ಬೆಳಗಾವಿ- ಈಗ ಕೋವಿಡ್ ಕಾಲ,ಶಾಲೆಗಳಿಗೆ ರಜೆ ಇದೆ,ಇಂತಹ ಸಂಧರ್ಭದಲ್ಲಿ ಗುರು ಬಳಗ ಮಜಾ ಮಾಡುತ್ತಿದೆ,ಫುಲ್ ರೆಸ್ಟ್ ಮಾಡುತ್ತಿದೆ ಅಂತಾ ನಾವು ಅಂದುಕೊಂಡಿದ್ದೇವೆ ಆದ್ರೆ ಶಾಲೆಯೊಂದರ ಗುರು ಬಳಗವೊಂದು ತಮ್ಮ ಶಾಲೆಗೆ ಈ ಸಮಯದಲ್ಲಿ ಬಣ್ಣ ಬಳಿದು ಎಲ್ಲರ ಗಮನ ಸೆಳೆದಿದೆ.
ಚಿಕ್ಕೋಡಿ ಜಿಲ್ಲೆಯ ಗೋಕಾಕ್ ವಲಯದ ಮಕ್ಕಳಗೇರಿ ಕ್ಲಸ್ಟರಿನ ಪುಡಕಲಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಕೊವಿಡ್ ರಜಾ ಅವಧಿಗಳಲ್ಲಿ ಶಾಲೆಗಳಿಗೆ ಬಣ್ಣ ಬಳಿಯುವ ಕೆಲಸ ದಲ್ಲಿ ತಲ್ಲೀನರಾಗಿದ್ದಾರೆ.
ಈ ಶಾಲೆಯ ಗುರು ವೃಂದ ಒಗ್ಗೂಡಿ ಶಾಲಾ ಅವಧಿಯಲ್ಲಿ ಶಾಲೆಗೆ ಬಣ್ಣ ಬಳಿದು ತಮ್ಮ ಶಾಲೆಗೆ ಹೊಸ ಲುಕ್ ಕೊಡುವದರ ಜೊತೆಗೆ ಎಲ್ಲರ ಗಮನ ಸೆಳೆದಿದ್ದಾರೆ.
ಶಾಲೆಯ ಎಲ್ಲ ಗುರುಗಳು ಬ್ರಶ್ ಹಿಡಿದು ಫಟಾಫಟ್ ಅಂತಾ ಯಾವುದೇ ಸಂಕೋಚವಿಲ್ಲದೇ ಶಾಲೆಗೆ ಬಣ್ಣ ಬಳೆಯುತ್ತಿದ್ದಾರೆ.
ಶಾಲಾ ಗುರುಗಳ ಅರ್ಥಪೂರ್ಣ ಸೇವೆಗೆ ಚಿಕ್ಕೋಡಿ ಡಿಡಿಪಿಐ ಅವರು ಪ್ರಶಂಸೆ ವ್ಯೆಕ್ತ ಪಡಿಸಿದ್ದಾರೆ
ಗುರು ದೇವೋಭವ…!