ಚಿಕ್ಕೋಡಿ-ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಜಾರಕಿಹೊಳಿ ಸಹೋದರರ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದ್ದು,ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡದಿದ್ದರೆ,ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವದಾಗಿ ಹಿರಿಯ ಹೋರಾಟಗಾರ ಬಿ ಆರ್ ಸಂಗಪ್ಪಗೋಳ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕೋಡಿಯಲ್ಲಿ ಸಂಗಪ್ಪಗೋಳ ನೇತ್ರತ್ವದಲ್ಲಿ ಸುದ್ಧಿಗೋಷ್ಠಿ ನಡೆಸಿದ ಹೋರಾಟಗಾರರು, ಚಿಕ್ಕೋಡಿಯನ್ನು ನಿರ್ಲಕ್ಷಿಸಿ ಗೋಕಾಕ್ ಜಿಲ್ಲೆ ಮಾಡಲು ಜಾರಕಿಹೊಳಿ ಸಹೋದರರು ಮುಂದಾಗಿದ್ದಾರೆ. ಗೋಕಾಕ್ ಜಿಲ್ಲೆ ಮಾಡುವುದಾಗಿ ಹೇಳಿದ್ದ ರಮೇಶ ಹಾಗೂ ಸತೀಶ್ ಜಾರಕಿಹೊಳಿ ಚಿಕ್ಕೋಡಿಯನ್ನು ಕಡೆಗಣಿಸಿದ್ದಾರೆ ಎಂದು,ಜಾರಕಿಹೊಳಿ ಸಹೋದರರು ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
೩೦ವರ್ಷಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದೆ, ನಮ್ಮ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ಬಂದು ವಿಷ ಸೇವಿಸಲು ಸಿದ್ದ ಎಂದಿದ್ದರು, ಬಿಜೆಪಿ ಸಂಸದರು ಮೋದಿ ಮುಂದೆ ಚಿಕ್ಕೋಡಿ ಜಿಲ್ಲೆ ಮಾಡುವುದಾಗಿ ಹೇಳಿದ್ದರು, ಆದರೇ ಇನ್ನೂ ಜಿಲ್ಲೆ ಮಾಡಿಲ್ಲ, ಸಿದ್ದರಾಮಯ್ಯ ಸರ್ಕಾರವಿದ್ದಾಗ ಚಿಕ್ಕೋಡಿ ಜಿಲ್ಲೆ ಮಾಡುವುದಾಗಿ ಹೇಳಿದ್ದರು ಅವರೂ ಮಾಡಿಲ್ಲ,ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಚಿಕ್ಕೋಡಿಗೆ ಅನ್ಯಾಯವಾಗಿದೆ ಎಂದು ಸಂಗಪ್ಪಗೋಳ ಆರೋಪಿಸಿದರು.
ಚಿಕ್ಕೋಡಿಯಲ್ಲೀಗ ೪ ಸಚಿವರು , ಸಂಸದರು ಹಾಗೂ ಅನೇಕ ಹಿರಿಯ ನಾಯಕರಿದ್ದಾರೆ, ಆದರೇ ಚಿಕ್ಕೋಡಿ ಬಗ್ಗೆ ಯಾರು ಬಾಯಿ ಬಿಚ್ಚುತ್ತಿಲ್ಲ, ಶೀಘ್ರದಲ್ಲಿ ಚಿಕ್ಕೋಡಿ ಜಿಲ್ಲೆಯಾಗದಿದ್ದರೆ, ನಾವು ಮತ್ತೆ ಆಮರಣ ಉಪವಾಸ ಪ್ರಾರಂಭಿಸುತ್ತೇವೆ. ಎಲ್ಲ ತಾಲೂಕುಗಳಿಗೆ ತೆರಳಿ ಜನಸಂಗ್ರಹ ಮಾಡುತ್ತೇವೆ. ಮುಂದಿನ ದಿನಮಾನಗಳಲ್ಲಿ ಸಿಎಂ ಎದುರು ನಮ್ಮ ನಿಯೋಗದೊಂದಿಗೆ ಹೋಗುತ್ತೇವೆ. ಯಾರು ಬರಲಿ ಬಿಡಲಿ ನಾವು ಚಿಕ್ಕೋಡಿ ಜಿಲ್ಲೆ ಮಾಡಿಯೇ ತೀರುತ್ತೇವೆ ಎಂದು ಬಿ.ಆರ್ ಸಂಗಪ್ಪಗೋಳ ವಿಶ್ವಾಸ ವ್ಯೆಕ್ತಪಡಿಸಿದರು.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					