Breaking News

Breaking News

ಬೆಳಗಾವಿ ಜಾಹಿರಾತು ಫಲಕಗಳಲ್ಲಿ ಕನ್ನಡ ರಾರಾಜಿಸಲಿ….ಕರವೇ ಒತ್ತಾಯ

ಬೆಳಗಾವಿ : ನಗರದಲ್ಲಿ ಅಳವಡಿಸಿದ ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಕನ್ನಡ ಭಾಷೆಯನ್ನು ರಾಜ್ಯ,ಆಡಳಿತ ಭಾಷೆಯಾಗಿ ಪ್ರದಾನವಾಗಿ ಬಳಸಬೇಕೆಂದು ಸ್ಪಷ್ಟ ಆದೇಶವಿದ್ದರೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕೆಲ ಜಾಹೀರಾತು ಫಲಕಗಳು, ಹೋರ್ಡಿಂಗಗಳು, ಅಂಗಡಿ ಮುಗಟ್ಟುಗಳು, ಶಾಲಾ ಕಾಲೇಜು ಸೇರಿದಂತೆ ರಾಜಕಾರಣಿಗಳ ಶುಭಾಷಯ ಕಟೌಟಗಳಲ್ಲಿ ಕನ್ನಡವನ್ನು ಬಳಸದೆ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿವೆ. ಮಹಾನಗರ …

Read More »

ಒಳಚರಂಡಿ,ವಸತಿ ಸಮಸ್ಯೆ ನಿವಾರಣೆಗೆ ಅಭಯ ಪಾಟೀಲರಿಂದ ಸಚಿವ ಯುಟಿ ಖಾದರ್ ಗೆ ಮನವಿ

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಒಳಚರಂಡಿ ಹಾಗು ವಸತಿ ಸಮಸ್ಯೆ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಅಭಯ ಪಾಟೀಲ ನಗರಾಭಿವೃದ್ಧಿ ಹಾಗು ವಸತಿ ಸಚಿವ ಯುಟಿ ಖಾದರ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡರು ವಿಧಾನ ಸಭೆಯಲ್ಲಿ ಸಚಿವ ಯುಟಿ ಖಾದರ್ ಅವರನ್ನು ಭೇಟಿಯಾದ ಶಾಸಕ ಅಭಯ ಪಾಟೀಲ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಒಳಚರಂಡಿ ಸಮಸ್ಯೆಯಿಂದ ಇಲ್ಲಿಯ ಜನ ಪರದಾಡುತ್ತಿದ್ದಾರೆ ದಕ್ಷಿಣ ಕ್ಷೇತ್ರದಲ್ಲಿ ಒಳಚರಂಡಿ ನಿರ್ಮಾಣ ಮಾಡಬೇಕು ಅದಕ್ಕಾಗಿ …

Read More »

ಕೀಲಿ ಮುರಿಯುತ್ತಿದ್ದ ಕಳ್ಳನಿಗೆ ಬೇಡಿ ಹಾಕಿದ ಕ್ಯಾಂಪ್ ಪೋಲೀಸರು

ಬೆಳಗಾವಿ- ನಗರದಲ್ಲಿ ಕೀಲಿ ಹಾಕಿದ ಮನೆಗಳ ಬೇಲಿ ಹಾರಿ ಕಳ್ಳತನ ಮಾಡುತ್ತಿದ್ದ ಕಳ್ಳನಿಗೆ ಕ್ಯಾಂಪ್ ಪೊಲೀಸರು ಕಾರ್ಯಾಚರಣೆ ನಡೆಸಿ ಕೊನೆಗೂ ಬೇಡಿ ಹಾಕಿ ಜೈಲಿಗೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಬೆಳಗಾವಿಯ ಕ್ಯಾಂಪ್ ಪೊಲೀಸರಿಂದ‌ ಆರೋಪಿ ಬಂಧನವಾಗಿದ್ದು ಯಾರು ಇಲ್ಲದ ಮನೆಗಳ ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದ ಖದೀಮ ನಾಜಿಮ್ ಮುಲ್ಲಾ‌ ಬೆಳಗಾವಿಯ ಕೊತವಾಲ್‌ ಗಲ್ಲಿ ನಿವಾಸಿಯಾಗಿದ್ದು ಇತನ ಮೇಲೆ ಮನೆಗಳ್ಳತನದ ಅಗಣಿತ ಪ್ರಕರಣಗಳಿವೆ 4.50ಲಕ್ಷ ಮೌಲ್ಯದ 15ತೊಲೆ ಚಿನ್ನಾಭರಣ ಜಪ್ತಿ ಮಾಡಲಾಗಿದೆ …

Read More »

ತುಕ್ಕಾನಟ್ಟಿ ಗ್ರಾಮದ ಆಶ್ರಯನೆಗಳ ಹಂಚಿಕೆಯಲ್ಲಿ ಗೋಲ್ ಮಾಲ್ ಗ್ರಾಮಸ್ಥರ ಆರೋಪ

ಬೆಳಗಾವಿ ತುಕ್ಕಾನಟ್ಟಿ ಗ್ರಾಮದಲ್ಲಿ ಜೂ.2ರಂದು ನಡೆದ ತುರ್ತು ಗ್ರಾಮ ಸಭೆಯಲ್ಲಿ ಆಯ್ಕೆಯಾದ ಆಶ್ರಯ ಮನೆಗಳನ್ನು ತಡೆಹಿಡಿಯುವಂತೆ ಆಗ್ರಹಿಸಿ ಬುಧವಾರ ಇಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ತುಕ್ಕಾನಟ್ಟಿ ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಆಶ್ರಯ‌ಮನೆಗಳ ಆಯ್ಕೆಯಲ್ಲಿ ತಮಗೆ ಬೇಕಾದ ವ್ಯಕ್ತಿಗಳಿಗೆ ಮನೆ ಹಂಚಿಕೆ ಮಾಡಿದ್ದಾರೆ. ಬಡತನದ ರೇಖೆಗಿಂತ ಕೆಳಗಿನ ಕುಟುಂಬದವರು ನಾಲ್ಕೈದು ಸಲ ಅರ್ಜಿ ಸಲ್ಲಿಸಿದರೂ ಮನೆ ಹಂಚಿಕೆ ಮಾಡದಿರುವುದು ಹಲವು ಅನುಮಾನಲ್ಕೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಢೇಂಘಿ ಜ್ವರ …ಸಭೆ ನಡೆಸಿದ ಡಿಸಿ ಮುಂಜಾಗ್ರತಾ ಕ್ರಮಕ್ಕೆ ಖಡಕ್ ಸೂಚನೆ

ಬೆಳಗಾವಿ- ಡೇಂಘೀ ಮಾರಣಾಂತಿಕವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ (ಜು.03) ಹಮ್ಮಿಕೊಂಡಿದ್ದ ಡೇಂಘೀ ಮತ್ತು ಚಿಕೂನಗುನ್ಯ ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು …

Read More »

ಬೆಳಗಾವಿ ನಗರದಲ್ಲಿ ಮದ್ಯರಾತ್ರಿ ಎರಡು ಬೈಕ್ ಗಳಿಗೆ ಬೆಂಕಿ ಹಚ್ವಿದ ಕಿಡಗೇಡಿಗಳು

ಬೆಳಗಾವಿ- ನಗರದ ಕಾಮತ ಗಲ್ಲಿಯಲ್ಲಿ ಕಿಡಗೇಡಿಗಳು ಮನೆಯ ಎದುರು ನಿಲ್ಲಿಸಲಾದ ಎರಡು ಬೈಕ್ ಗಳಿಗೆ ಬೆಂಕಿ ಹಚ್ವಿ ಪರಾರಿಯಾದ ಘಡನೆ ತಡರಾತ್ರಿ ನಡೆದಿದೆ ಒಂದು ಆ್ಯಕ್ಟೀವ್ ಹೋಂಡಾ ಮತ್ತು ಪ್ಯಾಶನ್ ಪ್ರೋ ಬೈಕಗಳಿಗೆ ಮದ್ಯರಾತ್ರಿ ಕಿಡಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ವಿ ಪರಾರಿಯಾಗಿದ್ದು ಎರಡು ಬೈಕ್ ಗಳು ಕಿಡಗೇಡಿಗಳ ಬೆಂಕಿಗಾಹುತಿಯಾಗಿವೆ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ಸಿಸಿ ಟಿ ವ್ಹಿ ಪೋಟೇಜ್ ಪರಶೀಲಿಸಿ ಕಿಡಗೇಡಿಗಳ ಪತ್ತೆಗೆ ಜಾಲ ಬೀಸಿದ್ದಾರೆ …

Read More »

ಪಗಾರ್ ಬರಲಿಲ್ಲ ಅಂತ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ವಾರ್ಡ್ ಬಾಯ್

ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವಾರ್ಡ ಬಾಯ್ ಕೆಲಸ ಮಾಡುತ್ತಿದ್ದ ೨೨ ವರ್ಷದ ಯವಕ ಹಲವಾರು ತಿಂಗಳುಗಳಿಂದ ವೇತನ ಸಿಗದೇ ಇರುವದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬಾಕ್ಸೈಟ್ ರಸ್ತೆಯ ನಿವಾಸಿ ರಾಕೇಶ ಕಾಂಬಳೆ ಎಂಬಾತ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವಾರ್ಡ ಬಾಯ್ ಕೆಲಸ ಮಾಡುತ್ತಿದ್ದ ಕಳೆದ ಒಂಬತ್ತು ತಿಂಗಳುಗಳಿಂದ ಆತನ ವೇತನ ಪಾವತಿ ಆಗದೇ ಇರುವದರಿಂದ ನಿನ್ನೆ ಮದ್ಯರಾತ್ರಿ ವಿಷ ಕುಡಿದು ಆತ್ಮ …

Read More »

ಕಬ್ಬಿನ ಬಾಕಿ ಕೊಡದಿದ್ದರೆ ದಯಾಮರಣ ಕೊಡಿ ,ರೈತರ ಅರ್ಜಿ

ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ದೆವಲತ್ತಿ ಗ್ರಾಮದ ರೈತರ ಕುಟುಂಬಗಳು ದಯಾಮರಣಕ್ಕೆ ಅರ್ಜಿ ಬರೆದಿದ್ದಾರೆ, ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಒಡೆತನದ ಹೀರೆನಂದಿ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ 2014 ರಲ್ಲಿ ರೈತರು ಕಬ್ಬನ್ನು ಕೊಟ್ಟಿದ್ದಾರೆ, ರಮೇಶ ಅಕ್ಕಿ, ಬಾಡಿಗೆ 50,000, ಪುಂಡಲಿಕ ಇಟಗಿ 1 ಲಕ್ಷ ಬಾಡಿಗೆ, ಪುಂಡಲಿಕ ಬರಬುಕರ ೫ಲಕ್ಷ ಹಣ ರೈತರಿಗೆ ಬಾಕಿ ಬರಬೇಕಿತ್ತು, ಕಬ್ಬಿನ ಬಾಕಿ ಬಿಲ್, ಕಟಾವು ಮಾಡಿದ ಕರ್ಚು, ಲಾರಿ‌ಬಾಡಿಗೆ‌ಸೇದಂತೆ ಸುಮಾರು …

Read More »

ಬಸವಣ್ಣ ಹೆಸರಿನಲ್ಲಿ ಕೆಲ ಮಠಾಧೀಶರು ವೀರಶೈವ- ಲಿಂಗಾಯತ ಧರ್ಮ ಒಡೆಯುತ್ತಿದ್ದಾರೆ

ಬೆಳಗಾವಿ: ವಿಶ್ವಗುರು ಬಸವಣ್ಣ ತಮ್ಮ ವಚನಗಳ ಮೂಲಕ ಸಮಾನತೆ ಸಂದೇಶ ಸಾರಿದ್ದಾರೆ. ಆದರೆ ಬಸವಣ್ಣ ಹೆಸರಿನಲ್ಲಿ ಕೆಲ ಮಠಾಧೀಶರು ವೀರಶೈವ- ಲಿಂಗಾಯತ ಧರ್ಮ ಒಡೆಯುತ್ತಿದ್ದಾರೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆರೋಪಿಸಿದರು. ಬೆಳಗಾವಿಯ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದಲ್ಲಿಂದು ಹಮ್ಮಿಕೊಂಡಿದ್ದ ಮಾಸಿಕ ಸುವಿಚಾರ ಚಿಂತನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವೀರಶೈವ – ಲಿಂಗಾಯತ ಎರಡೂ ಒಂದೇ ಆಗಿದೆ. ಆದರೆ, ಇವು ಬೇರೆ …

Read More »

GST ಅಂದ್ರೆ ಒಬ್ಬನೇ ಗಂಡ ಒಬ್ಬಳೇ…ಹೆಂಡ್ತಿ ಇದ್ಹಂಗೆ- ಪ್ರಭಾಕರ ಕೋರೆ

ಬೆಳಗಾವಿ- ಜಿ ಎಸ್ ಟಿ ಟ್ಯಾಕ್ಸ ಅಂದ್ರೆ ಹಲವಾರು ಜನ ಹಲವಾರು ರೀತಿಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಆದ್ರೆ ಈ ವಿಷಯದಲ್ಲಿ ಕನ್ಫ್ಯುಸ್ ಬೇಡ ಜಿ ಎಸ್ ಟಿ ಅಂದ್ರೆ ಒಬ್ಬನೇ ಗಂಡ ಒಬ್ಬಳೇ ಹೆಂಡ್ತಿ ಇದ್ಹಂಗೆ ಎಂದು ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು ನಗರದಲ್ಲಿ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಆಯೋಜಿಸಿದ ಜಿ ಎಸ್ ಟಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು …

Read More »