ಬೆಳಗಾವಿ-ವಿಧಾನ ಪರಿಷತ್ತಿನ ಚುನಾವಣೆಯ ದಿನಾಂಕ ಇನ್ನು ಘೋಷಣೆ ಆಗಿಲ್ಲ. ಆದ್ರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಚುನಾವಣೆಯ ತಯಾರಿ ನಡೆದಿದೆ.
ಬೆಳಗಾವಿಯಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಪಕ್ಷದಿಂದ ಹಲವಾರು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು ಆದ್ರೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಮೀಟಿ ಸಭೆ ಮಾಡಿ ಮೂವರು ಜನ ಆಕಾಂಕ್ಷಿಗಳ ಹೆಸರನ್ನು ಕೆಪಿಸಿಸಿಗೆ ಶಿಫಾರಸ್ಸು ಮಾಡಿದೆ ಎಂದು ತಿಳಿದು ಬಂದಿದೆ.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ,ಕಿರಣ ಸಾಧುನವರ,ಮತ್ತು ಗೋವಾ ಕಾಂಗ್ರೆಸ್ ಉಸ್ತುವಾರಿ ಸನೀಲ ಹನಮಣ್ಣವರ ಅವರ ಹೆಸರನ್ನು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮೀತಿ ಶಿಫಾರಸ್ಸು ಮಾಡಿದ್ದು ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ.
ಯಾಕಂದ್ರೆ ಚನ್ನರಾಜ ಹಟ್ಟಿಹೊಳಿ ಅವರು ಈಗಾಗಲೇ ಬೆಳಗಾವಿ ಕ್ಷೇತ್ರದಲ್ಲಿ ಚುನಾವಣೆಯ ಪ್ರಚಾರ ಆರಂಭಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಶುಭಾಶಯ ಕೋರಿ ದೀಪಾವಳಿ ಗ್ರೀಟೀಂಗ್ಸ್ ಕಾರ್ಡುಗಳನ್ನು ಪೋಸ್ಟ್ ಮಾಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ