Breaking News

16 ಜನ ಸಿಬ್ಬಂಧಿಗೆ ಸೊಂಕು ರಾಮದುರ್ಗ ಪುರಸಭೆ ಕಚೇರಿ ಸೀಲ್ ಡೌನ್…..

ಬೆಳಗಾವಿ- ಬೆಳಗಾವಿ ಜಿಲ್ಲೆ ರಾಮದುರ್ಗ ಪುರಸಭೆ ಕಚೇರಿಯ 16 ಸಿಬ್ಬಂದಿಗೆ ಸೋಂಕು ತಗಲಿದೆ,ಹೀಗಾಗಿ ಈ ಮಹಾಮಾರಿ ಕೊರೋನಾ, ರಾಮದುರ್ಗ ಪುರಸಭೆ ಕಚೇರಿಯನ್ನು ಸ್ವಾಧೀನ ಪಡಿಸಿಕೊಂಡಿದೆ.ಅದಕ್ಕಾಗಿ ಈ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ಪುರಸಭೆ ಕಚೇರಿ ಸೀಲ್‌ಡೌನ್ ಮಾಡಲಾಗಿದೆ. ಸೀಲ್‌ಡೌನ್ ಆದ ಪುರಸಭೆ ಕಚೇರಿ ಎದುರು ಬಿಂದಾಸ್ ವ್ಯಾಪಾರ ನಡೆದಿದೆ.  ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ಇಲ್ಲಿ ಜೋರಾಗಿಯೇ ನಡೆದಿದೆ.

48 ಗಂಟೆಗಳ ಕಾಲ ರಾಮದುರ್ಗ ಪುರಸಭೆ ಕಚೇರಿ ಸೀಲ್‌ಡೌನ್ ಮಾಡಲಾಗಿದೆ.
ಪುರಸಭೆ ಕಚೇರಿ ಸಿಬ್ಬಂದಿ, ಪೌರಕಾರ್ಮಿಕರು ಸೇರಿ 16 ಜನರಿಗೆ ಸೋಂಕು ದೃಡವಾಗಿದೆ.

ಕಟಕೋಳ ಪೊಲೀಸ್ ಠಾಣೆಯ ಮೂವರು ಪೇದೆಗಳಿಗೂ ಸೋಂಕು ತಗಲಿದೆ. ಹೀಗಾಗಿ ಕಟಕೋಳ ಪೊಲೀಸ್ ಠಾಣೆಯ 17 ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ.

ರಾಮದುರ್ಗ ಕೆಎಸ್‌ಆರ್‌‌ಟಿಸಿ ಘಟಕದ 10 ಸಿಬ್ಬಂದಿಗೂ ಸೋಂಕು ದೃಢ ವಾಗಿದೆ.
ಕೆಎಸ್‌ಆರ್‌‌ಟಿಸಿ ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಸೇರಿ 10 ಜನರಿಗೆ ಸೋಂಕು ತಗಲಿದೆ. ರಾಮದುರ್ಗದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ರೂ ಜನ ಡೋಂಟ್ ಕೇರ್ ಅಂತೀದಾರೆ.

Check Also

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ, ಸಿಡಿದೆದ್ದ ಷೇರುದಾರರು, ಡಿಸಿ ಕಚೇರಿಯಲ್ಲಿ ಹಠಾತ್ ಸಭೆ…!!

ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು? ಬೆಳಗಾವಿ: …

Leave a Reply

Your email address will not be published. Required fields are marked *