ಭಾರತೀಯ ವಿಜ್ಞಾನಿಗಳ ಪರಿಶ್ರಮ ನಾಳೆ ಸಂಜೆ ಸಾರ್ಥಕವಾಗಲಿ,ನಮ್ಮ ವಿಜ್ಞಾನಿಗಳು ನಮ್ಮ ಹೆಮ್ಮೆ,ಚಂದ್ರಯಾನ 3 ಯಶಸ್ವಿಯಾಗಲಿ ಭಾರತದ ಕೀರ್ತಿ ಜಾಗತಿಕವಾಗಿ ಬೆಳಗಲಿ
ಜೈ ಹಿಂದ್….
ಭಾರತ್ ಮಾತಾ ಕೀ ಜೈ…
ಇಂದು ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ 3 ಲ್ಯಾಂಡಿಂಗ್ ಆಗಲಿದೆ. ಸುಮಾರು 5 ಗಂಟೆ 45 ನಿಮಿಷಕ್ಕೆ ನೌಕಾಯಾನದ ವೇಗವನ್ನು ಕಂಟ್ರೋಲ್ ಮಾಡುವ ಪ್ರಕ್ರಿಯೆ ಶುರುವಾಗಲಿದೆ ಈ ಹದಿನೈದು ನಿಮಿಷ ಭಾರತೀಯ ವಿಜ್ಞಾನಿಗಳಿಗೆ ಅಗ್ನಿ ಪರೀಕ್ಷೆ 6 ಗಂಟೆ 4 ನಿಮಿಷಕ್ಕೆ ಸಮಯಕ್ಕೆ ಸರಿಯಾಗಿ ಚಂದಿರನ ಅಂಗಳದಲ್ಲಿ ನಮ್ಮ ಹೆಮ್ಮೆಯ ತ್ರಿವರ್ಣ ತಿರಂಗಾ ಹಾರಾಡಲಿದೆ.ಭಾರತದ ಕೀರ್ತಿ ಚಂದಿರನ ಅಂಗಳದಲ್ಲೂ ಬೆಳಗಲಿದೆ. ಚಂದ್ರನ ಅಂಗಳದಲ್ಲಿ ಭಾರತ ಹೊಸ ಇತಿಹಾಸ ನಿರ್ಮಿಸುವದರಲ್ಲಿ ಅನುಮಾನವೇ ಇಲ್ಲ.
ಬೆಂಗಳೂರು: ಚಂದ್ರಯಾನ-3 ಮಿಷನ್ ನಿಗದಿತ ಹಂತದಲ್ಲಿದೆ ಎಂದು ಇಸ್ರೋ ಮಂಗಳವಾರ ತಿಳಿಸಿದೆ, ಚಂದ್ರನ ಮೇಲ್ಮೈಯಲ್ಲಿ ತನ್ನ ಲ್ಯಾಂಡರ್‌ನ ನಿಗದಿತ ಸ್ಪರ್ಶದ ಸಮಯವನ್ನು ಅಂದಾಜಿಸಿರುವ ಇಸ್ರೊ ಅದರ ಬಗ್ಗೆ ಮಾಹಿತಿ ನೀಡಿದೆ.
ಬೆಂಗಳೂರಿನ ಇಸ್ರೊ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ನಲ್ಲಿರುವ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ (MOX) ಉತ್ಸಾಹದಿಂದ ಯಶಸ್ಸಿಗೆ ಕಾಯುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ಮಿಷನ್ ವೇಳಾಪಟ್ಟಿಯಲ್ಲಿದೆ. ವ್ಯವಸ್ಥೆಗಳು ನಿಯಮಿತ ತಪಾಸಣೆಗೆ ಒಳಗಾಗುತ್ತಿವೆ. ಸುಗಮ ನೌಕಾಯಾನ ಮುಂದುವರಿಯುತ್ತಿದೆ ಎಂದು ಇಸ್ರೋ ತಿಳಿಸಿದೆ
ಮಾಕ್ಸ್/ಇಸ್ಟ್ರಾಕ್ ನಲ್ಲಿ ಲ್ಯಾಂಡಿಂಗ್ ನ ನೇರ ಪ್ರಸಾರವು ನಾಳೆ ಬುಧವಾರ ಸಂಜೆ 5.20 ಕ್ಕೆ ಪ್ರಾರಂಭವಾಗುತ್ತದೆ, ಸಂಜೆ 6.04 ರ ಸುಮಾರಿಗೆ ದಕ್ಷಿಣ ಧ್ರುವ ಪ್ರದೇಶದ ಬಳಿ ರೋವರ್‌ನೊಂದಿಗೆ ಲ್ಯಾಂಡರ್‌ನ ನಿಗದಿತ ಸ್ಪರ್ಶವಾಗಲಿದೆ.