ಚಿಕಲೆ ಜಲಪಾತದಲ್ಲಿ ಪ್ರವಾಸಿಗರಿಂದ ಹಣ ವಸೂಲಿ….!!!
ಬೆಳಗಾವಿ- ಯಾವುದೇ ಪ್ರವಾಸಿ ತಾಣ ಆಗಿರಲಿ, ಹತ್ತೋ ಇಪ್ಪತ್ತೋ ರೂಪಾಯಿ ಪ್ರವೇಶ ಶುಲ್ಕ ಪಡೆಯುವದನ್ನು ನಾವು ನೋಡಿದ್ದೇವೆ. ಐವತ್ತು ರೂಗಳವರೆಗೆ ಎಂಟ್ರಿ ಫೀಸ್ ಕೊಟ್ಟಿದ್ದೇವೆ.ಆದ್ರೆ ಜಾಂಬೋಟಿ ಬಳಿಯ ಚಿಕಲೆ ಪ್ರವಾಸಿರಿಂದ ಅರಣ್ಯ ಇಲಾಖೆಯ ಸಿಬ್ಬಂಧಿ ಪಡೆಯುತ್ತಿರುವ ಪ್ರವೇಶ ಶುಲ್ಕದ ಮೊತ್ತ ಕೇಳಿದ್ರೆ ಚಳಿ ಜ್ವರ ಬರುವದರಲ್ಲಿ ಸಂಶಯವೇ ಇಲ್ಲ.
ದೊಡ್ಡ ದೊಡ್ಡ ಬ್ರಾಂಡೇಡ್ ಕಂಪನಿಗಳು ತಮ್ಮ ಉತ್ಪನ್ನಗಳ ದರ ನಿಗದಿ ಮಾಡಿದಂತೆ,ಚಿಕಲೆ ಫಾಲ್ಸ್ ನಲ್ಲೂ ಪ್ರತಿಯೊಬ್ಬ ಪ್ರವಾಸಿಗರಿಂದ ಬರೊಬ್ಬರಿ 290 ರೂ ಎಂಟ್ರೀ ಫೀ ಪಡೆಯಲಾಗುತ್ತಿದೆ. ಎಂಟ್ರೀ ಕೊಟ್ಟವರಿಗೆ ಮಾತ್ರ ಚಿಕಲೆ ಫಾಲ್ಸ್ ನೋಡಲು ಅವಕಾಶ ನೀಡಲಾಗುತ್ತಿದೆ.
ಈ ಚಿಕಲೆ ಫಾಲ್ಸ್ ಇರೋದು ಜಾಂಬೋಟಿಯಿಂದ ಏಳೆಂಟು ಕಿ.ಮೀ ಅಂತರದಲ್ಲಿ,ಮಳೆಗಾಲ ಶುರುವಾದ್ರೆ ಸಾಕು,ಈ ಫಾಲ್ಸ್ ನೋಡಲು ಸಾವಿರಾರು ಪ್ರವಾಸಿಗರು ದಿನನಿತ್ಯ ಚಿಕಲೆ ಫಾಲ್ಸ್ ನೋಡಲು ಹೋಗ್ತಾರೆ, ಆದ್ರೆ ಈವರ್ಷ ಅರಣ್ಯ ಇಲಾಖೆಯ 290 ರೂ ಫೀ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇಷ್ಟೊಂದು ಶುಲ್ಕ ಯಾಕೆ ಅಂದ್ರೆ, ನಾವು ಚಿಕಲೆ ಫಾಲ್ಸ್ ಅಭಿವೃದ್ಧಿ ಮಾಡ್ತೀವಿ, 290 ಕೊಟ್ರೆ ಮಾತ್ರ ಚಿಕಲೆ ಫಾಲ್ಸ್ ನೋಡಬಹುದು ಅಂತಾ ಅಲ್ಲಿ ನಿಯೋಜನೆಗೊಂಡಿರುವ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಹೇಳುತ್ತಿದ್ದಾರೆ.
ಹಾಗಾದ್ರೆ ಪ್ರವಾಸಿಗರಿಂದ ಇಷ್ಟೊಂದ ಶುಲ್ಕ ವಸೂಲಿ ಮಾಡಲು ಬೆಳಗಾವಿಯ DFO ಅನುಮತಿ ನೀಡಿದ್ದಾರೆಯೇ..? ಅಥವಾ ಜಿಲ್ಲಾಧಿಕಾರಿಗಳು ಅನುಮತಿ ಕೊಟ್ಟಿದ್ದಾರೆಯೇ,ಕೊಟ್ಟಿದ್ದರೆ 290 ರೂ ಶುಲ್ಕ ವಿಧಿಸುವದು ಸರಿಯೇ ? ಎನ್ನುವದು ಪ್ರವಾಸಿಗರ ಪ್ರಶ್ನೆಯಾಗಿದೆ.
290 ಶುಲ್ಕ ಕೊಟ್ಟವರಿಗೆ ಪಾವತಿ ನೀಡಲಾಗುತ್ತಿದೆ. ಎಲ್ಲರ ಅನುಮತಿ ಪಡೆದುಕೊಂಡೇ ನಾವು ಶಲ್ಕ ವಸೂಲಿ ಮಾಡುತ್ತಿದ್ದೇವೆ ಎಂದು ಅರಣ್ಯ ಇಲಾಖೆಯ ಸಿಬ್ಬಂಧಿಗಳು ಹೇಳುತ್ತಿದ್ದು.ಈ ಕುರಿತು ಬೆಳಗಾವಿ DFO ಉತ್ತರ ಕೊಡಬೇಕಾಗಿದೆ.ಯಾಕಂದ್ರೆ ಅವರು ಸಾರ್ವಜನಿಕರ ಫೋನ್ ರಿಸೀವ್ ಮಾಡೋದೇ ಇಲ್ಲ.
ಅರಣ್ಯ ಸಚಿವರ ತವರಿನಲ್ಲೇ ಈ ರೀತಿ ಪ್ರವಾಸಿಗರನ್ನು ಲೂಟಿ ಮಾಡಲಾಗುತ್ತಿದೆ. ಈ ಕುರಿತು ಅರಣ್ಯ ಸಚಿವ ಉಮೇಶ್ ಕತ್ತಿ ಕ್ರಮ ಕೈಗೊಳ್ಳುವದು ಅಗತ್ಯವಾಗಿದೆ.