ಬೆಳಗಾವಿ: ಜಾತ್ರೆಯಲ್ಲಿ ಹರಕೆ ತೀರಿಸಲು ಭಕ್ತರು ಕಿಚ್ವು ಹಾಯುವದು ಗ್ರಾಮೀಣ ಪ್ರದೇಶದ ಸಂಪ್ರದಾಯವಾಗಿದೆ ಆದರೆ ಕೆಂಡ ಹಾಯುವಾಗ ಕೊಂಡದಲ್ಲಿ ಬಿದ್ದು ೧೨ ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಚಂದನ ಹೊಸೂರಿನಲ್ಲಿ ನಡೆದಿದೆ
ಬೆಳಗಾವಿ ತಾಲೂಕಿನ ಚಂದನ ಹೋಸೂರು ಗ್ರಾಮದ ಕಲ್ಮೇಶ್ವರ ಜಾತ್ರೆಯಲ್ಲಿ ಭಕ್ತರು ಕೆಂಡ ಹಾಯುವಾಗ ತಡರಾತ್ರಿ ಈ ಘಟನೆ ಸಂಭವಿಸಿದೆ . ಗಾಯಾಳು ಬಾಲಕ ಚಂದ್ರಶೇಖರ್ ಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ.ಪಡೆಯುತ್ತಿದ್ದಾನೆ
ತಡರಾತ್ರಿ ಸಾವಿರಾರು ಜನ ಭಕ್ತರು ಕೆಂಡ ಹಾಯ್ದು ಹರಕೆ ತೀರಿಸುವ ಸಂಧರ್ಭದಲ್ಲಿ ಬಾಲಕ ಆಯತಪ್ಪಿ ಕೆಂಡದಲ್ಲಿ ಬಿದ್ದಿದ್ದಾನೆ ಬಾಲಕನ ಕೈ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ