Breaking News

ಹೆಬ್ಬಾಳಕರ ಸಹೋದರ,ಚನ್ನರಾಜ್ ಗೆ ಬಹುತೇಕ,ಕಾಂಗ್ರೆಸ್ ಟಿಕೆಟ್ ಫೈನಲ್….???

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ,ಕಾಂಗ್ರೆಸ್ ಪಕ್ಷದ ವಿದ್ಯಮಾನ,ಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಸಿಗೋದು ಬಹುತೇಕ ಖಚಿತವಾಗಿದೆ.

ಚನ್ನರಾಜ್ ಹಟ್ಟಿಹೊಳಿ ಅವರ ಅಭುಮಾನಿಗಳು ನಡೆಸಿರುವ ಸೋಸಿಯಲ್ ಮಿಡಿಯಾ ಅಭಿಯಾನ,ನಿನ್ನೆ ಚನ್ನರಾಜ ಹಟ್ಟಿಹೊಳಿ ಅವರ ಜನ್ಮದಿನದಂದು ಎಲ್ಲೆಡೆ ರಾರಾಜಿಸಿದ ಬ್ಯಾನರ್ ಗಳು,ಹಾಗೂ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಚನ್ನರಾಜ ಹಟ್ಟಿಹೊಳಿ ಅವರೇ ಕಾಂಗ್ರೆಸ್ ಅಭ್ಯರ್ಥಿ ಆಗೋದು ನೂರಕ್ಕೆ ನೂರರಷ್ಟು ಖಚಿತ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಕಾಶ ಹುಕ್ಕೇರಿ ಅವರನ್ನು ಹೊರತು ಪಡಿಸಿದರೆ ಮತ್ಯಾರು ಅಷ್ಟೊಂದು ಇಂಟ್ರೆಸ್ಟ್ ತೋರಿಸಿಲ್ಲ,ಬಿಜೆಪಿಗೆ ಪೈಪೋಟಿ ನೀಡಲು ಚನ್ನರಾಜ್ ಅವರೇ ಸೂಕ್ತ ಎಂದು ಕಾಂಗ್ರೆಸ್ ನಾಯಕರು ಈಗಾಲೇ ನಿರ್ಧಾರ ತೆಗೆದುಕಡಿದ್ದು ಘೋಷಣೆ ಮಾಡುವದಷ್ಟೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷ,ಮಾಜಿ ಸಚಿವ,ಎಂ.ಬಿ ಪಾಟೀಲ ಅವರ ಅದ್ಯಕ್ಷತೆಯಲ್ಲಿ ಸಮೀತಿ ರಚಿಸಿಸಿದೆ,ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಮೀತಿಯ ಸಂಯೋಜಕರಾಗಿದ್ದು ,ಸಮೀತಿ ಮೊದಲ ಹಾಗು ಮಹತ್ವದ ಸಭೆ ಇಂದು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆಯಲಿದೆ.

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ,ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಲಿಂಗಾಯತ ಸಮುದಾಯಕ್ಕೆ ಸೇರಿದ ಪಾಪುಲರ್ ನಾಯಕರನ್ನೇ ಕಣಕ್ಕಿಳಿಸುವ ಸಾದ್ಯತೆಗಳೇ ಹೆಚ್ಚು,

ಇಂದು ಬೆಳಗಾವಿಯಲ್ಲಿ ನಡೆಯುವ ಕಾಂಗ್ರೆಸ್ ಅಣಬ್ಯರ್ಥಿಯ ಆಯ್ಕೆ ಸಮೀತಿಯ ಸಭೆಯಲ್ಲಿ ,ಬೆಳಗಾವಿ ಲೋಕಸಭಾ ಮತಕ್ಷೇತ್ರದ ,ಕಾಂಗ್ರೆಸ್ ಅಭ್ಯರ್ಥಿಯ ಘೋಷಣೆ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿಯವರು ,ಬಿಜೆಪಿ ಕುರಿತು ಪ್ರಶಂಸೆ ವ್ಯೆಕ್ತಪಡಿಸಿರುವದರಿಂದ,ಅವರು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದವರಾಗಿರುವದರಿಂದ,ಅವರಿಗೆ ಟಿಕೆಟ್ ಸಿಗೋದು ಡೌಟು ಎಂದು,ಹೇಳಲಾಗುತ್ತದೆ,

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *