ಬೆಳಗಾವಿ ಬೆಳಗಾವಿಯ ಪ್ರತಿಷ್ಠಿತ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ( ಎಪಿಎಂಸಿ) ಯ ಅಧ್ಯಕ್ಷರಾಗಿ ಕಾಂಗ್ರೆಸ್ ನ ಹಿರಿಯ ಮುಖಂಡ ಯುವರಾಜ್ ಕದಂ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಹಾದೇವಿ, ಮಹಾದೇವಿ ಖಾನಗೌಡರ( ಹುದಲಿ) ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಅಧ್ಯಕ್ಷ ಸ್ಥಾನಕ್ಕೆ ಯುವರಾಜ್ ಕದಂ, ಸುಧೀರ ಗಡ್ಡೆ,ಸಂಜು ಮಾದರ ಮೂವರು ನಾಮಪತ್ರ ಸಲ್ಲಿಸಿದ್ದರು. ಕೊನೆಯ ಗಳಿಗೆಯಲ್ಲಿ ಎಲ್ಲರೂ ನಾಮಪತ್ರ ವಾಪಸ್ ಪಡೆದುಕೊಂಡ ಹಿನ್ನೆಲೆಯಲ್ಲಿ ಕಣದಲ್ಲಿ …
Read More »ಬೆಳಗಾವಿ ಎಪಿಎಂಸಿಯಲ್ಲಿ ಮಿಕ್ಸ್ ಭಾಜಿ…ಯಾರು ಹೊಡೀತಾರೆ ಬಾಜಿ….!!
ಬೆಳಗಾವಿ ಎಪಿಎಂಸಿ ಯಲ್ಲಿ ಯಾರು ಹೊಡೀತಾರೆ ಜಾಕ್ ಪಾಟ್…..! ಬೆಳಗಾವಿ- ಬೆಳಗಾವಿ ಎಪಿಎಂಸಿಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಇಲ್ಲ.ಇಲ್ಲಿ ರೆಡಿಯಾಗಿದೆ,ಮಿಕ್ಸ್ ಭಾಜಿ, ಹೀಗಾಗಿ ಯಾರು ಹೊಡೀತಾರೆ ಈಬಾರಿ ಬಾಜಿ ಎನ್ನುವ ಪ್ರಶ್ನೆ ಈಗ ತೀವ್ರ ಕುತೂಹಲ ಕೆರಳಿಸಿದೆ. ಚುನಾಯಿತ ಹನ್ನೊಂದು ಸದಸ್ಯರು ಒಗ್ಗಟ್ಟಾಗಿ ಸತೀಶ್ ಜಾರಕಿಹೊಳಿ ಅವರ ಬಳಿ ಹೋದ ಬಳಿಕ,ಬಿಜೆಪಿ ಕುಂಬಕರ್ಣ ನಿದ್ದೆಯಿಂದ ಎಚ್ಚರವಾಗಿ,ಎಪಿಎಂಸಿಯಲ್ಲಿ ಅಧಿಕಾರ ಹಿಡಿಯೋದು ಹೇಗೆ ಅಂತಾ ಬೆಳಗಾವಿಯ ಗೋಮಟೇಶ್ ವಿದ್ಯಾಪೀಠದಲ್ಲಿ ಸಭೆ ನಡೆಸಿದೆ. ಬೆಳಗಾವಿ …
Read More »ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಸೊಂಕಿತ ಪತ್ತೆ
ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೋನಾ ಪಾಸಿಟೀವ್ ಪ್ರಕರಣ ಬೆಳಕಿಗೆ ಬಂದಿದೆ.ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 304 ಕ್ಕೆ ಏರಿದೆ. ಇಂದು ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸ್ಕೋರ್ ಹೆಚ್ಚಾಗಿದೆ.
Read More »ಬೆಳಗಾವಿಯಲ್ಲಿ ಎಂ.ಎಲ್.ಎ.ಮಾಡಿದ್ರು ಸೈಕಲ್ ಸವಾರಿ,ಕೆಲಸ ಮಾಡದ ಅಧಿಕಾರಿಗಳಿಗೆ ಹಾಕಿದ್ರು ಛೀಮಾರಿ….!!!
ಬೆಳಗಾವಿ-ಸೈಕಲ್ ಮೇಲೆ,ಎಂ.ಎಲ್.ಎ.ಸಂಚಾರ,ಕೇಳಿದ್ರು ಪಬ್ಲಿಕ್ ತಕರಾರ, ವ್ಹಾ ರೇ ವ್ಹಾ ಇದೆಂಥಾ ವಿಚಾರ,ಇದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ವಿಭಿನ್ನ,ವಿನೂತನ ಸಮಾಚಾರ. ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನರ ಸೇವೆ ಮಾಡುತ್ತಾರೆ.ಆದ್ರೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಮಾಡುವ ಜನಸೇವೆ,ವಿಭಿನ್ನ ವಿನೂತನವಾಗಿರುತ್ತದೆ ಎನ್ನುವದಕ್ಕೆ,ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅವರು ನಡೆಸಿದ ಸೈಕಲ್ ರ್ಯಾಲಿಯೇ ಅದಕ್ಕೆ ಸಾಕ್ಷಿಯಾಗಿದೆ. ಸರ್ಕಾರದ ಯಾವುದೇ ಯೋಜನೆ ಬರಲಿ,ಅದನ್ನು ಅತ್ಯಂತ ವ್ಯವಸ್ಥಿತವಾಗಿ ಮನೆ,ಮನೆಗೆ ಮುಟ್ಟಿಸುವ,ಯುವಕರ ತಂಡ …
Read More »ಮಾರ್ಕೆಟ್ ನಲ್ಲಿ ಗದ್ದಲ,,,,ಮಾರ್ಟ್ ನಲ್ಲಿ ಗೊಂದಲ,ಬೆಳಗಾವಿಯಲ್ಲಿ ಮತ್ತೆ ಕೊರೋನಾಗೆ ಜನ ಬೆಂಬಲ…..!!
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಕೊರೋನಾ, ಪಾಸಟೀವ್ ಪ್ರಕರಣ ಬೆಳಕಿಗೆ ಬಂದಾಗ ಯಾವ ರೀತಿಯ ಭಯ ಇತ್ತೋ ಆ ಭಯ ಈಗ ನಿರ್ಭಯವಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ,ಸೊಂಕಿತರ ಸಂಖ್ಯೆ 300 ಗಡಿ ದಾಟಿದರೂ ಜನ ನಿರ್ಭಿತರಾಗಿ ಓಡಾಡುತ್ತಿದ್ದಾರೆ. ಆರಂಭದಲ್ಲಿ,ಮಾಸ್ಕ್ ಹಾಕಿಕೊಂಡು,ಸೈನಿಟೈಸರ್ ಬಾಟಲಿಯನ್ನು ಜೇಬಿನಲ್ಲಿ ಇಟ್ಟು, ಸೋಶಿಯಲ್ ಡಿಸ್ಟನ್ಸ್ ಕಾಯ್ದುಕೊಂಡು, ಓಡಾಡಿದ್ದರು,ದಿನಕಳೆದಂತೆ ಸೊಂಕಿತರ ಸಂಖ್ಯೆ ಹೆಚ್ಚಾದರೂ ಜನರಲ್ಲಿದ್ದ ಭೀತಿ ಮಾತ್ರ ದೂರವಾಗಿದೆ. ಜನ ಆರಂಭದಲ್ಲಿ ಕೊರೋನಾ ಬಂದಿದೆ ಎಂದು ಹೆದರಿದ್ದರು,ಈಗ ಬೆಳಗಾವಿ ಜನರ ಓಡಾಟ,ಧೈರ್ಯ, …
Read More »ಕೇಂದ್ರ-ರಾಜ್ಯದ ನಡುವಿನ ಕೊಂಡಿ,ಆಗ್ತಾರಂತೆ ಕಡಾಡಿ
ಬೆಳಗಾವಿ-ರಾಜ್ಯಸಭಾ ಸದಸ್ಯರಾಗಿ ಏಕಾಏಕಿ ಜಾಕ್ ಫಾಟ್ ಹೊಡೆದ ಬಿಜೆಪಿಯ ಕ್ರಿಯಾಶೀಲ ಮುಖಂಡ ಈರಣ್ಣಾ ಕಡಾಡಿ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಳಿಕ ಪ್ರಥಮವಾಗಿ ಬೆಳಗಾವಿಗೆ ಆಗಮಿಸಿದರು. ಬೆಳಗಾವಿ ಜಿಲ್ಲೆಯ ನೂರಾರು ಕಾರ್ಯಕರ್ತರು ಈರಣ್ಣಾ ಕಡಾಡಿ ಅವರನ್ನು ಸುವರ್ಣ ವಿಧಾನಸೌಧದ ಬಳಿ ತಡೆದು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಬೆಳಗಾವಿಗೆ ಬರಮಾಡಿಕೊಂಡರು. ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಬೆಳಗಾವಿಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆಗೆ ಮಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ …
Read More »ಸೋಮವಾರ ಬೆಳಗಾವಿ ಎಪಿಎಂಸಿ ಅದ್ಯಕ್ಷ,ಉಪಾದ್ಯಕ್ಷರ ಚುನಾವಣೆ
ಬೆಳಗಾವಿ- ಸೋಮವಾರ ಬೆಳಗಾವಿ ಎಪಿಎಂಸಿ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಡೆಯಲಿದೆ. ಬೆಳಗಾವಿ ಎಪಿಎಂಸಿಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಿದ್ದರೂ,ಎಲ್ಲ ಹನ್ನೊಂದು ಜನ ಚುನಾಯಿತ ಸದಸ್ಯರು ಒಗ್ಗಟ್ಟಾಗಿ,ಅಧ್ಯಕ್ಷ ಉಪಾದ್ಯಕ್ಷರ ಹೆಸರನ್ನು ನೀವೇ ಸೂಚಿಸಿ ಎಂದು ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದಾರೆ. ಇಂದು ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಇಬ್ಬರು ಮಾತುಕತೆ ಮಾಡಿ,ಅದ್ಯಕ್ಷ ಉಪಾದ್ಯಕ್ಷರ ಹೆಸರನ್ನು ಅಂತಿಮಗೊಳಿಸುತ್ತಾರೆ ,ಎಂದು ತಿಳಿದು ಬಂದಿದೆ. ಅದ್ಯಕ್ಷ ಉಪಾದ್ಯಕ್ಷ ಸ್ಥಾನಕ್ಕೆ 11ಜನ ಚುನಾಯಿತ ಸದಸ್ಯರು …
Read More »ಕ್ವಾರಂಟೈನ್ ಕುರಿತು ತಿಳುವಳಿಕೆ ಹೇಳಲು ಹೋದ,ಪಿಡಿಯೋ,ತಲಾಠಿ ಮೇಲೆ ಹಲ್ಲೆ…..!!!
ಬೆಳಗಾವಿ- ನೀವು ಮಹಾರಾಷ್ಟ್ರದಿಂದ ಬಂದಿದ್ದೀರಾ,ನೀವು ಹೋಮ್ ಕ್ವಾರಂಟೈನ್ ಆಗಬೇಕು,ಎಂದು ತಿಳುವಳಿಕೆ ಹೇಳಲು ಹೋದ,ಪಿಡಿಓ ಮತ್ತು ತಲಾಠಿಯ ಮೇಲೆ ಹಲ್ಲೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮರಣಹೋಳ ಗ್ರಾಮದಲ್ಲಿ ನಡೆದಿದೆ. ಮರಣಹೋಳ ಗ್ರಾಮದಲ್ಲಿ ಮಹಾರಾಷ್ಟ್ರದಿಂದ ಹನ್ನೆರಡು ಜನ ಬಂದಿರುವ ಸುದ್ಧಿ ಜಿಲ್ಲಾಡಳಿತಕ್ಕೆ ಗೊತ್ತಾಗಿದೆ.ಮಾಹಿತಿ ಗೊತ್ತಾದ ಬಳಿಕ ತಾಲೂಕಾ ಆರೋಗ್ಯ ಅಧಿಕಾರಿ ಡೂಮಗಳ ,ಮತ್ತು ತಹಶೀಲ್ದಾರ ಇಬ್ಬರೂ ಅಧಿಕಾರಿಗಳು ಮರಣಹೋಳ ಗ್ರಾಮಕ್ಕೆ ಭೇಟಿ ನೀಡಿ ಮಹಾರಾಷ್ಟ್ರದಿಂದ ಬಂದಿರುವ ಹನ್ನೆರಡು …
Read More »ಆ ಕಡೆ ಅಂಕಲಗಿ ರಾಜ್….ಈ ಕಡೆ ಚನ್ನರಾಜ್. ಇಬ್ಬರಲ್ಲಿ ಯಾರಾಗ್ತಾರೆ ಜೈ ರಾಜ್…. ..!!
ಬೆಳಗಾವಿ ತಾಲ್ಲೂಕಿನಲ್ಲಿ ರಾಜರ, ನಡುವೆ ಮಹಾಯುದ್ಧ…..!! ಬೆಳಗಾವಿ – ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.ನಿರ್ದೇಶಕರಾಗಲು ಘಟಾನುಘಟಿಗಳು ತಯಾರಿ ನಡೆಸಿದ್ದು ಹಳೆ ಹುಲಿಗಳು,ಹೊಸ ಹುಲಿಗಳ ನಡುವೆ ಕದನ ನಡೆಯುವದು ಖಚಿತ. ಡಿಸಿಸಿಸಿ ಬ್ಯಾಂಕಿಗೆ ಒಟ್ಟು 16 ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ,ಅದರಲ್ಲಿ ಹತ್ತು ಜನ ನಿರ್ದೇಶಕರು,ಪ್ರತಿ ತಾಲ್ಲೂಕಿಗೆ ಒಬ್ಬರಂತೆ,ಹತ್ತು ಜನ ನಿರ್ದೇಶಕರು ಆಯ್ಕೆಯಾಗುತ್ತಾರೆ. ಈ ಹತ್ತು ಜನ ನಿರ್ದೇಶಕರನ್ನು ಆಯಾ ತಾಲ್ಲೂಕಿನ ಕೃಷಿ ಪತ್ತಿನ ಸಹಕಾರಿ …
Read More »ಗೋಮೌಂಸ ಸಾಗಿಸುತ್ತಿದ್ದ ನಾಲ್ಕು ವಾಹನಗಳು ಫೋಲೀಸರ ವಶಕ್ಕೆ
ಬೆಳಗಾವಿ- ಬೆಳಗಾವಿ ಜಿಲ್ಲೆಯಿಂದ ಪಕ್ಕದ ಗೋವಾ ರಾಜ್ಯಕ್ಕೆ ಗೋಮೌಂಸ ಸಾಗಾಟ ಅವ್ಯಾಹತವಾಗಿ ನಡೆದಿದೆ.ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆ ವ್ಯಾಪ್ತಿಯ ಕರ್ಲೇ ಗ್ರಾಮದ ಬಳಿ ಗೋಮೌಂಸ ತುಂಬಿದ ವಾಹನಕ್ಕೆ ಬೆಂಕಿ ಹಚ್ಚಿದ ಬೆನ್ನಲ್ಲೇ, ಹಿರೇಬಾಗೇವಾಡಿ ಗ್ರಾಮದ ಬಳಿ ಮತ್ತೆ ನಾಲ್ಕು ವಾಹನಗಳು ಸಿಕ್ಕಿಬಿದ್ದಿವೆ. ಗೋಮೌಂಸ ತುಂಬಿಕೊಂಡು ಬರುತ್ತಿದ್ದ ನಾಲ್ಕು ವಾಹನಗಳನ್ನು ಹಿರೇಬಾಗೇವಾಡಿ ಗ್ರಾಮದ ಟೋಲ್ ಬಳಿ ಪೋಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ಕು ವಾಹನಗಳನ್ನು ವಶಕ್ಕೆ ಪಡೆದಿರುವ ಪೋಲೀಸರು,ನಾಲ್ಕು ವಾಹನಗಳ ಚಾಲಕರನ್ನು ವಿಚಾರಣೆಗೊಳಪಡಿಸಿದ್ದಾರೆ. …
Read More »