ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಅರ್ಭಟ ನಿರಂತರವಾಗಿ ಮುಂದುವರೆದಿದ್ದು ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಯುವಕನೋರ್ವ ನೈವದ್ಯ ಬಿಡಲು ಹೋದಾಗ ಆಯಾ ತಪ್ಪಿ ನದಿಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದಂತಹ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ರೋಹಣ ಪಾಟೀಲ(31) ಮೃತಪಟ್ಟ ಯುವಕ.ಇವತ್ತು ನದಿಗೆ ಸ್ನೇಹಿತನ ಜೊತೆಗೆ ನೈವ್ಯದ್ಯ ಬಿಡಲು ಹೋದಾಗ ನದಿಯ ಸುಳಿಯಲ್ಲಿ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ.
ಸೋಮವಾರ ಸಾಯಂಕಾಲ 5 ಗಂಟೆಗೆ ಸುಮಾರಿಗೆ ಶವವನ್ನು ಹೋರತಗೆಯಲಾಯಿತು. ರೋಹಣ್ ಪಾಟೀಲ್ ಸಾವನ್ನುಪ್ಪಿದ ಘಟನೆ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂಕಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.