ಬೆಳಗಾವಿ-ಸರ್ಕಾರಿ- ಶಾಲೆ ಅಡುಗೆ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಗೌರವಧನ ಪಾವತಿಸು ಎಂದರೆ, ಆತ ತನ್ನ ಖಾತೆಗೇ ಹಣ ಜಮಾ ಮಾಡಿಕೊಂಡು ಅಕಾರಿಗಳ ತಲೆ ಕೆಡಿಸಿದ ಅಕ್ಷರ ದಾಸೋಹ ವಿಭಾಗದ ಪ್ರಥಮ ದರ್ಜೆ ಸಹಾಯಕನ (ಎಸ್‍ಡಿಎ) ವಿರುದ್ಧ ಚಿಕ್ಕೋಡಿ ಪೆÇಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಎಸ್‍ಡಿಎ ಆರ್.ಡಿ. ಇಂಗಳೆ ವಿರುದ್ಧ ಚಿಕ್ಕೊಡಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕಿ ಎನ್.ಎಂ. ಪಿಂಜಾರ್ ಅವರು ದೂರು ನೀಡಿದ್ದಾರೆ. ಇಲಾಖಾ ತನಿಖೆ ವೇಳೆ ತಪ್ಪು ಒಪ್ಪಿಕೊಂಡು ಹಣ ವಾಪಸ್ ನೀಡುವುದಾಗಿ ಹೇಳಿದ್ದ ಇಂಗಳೆ ಅವರು ಈಗ ಕರ್ತವ್ಯಕ್ಕೂ ಹಾಜರಾಗದೆ ಇರುವುದರಿಂದ ಅಕಾರಿಗಳು ಅವರ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?
ರಾಜ್ಯದಲ್ಲಿ ಬರಗಾಲ ಎದುರಾಗಿದ್ದರಿಂದ ಸರಕಾರಿ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲಿಯೂ ಬಿಸಿಯೂಟ ಮುಂದುವರಿಸಲಾಗಿತ್ತು. ಅದರಂತೆ ಪ್ರತಿ ತಿಂಗಳು ಅಡುಗೆ ಸಿಬ್ಬಂದಿ ಬ್ಯಾಂಕ್ ಖಾತೆ ಗೌರವಧನ ಜಮಾ ಆಗುತ್ತಿತ್ತು. ಆದರೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್‍ನಲ್ಲಿ ಬಿಸಿಯೂಟ ತಯಾರಿಸಿದ ಅಡುಗೆ ಸಿಬ್ಬಂದಿಯ ಗೌರವಧನ ಇನ್ಯಾರದೋ ಖಾತೆಗೆ ಜಮಾ ಆಗಿತ್ತು.
ಈ ಕುರಿತು ಇಲಾಖೆ ತನಿಖೆ ನಡೆಸಿದಾಗ ಅಕ್ಷರ ದಾಸೋಹ ವಿಭಾಗದ ಪ್ರಥಮ ದರ್ಜೆ ಸಹಾಯಕ ಆರ್.ಡಿ. ಇಂಗಳೆ ಅವರು 485 ಸಿಬ್ಬಂದಿಯ ಬರೋಬ್ಬರಿ 9.43 ಲಕ್ಷ ರೂ. ಹಣವನ್ನು ತಮ್ಮ ಹಾಗೂ ಸ್ನೇಹಿತರ ಖಾತೆ ಜಮಾ ಮಾಡಿಕೊಂಡಿದ್ದರು. ಚಿಕ್ಕೋಡಿ ತಾಲೂ ಪಂಚಾಯಿತಿ ಕಾರ್ಯನಿರ್ವಹಣಾಕಾರಿ (ಇಓ) ತನಿಖೆ ನಡೆಸಿದಾಗಿ ವಿಷಯ ದೃಢಪಟ್ಟಿತ್ತು. ನೂತನ ಇಓ ಪಿ.ಎಸ್. ಪಾಟೀಲ್ ಅವರು ಕೆಲ ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಿದ್ದಾರೆ.
ಇಂಗಳಿ ಅವರು ತಮ್ಮ ಖಾತೆಗೆ 4,35,900 ರೂ, ನಿಪ್ಪಾಣಿಯ ಪ್ರೇಮಲತಾ ಪವಾರ್ ಅವರ ಖಾತೆಗೆ 1,30,400 ರೂ, ಆನಂದ ಗೌಡರ ಖಾತೆಗೆ 65,200 ರೂ, ಚಿಂಚಣಿಯ ಅನುರಾಧಾ ಅಪ್ಪಾಜಿಗೋಳ ಅವರ ಖಾತೆಗೆ 1,02,600 ರೂ, ಹುಕ್ಕೇರಿಯ ಎಲಿಮುನ್ನೋಳ್ಳಿಯ ಅಮೃತ ಇಂಗಳೆ ಅವರ ಖಾತೆಗೆ 2,09,036 ರೂ. ಜಮಾ ಮಾಡಲಾಗಿದೆ. ಅಲ್ಲದೆ, ದಾಖಲೆಯಲ್ಲಿ ಹಿರಿಯ ಅಕಾರಿಗಳ ಸಹಿಯನ್ನು ಸಹ ನಕಲು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.
ಎಸ್‍ಡಿಎ ಇಂಗಳಿ ಅವರು, ದಾಖಲೆ ತಿರುಚಿ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಯ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡು ಸರಕಾರಕ್ಕೆ ವಂಚಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಪೆÇಲೀಸರಿಗೆ ದೂರು ನೀಡಿದ್ದೇವೆ.ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿಎನ್.ಎಂ. ಪಿಂಜಾರ್,ತಿಳಿಸಿದ್ದಾರೆ