್ ನಲ್ಲಿ ವಾಸವಾಗಿದ್ದರು. ಈ ಮೂವರು ಪೋಲೀಸ್ ಪೇದೆಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು …

Read More »

ಇಂದು ರಾತ್ರಿ 8 ಗಂಟೆಯಿಂದ ಖಡಕ್ ಲಾಕ್ ಡೌನ್……!

ಬೆಳಗಾವಿ-ಗಡಿಭಾಗದ ಬೆಳಗಾವಿಯಲ್ಲಿ ಕೊರೋನಾ ಮಹಾಮಾರಿಯ ಮೃತ್ಯು ತಾಂಡವ ಮುಂದುವರೆದಿದ್ದು ಈ ಮಹಾಮಾರಿಗೆ ಲಗಾಮು ಹಾಕಲು ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ,ಬೆಳಗಾವಿ ನಗರ ಮತ್ತು ಇಡೀ ಜಿಲ್ಲೆಯಲ್ಲಿ ಖಡಕ್ ಕರ್ಪ್ಯು ಜಾರಿ ಮಾಡಲು ಪೋಲೀಸರು ಸಜ್ಜಾಗಿದ್ದಾರೆ. ಇಂದು ಶನಿವಾರ ರಾತ್ರಿ 8 ಗಂಟೆಗೆ ಪೋಲೀಸರು ಫೀಲ್ಡ್ ಗೆ ಇಳಿಯಲಿದ್ದಾರೆ.ನಾಳೆ ಸಂಡೇ ಇಡೀ ದಿನ ಅವಶ್ಯಕವಾಗಿ ಯಾರಾದ್ರೂ ಮನೆಯ ಗೇಟು ತೆಗೆದು ಹೊರಗೆ ಸುತ್ತಾಡಿದ್ರೆ ಪೋಲೀಸರ ಏಟು …

Read More »

ಸಾಂಬ್ರಾ ಏರ್ ಫೋರ್ಸ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಏರ್ ಮನ್

ಬೆಳಗಾವಿ- ಬೆಳಗಾವಿ ಏರ್ ಫೋರ್ಸ್ ನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಏರ್ ಫೋರ್ಸಿನ ಜವಾನನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಂಬ್ರಾ ಏರ್ಫೋರ್ಸ್ ವಿಂಗ್ ಆವರಣದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಜವಾನ ತೆಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕಾರಣ ಏನೆಂಬುದು ಗೊತ್ತಾಗಿಲ್ಲ ಹರಿಯಾಣಾ ಮೂಲದ 24 ವರ್ಷದ ಅಮೀರ ಹಸಬು ಖಾನ್ ಇಂದು ಬೆಳಿಗ್ಗೆ 9-30 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಂಬ್ರಾ ಏರ್ಫೋರ್ಸ್ ನಲ್ಲಿ …

Read More »

ಬೆಳಗಾವಿಯ ಕ್ಯಾಂಪ್ ಪೋಲೀಸ್ ಠಾಣೆ ಶೀಲ್ ಡೌನ್

ಬೆಳಗಾವಿ- ಬೆಳಗಾವಿಯ ಕ್ಯಾಂಪ್ ಪೋಲೀಸರು ಬಂಧಿಸಿರುವ ಆರೋಪಿಗೆ ಕೊರೋನಾ ಸೊಂಕು ತಗಲಿರುವದು ಇಂದು ದೃಡವಾಗಿರುವ ಹಿನ್ನಲೆಯಲ್ಲಿ ಕ್ಯಾಂಪ್ ಪೋಲೀಸ್ ಠಾಣೆಯನ್ನು ಶೀಲ್ ಡೌನ್ ಮಾಡಲಾಗಿದೆ. ಇತ್ತೀಚಿಗೆ ಕ್ಯಾಂಪ್ ಪೋಲೀಸರು ಡರೋಡೆ ಪ್ರಕರಣಕ್ಕೆ ಸಮಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದರು ಈ ಆರೋಪಿಯ ರಿಪೋರ್ಟ್ ಇಂದು ಪಾಸಿಟೀವ್ ಬಂದಿದ್ದು ,ಕ್ಯಾಂಪ್ ಠಾಣೆಯ 1 ಪೋಲೀಸ್ ಇನೆಸ್ಪೆಕ್ಟರ್ ಮತ್ತು ಠಾಣೆಯ ಹತ್ತು ಜನ ಪೇದೆಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕ್ಯಾಂಪ್ ಠಾಣೆಯನ್ನು ಸೈನಿಟೈಸ್ ಮಾಡಿದ ಬಳಿಕ ಶೀಲ್ …

Read More »

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 13 ಜನರಿಗೆ ಕೊರೋನಾ ಸೊಂಕು ದೃಡ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ವೈರಸ್ ನಿರಂತರವಾಗಿ ದಾಳಿ ನಡಡಸಿದೆ,ಇಂದು ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡಿನ ನರ್ಸ್,ಮತ್ತು ಕ್ಯಾಂಪ್ ಪೋಲೀಸರು ಬಂಧಿಸಿರುವ ದರೋಡೆಕೋರನಿಗೂ ಸೊಂಕು ತಗಲಿದ್ದು ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 13 ಸೊಂಕಿತರು ಪತ್ತೆಯಾಗಿದ್ದಾರೆ. ಶುಕ್ರವಾರದ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಈ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ 13 ಜನರಿಗೆ ಕೊರೋನಾ ಸೊಂಕು ತಗಲಿರುವದು ದೃಡವಾಗಿದ್ದು,ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ356 ಕ್ಕೆ ಏರದಂತಾಗಿದೆ ಇಂದು ಪತ್ತೆಯಾದ 13 ಜನ …

Read More »