ಯಮಕನಮರ್ಡಿ-ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಕುರಿತಾದ ಹೇಳಿಕೆ ನೀಡಿದ ಬೆನ್ನಲ್ಲಿಯೇ ಯಮಕನಮರ್ಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ನೇತ್ರತ್ವದಲ್ಲಿ ಯಮಕನಮರ್ಡಿಯಲ್ಲೇ ನಾನು ಹಿಂದೂ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿದ್ದ ಚಕ್ರವರ್ತಿ ಸೂಲಿಬೆಲೆ ಅವರು ಸತೀಶ್ ಜಾರಕಿಹೊಳಿ ಅವರಿಗೆ ಸಾಹುಕಾರರೇ ನೇರವಾಗಿ ನನ್ನೊಂದಿಗೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ರು.
ನಾನು ಹಿಂದೂ ಸಮಾವೇಶದಲ್ಲಿ ಹಿಂದೂ ಧರ್ಮದ ಉರಿತು ಚಕ್ರವರ್ತಿ ಸೂಲಿಬೆಲೆ ಅವರು ಭಾಷಣ ಮಾಡಿದ್ರು.
ಹಿಂದೂ ಎನ್ನುವುದು ಅಶ್ಲೀಲ ಅಂತ ಹೇಳಿದ್ರೆ ಅವರಿಗೆ ನಮ್ಮ ಧರ್ಮದ ಕುರಿತಂತೆ ಸೂಕ್ತವಾದ ಉತ್ತರ ಕೊಡಲು ಈ ಸಮಾವೇಶ ಆಯೋಜಿಸಲಾಗಿದೆ.
ನನ್ನ ವಯಕ್ತಿಕ ಜಾತಿಯನ್ನು ಬೈದರೇ ನಾನು ಸುಮ್ಮನಿರಬಹುದು.ಆದ್ರೆ ನನ್ನ ತಾಯಿಯನ್ನು, ಧರ್ಮವನ್ನು ಬೈದರೇ ನಾನು ಸುಮ್ಮನಿರುವುದಿಲ್ಲ.
ನಾನು ಮುಖಾಮುಖಿಯಾಗಿ ಹಿಂದೂ ಧರ್ಮದಕುರಿತಂತೆ ಮಾತನಾಡಲು ನಾನು ತಯಾರಿದ್ದೇನೆ. ಎಂದು ಚಕ್ರವರ್ತಿ ಸೂಲಿಬೆಲೆ ಅವರು ಓಪನ್ ಚಾಲೇಂಜ್ ಮಾಡಿದ್ರು.
ಸಾಹುಕಾರರೇ ನೇರವಾಗಿ ನನ್ನೊಂದಿಗೆ ಚರ್ಚೆಗೆ ಬನ್ನಿ ಎಂದು ಸತೀಶ್ ಜಾರಕಿಹೊಳಿಗೆ ಸವಾಲ್ ಹಾಕಿದ ಸೂಲಿಬೆಲೆ.
ನಾನು ಯಾವ ಡಿಕ್ಷ್ಯನರೀ ನೋಡಿ ಮಾತನಾಡುವುದಿಲ್ಲ.
ಬದಲಾಗಿ ಪುಸ್ತಕಗಳನ್ನು ಇಟ್ಟುಕೊಂಡು ಚರ್ಚೆಗೆ ಬರ್ತಿನಿ.ಸುಪ್ರೀಂ ಕೋರ್ಟ್ ಹೇಳುತ್ತೆ ಹಿಂದೂ ಅಂದ್ರೆ ಬದುಕುವ ಶೈಲಿ ಎಂದು ಚಕ್ರವರ್ತಿ ಹೇಳಿದ್ರು.
ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಸಾಬ್ ಜೊಲ್ಲೆ ಹಾಗೂ ಹಲವು ಬಿಜೆಪಿ ಜಿಲ್ಲಾ ಅದ್ಯಕ್ಷ ಸಂಜಯ ಪಾಟೀಲ ಮತ್ತು ಬಿಜೆಪಿ ಮುಖಂಡರು ಬಾಗಿಯಾಗಿದ್ರುವೇದಿಕೆಯಲ್ಲಿ ಮಠಾಧೀಶರಾದ ಅಭಿನವ ಮಂಜುನಾಥ ಮಹಾಸ್ವಾಮೀಜಿಗಳು, ಹಾಲಮಹಾಸ್ವಾಮೀಜಿಗಳ ಸಾನಿಧ್ಯ ವಹಿಸಿದ್ದರು. ಸತೀಶ್ ಜಾರಕಿಹೋಳಿ ಸ್ವ ಕ್ಷೇತ್ರದಲ್ಲೆ ಜಾರಕಿಹೋಳಿ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು.