ಬೆಳಗಾವಿ-ಹರ್ಷಾ ಶುಗರ್ಸ್ ಸ್ಥಾಪನೆ ಮಾಡುವಾಗ ಅಪೆಕ್ಸ್ ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದು ನಿಜ,ಆದ್ರೆ ಸಾಲದ ಕಂತುಗಳನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡಿದ್ದೇವೆ ಎಂದು ಹರ್ಷಾ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ.
ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಲಕ್ಷ್ಮೀ ಹೆಬ್ಬಾಳಕರ ಅವರು ಅಪೆಕ್ಸ್ ಬ್ಯಾಂಕಿನಿಂದ ಸಾಲ. ಪಡೆದಿರುವ ವಿಚಾರವನ್ನು ಮಾದ್ಯಮಗಳ ಎದುರು ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಚನ್ನರಾಜ್ ಸಾಲ ಪಡೆದಿದ್ದು ನಿಜ ಆದ್ರೆ ನಿಗದಿತ ಸಮಯದಲ್ಲಿ ಬಡ್ಡಿ ಸಮೇತ ಎಲ್ಲ ಕಂತುಗಳನ್ನು ಪಾವತಿ ಮಾಡಿದ್ದೇವೆ.ಯಾವುದೇ ಬ್ಯಾಂಕಿನಲ್ಲಿ ಕಂತುಗಳು ಬಾಕಿ ಉಳಿದಿಲ್ಲ.ಎಂದು ಚನ್ನರಾಜ್ ಹಟ್ಟಿಹೊಳಿ ಸ್ಪಷ್ಡ ಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ