Breaking News

Breaking News

ಬೆಳಗಾವಿ ಜಿಲ್ಲೆಯ ಐವರು ಕೊರೋನಾ ಶಂಕಿತರ ಗಂಟಲು ದ್ರವ ಬೆಂಗಳೂರಿಗೆ ರವಾನೆ…

ಬೆಳಗಾವಿ ಜಿಲ್ಲೆಯ ಐವರು ಕೊರೋನಾ ಶಂಕಿತರ ಗಂಟಲು ದ್ರವ ಬೆಂಗಳೂರಿಗೆ ರವಾನೆ… ಬೆಳಗಾವಿ – ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಕರೋನಾ ಶಂಕಿತರ ಸಂಖ್ಯೆ ಹೆಚ್ಚಾಗಿದೆ ಜಿಲ್ಲೆಯ ಒಟ್ಟು ಐವರು ಶಂಕಿತರ ಗಂಟಲು ದ್ರವ ವನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಳೆದ ಮೂರು ದಿನದ ಹಿಂದೆಯೇ ಇಬ್ಬರು ಶಂಕಿತರ ಗಂಟಲು ದ್ರವವನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು ಇಂದು ಮತ್ತೆ ಮೂವರ ಶಂಕಿತರ ಗಂಟಲು ದ್ರವವನ್ನು ಬೆಂಗಳೂರಿನ ಪ್ರಯೀಗಾಲಯಕ್ಕೆ …

Read More »

ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿಕೆ 

  ಬೆಳಗಾವಿ-    ಮಾರ್ಚ 27 ರಿಂದ ನಡೆಯಬೇಕಾಗಿದ್ದ SSLC ಪರೀಕ್ಚೆಯನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಲಾಗುವದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದ್ದಾರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಕಟಿಸಿದ ಬಳಿಕ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಸುರೇಶಕುಮಾರ್ ಅವರು SSLC ಪರೀಕ್ಷೆಯನ್ನು ಮುಂದೂಡುವ ವಿಷಯವನ್ನು ದೃಡಪಡಿಸಿದ್ದಾರೆ

Read More »

ಬೆಳಗಾವಿಯಲ್ಲಿ ಕೊರೋನಾ ವದಂತಿಗಳ ಮೇಲೆ ನಿಗಾ ಇಡಲು ಸೈನಿಕರ ನಿಯೋಜನೆ

ವದಂತಿ ಪರಾಮರ್ಶೆಗೆ ಸಜ್ಜಾದ “ಕರೋನಾ ಸೈನಿಕರು” ಬೆಳಗಾವಿ, ಮಾರ್ಚ್, 21(ಕರ್ನಾಟಕ ವಾರ್ತೆ): ಕರೋನಾ ವೈರಾಣು ಹರಡುವಿಕೆ ಕುರಿತು ವಿವಿಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ಪರಾಮರ್ಶಿಸಿ ನೈಜ ಮಾಹಿತಿ ಕೊಡುವ ಉದ್ಧೇಶದಿಂದ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸಲು ಸಜ್ಜಾಗಿರುವ ಕರೋನಾ ಸೈನಿಕರ(ಸ್ವಯಂಸೇವಕರು) ಸಭೆ ವಾರ್ತಾಭವನದಲ್ಲಿ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಕೊರೊನಾ ವೈರಾಣು ಹರಡುವಿಕೆ ಕುರಿತಾಗಿ …

Read More »

ರಾಜ್ಯದಲ್ಲಿ ಮತ್ತೆರಡು ಕೋವಿಡ್-೧೯ ಪಾಸಿಟಿವ್ ಪ್ರಕರಣ-ಸಚಿವ ಬಿ. ಶ್ರೀರಾಮುಲು

ಬೆಳಗಾವಿ, ಮಾ.೨೧(ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಇಂದು ಮತ್ತೆ ಎರಡು ಕೋವಿಡ್ -೧೯ ಹೊಸ ಪಾಸಿಟಿವ ಪ್ರಕರಣಗಳು ವರದಿಯಾಗಿವೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಗೌರಿಬಿದನೂರ ಪ್ರಕರಣ ಸೇರಿದಂತೆ ಇದುವರೆಗೆ ಒಟ್ಟು ೧೬ ಪ್ರಕರಣಗಳು ಕಂಡುಬಂದಿದ್ದವು. ಹೊಸ ಎರಡು ಪ್ರಕರಣಗಳಿಂದ ಈ ಸಂಖ್ಯೆ ೧೮ ಕ್ಕೆ ಏರಿದೆ ಎಂದು ತಿಳಿಸಿದರು.

Read More »

ಶೀಘ್ರದಲ್ಲಿಯೇ ಬೆಳಗಾವಿಯಲ್ಲಿ ಕೊರೋನಾ ಪ್ರಯೋಗಾಲಯ- ಶ್ರೀರಾಮಲು

ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಮಹಾರಾಷ್ಟ್ರ ಹೊಂದಿಕೊಂಡಿರುವ ಕಾರಣ ಬೆಳಗಾವಿಯಲ್ಲಿ ಶೀಘ್ರದಲ್ಲಿಯೇ ಕೊರೋನಾ ಸೊಂಕಿಗೆ ಸಮಂಧಿಸಿದ ಗಂಟಲು ದ್ರುವ ಪರೀಕ್ಷೆಗಾಗಿ ಪ್ರಯೋಗಾಲಯವನ್ನು ಶೀಘ್ರದಲ್ಲಿಯೇ ಆರಂಭಿಸುತ್ತೇವೆ ಎಂದು,ಆರೋಗ್ಯ ಸಚಿವ ಶ್ರೀರಾಮಲು ಭರವಸೆ ನೀಡಿದ್ದಾರೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕರ್ನಾಟಕದಲ್ಲಿ ಇವತ್ತಿನವರೆಗೆ 16 ಕೊರೋನಾ ಸೊಂಕಿನ ಪ್ರಕರಣಗಳು ಪತ್ತೆಯಾಗಿದ್ದವು,ಅದರಲ್ಲಿ ಐವರು ಜನ ಗುಣಮುಖರಾಗಿದ್ದಾರೆ,ಮೂವರು ಜನ ಡಶ್ಚಾರ್ಜ ಆಗಿದ್ದಾರೆ,ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ ಸರ್ಕಾರ …

Read More »

ಜನತಾ ಕರ್ಫ್ಯೂ ಬೆಂಬಲಿಸಲು ಸಚಿವ ರಮೇಶ್ ಜಾರಕಿಹೊಳಿ ಕರೆ

  ಬೆಳಗಾವಿ, ದೇಶಾದ್ಯಂತ ಕೊರೋನಾ ವೈರಸ್ ನ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ನಾಳೆ, ಮಾರ್ಚ್ 22ರ ಭಾನುವಾರದಂದು ಜನತಾ ಕರ್ಫ್ಯೂ ಆಚರಿಸುವಂತೆ ಕರೆ ನೀಡಿದ್ದು, ಭಾರತದ ಒಬ್ಬ ಜಾಗೃತ ಪ್ರಜೆಯಾಗಿ, ಸಂಕಲ್ಪ ಹಾಗೂ ಸಂಯಯದಿಂದ ಈ ’ಜನತಾ ಕರ್ಫ್ಯೂ’ ಪಾಲಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ. ನಾಳೆ ಸ್ವಯಂ ಪ್ರೇರಣೆಯಿಂದ ನಡೆಯಲಿರುವ ’ಜನತಾ ಕರ್ಫ್ಯೂ’ವನ್ನು ಬೆಂಬಲಿಸೋಣ ಎಂದು ಮಾನ್ಯ ಜಲಸಂಪನ್ಮೂಲ ಸಚಿವರಾದ …

Read More »

ಗೋವಾ-ಮಹಾರಾಷ್ಟ್ರದಿಂದ ವಾಹನಗಳ ಆಗಮನ-ನಿರ್ಗಮನಕ್ಕೆ ತಡೆ

ಮ್ಯಾಕ್ಸಿಕ್ಯಾಬ್, ಬಸ್ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಆದೇಶ ಬೆಳಗಾವಿ, ಜಿಲ್ಲೆಯಲ್ಲಿ ಕೊವಿಡ್-19 ವೈರಾಣು ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ಸಾರ್ವಜನಿಕ ವಾಹನಗಳಾದ ಮ್ಯಾಕ್ಸಿಕ್ಯಾಬ್ ( 12 + 1 ) / ಬಸ್ ಸೇರಿದಂತೆ ಎಲ್ಲಾ ಭಾರಿ ಪ್ರಯಾಣಿಕರ ವಾಹನಗಳಾದ ಕಾಂಟ್ರಾಕ್ಟ್ ಕ್ಯಾರೇಜ್ / ಸ್ಟೇಜ್ ಕ್ಯಾರೇಜ್ / ಅಖಿಲ ಭಾರತ ಪ್ರವಾಸಿ ಬಸ್ …

Read More »

ಜನತಾ ಕರ್ಫ್ಯುಗೆ ಬೆಂಬಲಿಸಿ ಬೆಳಗಾವಿಯ ಹೊಟೇಲ್,ಬಾರ್ ಆ್ಯಂಡ ರೆಸ್ಟೋರೆಂಟ್ ಬಂದ್….

ಜನತಾ ಕರ್ಫ್ಯುಗೆ ಬೆಂಬಲಿಸಿ ಬೆಳಗಾವಿಯ ಹೊಟೇಲ್,ಬಾರ್ ಆ್ಯಂಡ ರೆಸ್ಟೋರೆಂಟ್ ಬಂದ್…. ಬೆಳಗಾವಿ- ಪ್ರದಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದಲ್ಲಿ ಜನತಾ ಕರ್ಫ್ಯು ಘೋಷಿಸಿದ ಹಿನ್ನಲೆಯಲ್ಲಿ ಬೆಳಗಾವಿಯ ಹೊಟೇಲ್ ಮಾಲೀಕರ ಸಂಘ,ಮತ್ತು ಲಿಕ್ಕರ್ ಮಾರ್ಚಂಟ್ ಅಸೋಸೇಶಿಯನ್ನ ನವರು ಬೆಂಬಲ ವ್ಯೆಕ್ತ ಪಡಿಸಿದ್ದಾರೆ ಭಾನುವಾರ ಬೆಳಗಾವಿಯ ಎಲ್ಲ ಹೊಟೇಲ್ ಗಳು,ಬಾರ್ ಆ್ಯಂಡ ರೆಸ್ಟೋರೆಂಟ್ ಗಳು ಬಂದ್ ಆಗಲಿವೆ

Read More »

ಬೆಳಗಾವಿಯ ಇಬ್ಬರು ಕರೋನಾ ಶಂಕಿತರ, ಗಂಟಲು ದ್ರವದ ಮಾದರಿ, ಬೆಂಗಳೂರು ಪ್ರಯೋಗಾಲಯಕ್ಕೆ

ಜಿಲ್ಲೆಯಲ್ಲಿ ೧೧೮ ಜನರ ಮೇಲೆ ನಿಗಾ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ,  ಜಿಲ್ಲೆಗೆ ವಿದೇಶದಿಂದ ಇದುವರೆಗೆ ೧೩೪ ಜನರು ಆಗಮಿಸಿದ್ದು, ಅದರಲ್ಲಿ ಮೂರು ಜನರು ೨೮ ದಿನಗಳ ಕ್ವಾರಂಟೈನ್(ಗೃಹ ನಿಗಾ) ಅವಧಿ ಪೂರ್ಣಗೊಳಿಸಿದ್ದಾರೆ. ಯಾವುದೇ ಪ್ರಕರಣದಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು ೧೧೮ ಜನರನ್ನು ಅವರವರ ಮನೆಯಲ್ಲಿಯೇ ನಿಗಾದಲ್ಲಿರಿಸಲಾಗಿದೆ. ೧೭ ಜನರು ೧೪ ದಿನಗಳ ಕ್ವಾರಂಟೈನ್ ಅವಧಿಯನ್ನು ಈಗಾಗಲೇ …

Read More »

ಬೆಳಗಾವಿಯಲ್ಲಿ ಕರೋನಾ ವದಂತಿ ಹರಡಿಸಿದ ಯುವಕನ ಅರೆಸ್ಟ್….

ಬೆಳಗಾವಿ- ಎಂ ಈ ಎಸ್ ನಾಯಕ ಸೂರಜ ಕಣಬರಕರ ಅವರಿಗೆ ಕರೋನಾ ವೈರಸ್ ತಗುಲಿದೆ,ಆತನನ್ನು ಕೆ. ಎಲ್ ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ಸುಳ್ಳು ವದಂತಿ ಹರಡಿಸಿದ ಯುವಕನನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ . ಈ ವದಂತಿ ಹರಡಿಸಿದ ಯುವಕ,ಬೇರೆ ಯಾರೂ ಅಲ್ಲ ,ಸೂರಜ ಕಣಬರಕರ ಅವರ ಚಿಕ್ಕಪ್ಪನ ಮಗ,ಮೇಘನ್ ಅಶೋಕ ಕಣಬರಕರ ಎಂಬುದು ವಿಶೇಷ ಈತ ಎಲ್ಲ ವ್ಯಾಟ್ಸಪ್ ಗ್ರೂಪ್ ಗಳಲ್ಲಿ ,ಎಂಈಎಸ್ ನಾಯಕ …

Read More »