ಬೆಳಗಾವಿ- ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಹತ್ಯೆ ಮಾಡಿ ಕಾರಿನಲ್ಲಿ ಪಲಾಯನ ವಾಗುತ್ತಿದ್ದ ಇಬ್ಬರು ಆರೋಪಿಗಳ ಮೋಬೈಲ್ ಟ್ರೆಸ್ ಮಾಡಿ ರಾಮದುರ್ಗ ಪೋಲೀಸರು ಆರೋಪಿಗಳನ್ನು ಸಿನಿಮೀಯ ಮಾದರಿಯಲ್ಲಿ ಬಂಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗೂರುಜಿ ಕೊಲೆ ಪ್ರಕರಣಕ್ಕೆ ಸಮಂಧಿಸಿದ ಇಬ್ಬರು ಆರೋಪಿಗಳು ಕಾರಿನಲ್ಲಿ ಪರಾರಿಯಾಗುತ್ತಿರುವಾಗ,ರಸ್ತೆಯಲ್ಲಿ ಜೆಸಿಬಿಯನ್ನು ಅಡ್ಡಗಟ್ಟಿದ ಪೋಲೀಸರು,
ರಾಮದುರ್ಗದಲ್ಲಿ ಇಬ್ಬರು ಆರೋಪಿಗಳ ಬಂಧಿಸಿದ್ದಾರೆ.
ರಾಮದುರ್ಗ ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಪಿಎಸ್ಐ ಶಿವಾನಂದ ಕಾರಜೋಳ ನೇತೃತ್ವದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆದಿತ್ತು.
ಕೊಲೆ ಬಳಿಕ ರಾಮದುರ್ಗದಲ್ಲಿ ಮರೆಸಿಕೊಂಡಿದ್ದ ಆರೋಪಿಗಳ,ಫೋನ್ ಲೋಕೇಶನ್ ಆಧಾರದಲ್ಲಿ ಆರೋಪಿಗಳ ಸೆರೆಹಿಡಿದು ಹುಬ್ಬಳ್ಳಿಗೆ ಆರೋಪಿಗಳನ್ನು ಕರೆದೊಯ್ಯುಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ