ಬೆಳಗಾವಿ-ಕೇಂದ್ರದ ವಾಣಿಜ್ಯ ಹಾಗು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾನ್ ಬೆಳಗಾವಿಯಲ್ಲಿ ನಡೆದ ಬಿಜೆಪಿಯ ತಿರಂಗಾ ರಾಲಿಯಲ್ಲಿ ಭಾಗವಹಿಸಿ ಬೆಳಗಾವಿ ಜನತೆಗೆ ಬಂಪರ್ ಕೊಡುಗೆ ನೀಡಿದ್ದಾರೆ ಬೆಳಗಾವಿ ನಗರದಲ್ಲಿ ಫಾರೇನ್ ಟ್ರೇಡ್ ಮಹಾನಿರ್ದೇಶಕರ ಕಚೇರಿಯನ್ನು ಮಂಜೂರು ಮಾಡಿರುವದಾಗಿ ಘೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ರಾಜ್ಯ ಸರಕಾರ ಕಚೇರಿ ನಿರ್ಮಿಸಲು ಯಾವಾಗ ಬೇಕಾದರೂ ಭೂಮಿ ಕೊಡಲಿ ಅಲ್ಲಿಯವರೆಗೆ ಕಾಯದೇ ಭಾಡಿಗೆ ಕಟ್ಟಡದಲ್ಲಿ ಕೂಡಲೇ ಕಚೇರಿಯನ್ನು ಆರಂಭ ಮಾಡುವದಾಗಿ ಘೋಷಿಸಿದ್ದಾರೆ
ಬೆಳಗಾವಿ ನಗರ ಫೌಂಡ್ರಿ ಹಾಗು ಎಲ್ಲ ಬಗೆಯ ಉದ್ಯಮಕ್ಕೆ ಹೆಸರಾಗಿದ್ದು ಈ ಕಚೇರಿ ಆರಂಭವಾಗುವದರಿಂದ ಉದ್ಯಮಗಳ ಬೆಳವನಿಗೆಗೆ ಸಹಾಯವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ
ಬೆಳಗಾವಿಯ ಬಿಜೆಪಿ ನಾಯಕರು ಹಲವಾರು ದಿನಗಳಿಂದ ಕಚೇರಿ ಮಂಜೂರು ಮಾಡುವಂತೆ ಒತ್ತಾಯ ಮಾಡಿದ್ದರಿಂದ ಬೆಳಗಾವಿಗೆ ಬಂದು ಕಚೇರಿ ಘೋಷಣೆ ಮಾಡಿರುವದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು ಈ ಸಂದರ್ದಭಲ್ಲಿ ಸಂಸದ ಸುರೇಶ ಅಂಗಡಿ ಉಪಸ್ಥಿತರಿದ್ದರು
