ದಿಲ್ಲಿ ರಾಜಕೀಯ ಇಲ್ಲಿ ಮಾಡಬೇಡಿ-ಶ್ಯಾಂ ಘಾಟಗೆ….ವಿರುದ್ಧ ಡಿಕೆಶಿ…ಡಿಶ್ಯುಂ
ಬೆಳಗಾವಿ-ಬೆಳಗಾಯಿಯ ಸಂಬ್ರಾ ವಿಮಾನ ನಿಲ್ದಾಣದಲ್ಲಿ ಪಾವರ್ ಮಿನಿಸ್ಟರ್ ಡಿಕೆ ಶಿವಕುಮಾರ ಅವರು ಬೆಳಗಾವಿ ಜಿಲ್ಲೆ ಕಾರ್ಯಕತ್ರ ಜೊತೆ ಸಮಾಲೋಚಣೆ ನಡೆಸಿದರು ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಿರ್ಮಾಣ ಮಾಡಲಾಗುತ್ತರುವ ಕಾಮಗ್ರೆಸ್ ಕಚೇರಿ ಕಟ್ಟಡ ಕಾಮಗಾರಿಯ ಪ್ರಗತಿಯ ಕುರಿತು ಜಿಲ್ಲಾದ್ಯಕ್ಷ ವಿನಯ ನಾವಲಗಟ್ಟಿ ಅವರ ಜತೆಗೆ ಚರ್ಚಿಸಿದರು
ಕಟ್ಟಢ ನಿರ್ಮಾಣಕ್ಕೆ ಯಾವ ಯಾವ ಕಾಮಗ್ರೆಸ್ ಮುಖಂಡರು ಎಷ್ಟು ದೇಣಿಗೆ ನೀಡಿದ್ದಾರೆ ಎಂದು ವಿಚಾರಿಸಿದಾಗ ವಿನಯ ನಾವಲಗಟ್ಟಿ ಅವರು ಶಿವಾನಂದ ಡೋಣಿ ಅವರು ಒಂದು ಲಕ್ಷ ಶಂಕರ ಮುನವಳ್ಳಿ ಎರಡು ಲಕ್ಷ ಕೊಟ್ಟಿದ್ದಾರೆ ಸರ್ ಎಂದು ಹೇಳುತ್ತಿರುವಾಗ ಪಕ್ಕದಲ್ಲಿ ಕುಳಿತುಕೊಂಡಿದ್ದ ಮಾಜಿ ಶಾಸಕ ಶ್ಯಾಂ ಘಾಟಗೆ ಎಷ್ಟು ಕೊಟ್ಟಿದ್ದಾರೆ ಎಂದು ಡಿಕೆಶಿ ವಿಚಾರಿಸಿದಾಗ ವಿನಯ ನಾವಲಗಟ್ಟಿ ನಿರುತ್ತರರಾದರು ಏನ್ರೀ ಘಾಟಗೆ ಅವರೇ ಕಾಂಗ್ರೆಸ್ ಕಚೇರಿ ಕಟ್ಟಡಕ್ಕೆ ಎಷ್ಟು ದೇಣಿಗೆ ಕೊಟ್ಟಿದ್ದೀರಾ ಸ್ವತಹ ಡಿಕೆಶಿ ವಿಚಾರಿಸಿದಾಗ ಘಾಟಗೆ ಸುಮ್ಮನಾದಾಗ ಮಂತ್ರಿ ಡಿಕೆಶಿ ಶ್ಯಾಂ ಘಾಟಗೆ ವಿರುದ್ಧ ಗರಂ ಆದರು
ನೀವು ನಾಲ್ಕು ಬಾರಿ ಪಕ್ಷದ ಟಿಕೇಟ್ ಪಡೆದು ಎಂ ಎಲ್ ಎ ಆಗಿದ್ದೀರಾ ಪಕ್ಷದ ಕಚೇರಿಗೆ ಪಕ್ಷದಿಂದ ಯಾವೂದೇ ಲಾಭ ಪಡೆಯದ ಕಾರ್ಯಕರ್ತರು ದೇಣಿಗೇ ನೀಡಿದ್ದಾರೆ ನಿಮಗೇನಾಗಿದೆ ಸ್ವತಹ ನಾನೇ ನಿಮ್ಮ ಜಿಲ್ಲೆಯ ಕಚೇರಿ ಕಟ್ಟಡಕ್ಕೆ ಇಪತ್ತು ಲಕ್ಷ ಕೊಟ್ಟಿದ್ದೇನೆ ಎಂದು ಶ್ಯಾಂ ಘಾಟಗೆ ಅವರನ್ನು ತರಾಟೆಗೆ ತೆಗೆದುಕೊಂಡ
ನಂತರ ಸಚಿವ ಡಿಕೆ ಶಿವಕುಮಾರ ಅದ್ಯಕ್ಷ ನಾವಲಗಟ್ಟಿ ಅವರೇ ಪಕ್ಷ ಸಹಾಯ ಪಡೆದು ನಾಲ್ಕು ಬಾರಿ ಶಾಸಕರಾದರೂ ಇವರಿಂದ ಪಕ್ಷಕ್ಕೆ ಯಾವೂದೇ ಲಾಭ ಆಗದಿದ್ದರೆ ಏನು ಪ್ರಯೋಜನ ಎಂದಾಗ ಶ್ಯಾಂ ಘಾಟಗೆ ಮದ್ಯಪ್ರವೇಶಿಸಿ ಇಲ್ಲ ಸರ್ ನಾನು ಚಿಕ್ಕೋಡಿಯಲ್ಲಿ ಪಕ್ಷದ ಕಚೇರಿಗಾಗಿ ಜಾಗ ನೋಡಿದ್ದೇನೆ ಸರ್ ಎಂದಾಗ ಡಿಕೆಶಿ ಮತ್ತೇ ಗರಂ ಆದರು ರೀ ದಿಲ್ಲಿ ರಾಜಕೀಯ ಇಲ್ಲಿ ಮಾಡಬೇಡಿ ಜಿಲ್ಲಾ ಕಚೇರಿಗೆ ಏನು ಕೊಡದ ನೀವು ಇಲ್ಲದ ವಿಷಯ ಹೇಳಬೇಡಿ ಎಂದು ಮತ್ತೆ ತರಾಟೆಗೆ ತೆಗೆದುಕೊಂಡಾಗ ಘಾಟಗೆ ಸುಮ್ಮನಾದರು
ಅಲ್ಲಿಯೇ ಇದ್ದ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಏ ಶ್ಯಾಂ ಎನ್ರ ಹೇಳಬೇಡ ಇನ್ನೂ ಜಿಲ್ಲಾ ಒಡೆದಿಲ್ಲ ಈಗ ಆ ವಿಷಯ ಹೇಳಬೇಡ ನೀ ದುಡ್ಡು ಕೊಡದಿದ್ರ ಅಷ್ಟ ಐತಿ ಎಲ್ಲಾ ನಾನೇ ಖರ್ಚಿ ಮಾಡಿ ಕಟ್ಟಡ ಕಟ್ತೇನೆ ಎಂದು ಹೇಳಿ ಈ ವಿಷಯವನ್ನು ಅಲ್ಲಿಯೇ ಮುಗಿಸಿದರು
Check Also
ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?
ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …