ಬೆಗಾವಿಯಲ್ಲಿ ರಾಯಬಾಗ ಕುಡಚಿಯ ಸೊಂಕಿತನೊಬ್ಬನ ರಿಪೋರ್ಟ್ ನೆಗೆಟೀವ್ ಬಂದ ಹಿನ್ನಲೆಯಲ್ಲಿ ಓರ್ವನನ್ನು ಇಂದು ಜಿಲ್ಲಾ ಆಸ್ಪತ್ರೆಯ ಕೋವೀಡ್ 19 ವಾರ್ಡಿನಿಂದ ಡಿಸ್ಚಾರ್ಜ್ ಮಾಡಲಾಗಿದೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು ನಾಲ್ಕು ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ.
Read More »ಕುಂದಾನಗರಿಯ ಬಾನಂಗಳದಲ್ಲಿ ದ್ರೋಣಯಾನ…ಮನೆಯಲ್ಲಿ ಇದ್ದವನೇ ಜಾಣ….!!!
ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ಸಮರ್ಪಕವಾಗಿ ತಡೆಗಟ್ಟಲು,ಬೆಳಗಾವಿ ನಗರದ ಜನ ಅನವಶ್ಯಕವಾಗಿ ಸುತ್ತಾಡುವದನ್ನು ನಿಯಂತ್ರಿಸಲು ಶಾಸಕ ಅಭಯ ಪಾಟೀಲ ಹೊಸ ಐಡಿಯಾ ಹುಡಕಿದ್ದಾರೆ . ಅತ್ಯಂತ ವಿಶಾಲವಾಗಿರುವ ಬೆಳಗಾವಿ ನಗರದಲ್ಲಿ ಹೊರಗಡೆ ಸುತ್ತಾಡುವ ಜನರನ್ನು ತಡೆಯಲು ಪೋಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.ಅನವಶ್ಯಕವಾಗಿ ಸುತ್ತಾಡುವ ಜನರನ್ನು ಸರಳವಾಗಿ ಗುರುತಿಸಿ ಅವರನ್ನು ದಂಡಿಸಲು ಶಾಸಕ ಅಭಯ ಪಾಟೀಲ ಬೆಳಗಾವಿ ನಗರದಲ್ಲಿ ಹದಿನಾಲ್ಕು ದ್ರೋಣ ಕ್ಯಾಮರಾಗಳನ್ನು ಬೆಳಗಾವಿಯ ಬಾನಂಗಳದಲ್ಲಿ ಹಾರಿ …
Read More »ಸತ್ತರೆ ಅವರು ಸಾಯ್ತಾರೆ ನಾವ್ಯಾಕ ತಲೆ ಕೆಡಿಸಿಕೊಳ್ಳಬೇಕೀಗ……????
ಬೆಳಗಾವಿ-ಸೋಂಕಿತರು ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲವೆಂದು ಮಾದ್ಯಮಗಳ ಪ್ರಶ್ನೆಗೆ ಕೇಂದ್ರ ಸಚಿವರು ಡಿಫರೆಂಟ್ ಆಗಿ ಉತ್ತರಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಡಿಸ್ಟನ್ಸ್ ಇಲ್ಲದಿದ್ರೆ ಹೇಗೆ ಇಂಪ್ರೂವ್ ಆಗುತ್ತಿದ್ದಾರೆ ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಪ್ರಶ್ನೆ ಮಾಡಿದ್ರು.. ಯಾವ ಪೇಷಂಟ್ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಹೇಳಿ. ಪೇಷಂಟ್ ನಂಬರ್ ಇದಾವೆ.. ಅವರನ್ನ ಇಲ್ಲಿಯೇ ಕರಿಸ್ತೀನಿ ಯಾರಂತ ಹೇಳಿ ಎಂದು ಮಾಧ್ಯಮವರನ್ನು ಪ್ರಶ್ನಿಸಿದ ಅವರು, ಅವರ ಆರೋಗ್ಯ ಅವರು ಕಾಪಾಡಿಕೊಳ್ಳಬೇಕು, …
Read More »ಬೆಳಗಾವಿಯಲ್ಲಿ ಇಂದು ಮತ್ತೆ ಇಬ್ಬರ ರಿಪೋರ್ಟ್ ಪಾಸಟೀವ್ …
ಬೆಳಗಾವಿ- ಬೆಳಗಾವಿ ಪಾಲಿಗೆ ಇಂದು ಕ್ರವಾರ ಮಧ್ಯಾಹ್ನ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಜಿಲ್ಲೆಯ ರಾಯಬಾಗ ಕುಡಚಿಯ ಎರಡು ಪಾಸಟೀವ್ ಕೇಸ್ ಪತ್ತೆಯಾಗಿವೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 45ಕ್ಕೇರಿದೆ. ಇಂದು ಪತ್ತೆಯಾಗಿರುವ ಇಬ್ಬರು ಸೊಂಕಿತರು ರಾಯಬಾಗ ಕುಡಚಿಯವರಾಗಿದ್ದು 10 ವರ್ಷದ ಬಾಲಕಿ ,ಮತ್ತು 15 ವರ್ಷದ ಯುವಕನಿಗೆ ಕೊರೋನಾ ಸೊಂಕು ತಗಲಿರುವದು ದೃಡವಾಗಿದೆ. ಮಹಾಮಾರಿ ಕೊರೋನಾ ದಿನದಿಂದ ದುನಕ್ಕೆ ಬೆಳಗಾವಿ ಜಿಲ್ಲೆಯಿಂದ ದೂರ..ದೂರವಾಗುತ್ತಿದೆ ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ …
Read More »ಬೆಳಗಾವಿಯ ಇಬ್ಬರು ನಕಲಿ ಪತ್ರಕರ್ತರಿಂದ ಧಾರವಾಡದಲ್ಲಿ ಬ್ಲ್ಯಾಕ್ ಮೇಲ್, ಉದ್ಯಮಿಗಳಿಂದ ಗೂಸಾ…..!!!!
*ಬೆದರಿಕೆ: ಇಬ್ಬರು ನಕಲಿ ಪತ್ರಕರ್ತರ ಬಂಧನ* ಧಾರವಾಡ ( ಕರ್ನಾಟಕ ವಾರ್ತೆ) ಏ.23: ಇಲ್ಲಿನ ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ಬಿಎಂಎನ್ ಅಗ್ರೋ ಫುಡ್ಸ್ ಸಂಸ್ಥೆಗೆ ಭೇಟಿ ನೀಡಿ, ಪತ್ರಕರ್ತರು ಎಂದು ಹೇಳಿ ಕೊಂಡು ಬೆದರಿಕೆ ಒಡ್ಡಿ, 25 ಸಾವಿರ ರೂ.ಹಣದ ಬೇಡಿಕೆ ಇಟ್ಟಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಜೆಕೆ 24×7 ನ್ಯೂಸ್ ಚಾನೆಲ್ ವರದಿಗಾರ ಎಂದು ಹೇಳಿಕೊಂಡ ಅನ್ವರ್ ಕೆ.ಜಮಾದಾರ ಹಾಗೂ ಜೆಎಂ ಆರ್ ಚಾನೆಲ್ …
Read More »ಸಿ ಆರ್ ಪಿ ಎಫ್ ಯೋಧನಿಂದ ಏಟು..ಪೋಲೀಸರಿಂದ ತಿರಗೇಟು…..ಕೊನೆಗೆ ಯೋಧ ಅರೆಸ್ಟು….!!!!
ಕರ್ತವ್ಯ ನಿರತ ಪೊಲೀಸ್ ಸಿಬ್ಬಂಧಿ ಮೇಲೆ ಸಿ ಆರ್ ಫಿ ಎಫ್ ಯೋಧ ಹಲ್ಲೆ, ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದಿದೆ ಪೊಲೀಸ್ ಎದೆಯ ಮೇಲಿನ ಬಟ್ಟೆ ಹಿಡಿದು ಎಳೆದಾಡಿ ಹೊಡೆದ ಸಿ ಆರ್ ಪಿ ಎಫ್ ಯೋಧಸಚಿನ್ ಸಾವಂತ್ ಈಗ ಅರೆಸ್ಟ್ ಆಗಿದ್ದಾನೆ. ಮನೆಯ ಹೊರಗೆ ತಿರುಗುತ್ತಿದ್ದ ಯೋಧನಿಗೆ ಪೊಲೀಸರು ಬುದ್ದಿ ಮಾತು ಹೇಳಿದ್ದಕ್ಕೆ ನನಗೆ ಬುದ್ದಿವಾದ ಹೇಳ್ತಿರಾ ಎಂದು ಏಕಾಏಕಿ ಹಲ್ಲೆ …
Read More »ನೋಡಾಕ ಬಸ್…..ಆದ್ರ… ಅದು ಬ್ಯಾರೇನ ಐತಿ….!!
ಚಳಗಾವಿ, : ಸಾರಿಗೆ ಇಲಾಖೆಯಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೂರು ಮೊಬೈಲ್ ಫೀವರ್ ಕ್ಲಿನಿಕ್ ಗಳನ್ನು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಇಲಾಖೆಯ ಸಚಿವರಾದ ಲಕ್ಷ್ಮಣ ಸವದಿ ಅವರು ಗುರುವಾರ (ಏ.೨೩) ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ಇಲ್ಲಿನ ವಿಶ್ವೇಶ್ವರಯ್ಯ ನಗರದ ಸ್ಮಾರ್ಟ್ ಸಿಟಿಯ ಕಮಾಂಡ್ ಅಂಡ್ ಕಂಟ್ರೋಲ್ ಕೇಂದ್ರದ ಬಳಿಯಲ್ಲಿ ಬಸ್ ಗಳನ್ನು ಅವರು ಹಸ್ತಾಂತರಿಸಿದರು. ಕೋವಿಡ್-೧೯ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿರುವುದರಿಂದ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಈ ಕ್ಲಿನಿಕ್ ಗಳನ್ನು …
Read More »ಕೊನೆಗೂ ಬೆಳಗಾವಿಯಲ್ಲಿ ಶುರು ಆಯ್ತು ಕೊರೋನಾ ಪ್ರಯೋಗಾಲಯ….!!!!
ಕೋವಿಡ್-೧೯ ಪರೀಕ್ಷಾ ಪ್ರಯೋಗಾಲಯಕ್ಕೆ ಚಾಲನೆ ನೀಡಿದ ಸಚಿವ ಜಗದೀಶ್ ಶೆಟ್ಟರ್ – ಬೆಳಗಾವಿ ಜಿಲ್ಲೆಗೆ ಹೊಸದಾಗಿ ಮಂಜೂರಾಗಿರುವ ಕೋವಿಡ್-೧೯ ಗೆ ಸಂಬಂಧಿಸಿದಂತೆ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಗುರುವಾರ (ಏ.೨೩) ಚಾಲನೆ ನೀಡಿದರು. ಇಲ್ಲಿನ ನೆಹರೂ ನಗರದ ಕೆ.ಎಲ್.ಇ. ಆಸ್ಪತ್ರೆ ಎದುರಿಗೆ ಇರುವ ಭಾರತ ಸರ್ಕಾರದ ಆರೋಗ್ಯ ಸಂಶೋಧನಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ “ಐಸಿಎಂಆರ್-ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ …
Read More »ಗುರುವಾರ ಬಂತಮ್ಮಾ.,.ಗುರು ರಾಯರ ನೆನೆಯಮ್ಮಾ…..!!!
ಬೆಳಗಾವಿ – ಇಂದು ಗುರುವಾರ ,ಗುರುರಾಯರ ದಿನ ,ಇಂದು ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಗುರುರಾಯರ ಕೃಪೆಯಿಂದ ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಬಂದಿಲ್ಲ.ಹೀಗಾಗಿ ಗುರುವಾರ ಬೆಳಗಾವಿ ಪಾಲಿಗೆ ಶುಭ ದಿನ ಇಂದಿನ ರಾಜ್ಯಮಟ್ಟದ ಹೆಲ್ತ ಬುಲಿಟೀನ್ ನಲ್ಲಿ ಬೆಂಗಳೂರು ಸೇರಿದಂತೆ ಬೇರೆ, ಬೇರೆ, ಜಿಲ್ಲೆಗಳ 16 ಹೊಸ ಪಾಸಿಟೀವ್ ಪ್ರಕರಣಗಳು ಬೆಳಕಿಗೆ ಬಂದಿವೆ.ಆದರೆ ಬೆಳಗಾವಿ ಜಿಲ್ಲೆಯಲ್ಲಿ ಹೊಸ ಪಾಸಿಟೀವ್ ಪ್ರಕರಣಗಳು ಪತ್ತೆಯಾಗದೇ ಇರುವದು ಬೆಳಗಾವಿ ಜಿಲ್ಲೆಗೆ …
Read More »ಮಾಸ್ಕ ಹಾಕದಿದ್ದರೆ ದಂಡ.ಹುಷಾರ್…..!!!
ಬೆಳಗಾವಿ- ಜಿಲ್ಲೆಯಲ್ಲಿ ಕೊರೋನಾ ಸೊಂಕು ಹರಡಿರುವ ಹಿನ್ನಲೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಮಾಸ್ಕ ಹಾಕುವದನ್ನು ಕಡ್ಡಾಯ ಗೊಳಿಸಲಾಗಿದೆ ಮಾಸ್ಕ ಹಾಕದೇ ಇರುವವರಿಗೆ ದಂಡ ವಿಧಿಸಲು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಉಗಳುವದನ್ನು ನಿಷೇಧಿಸಲಾಗಿದೆ ,ಯಾರಾದರೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ಬಿಳೋದು ಗ್ಯಾರಂಟಿ..
Read More »