ಬೆಳಗಾವಿ- ಕಳೆದ ವರ್ಷ ಬೆಳಗಾವಿ ಮಹಾನಗರ ಪಾಲಿಕೆ ನಗರದಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ರೀ ಅಸೆಸ್ಸಮೆಂಟ್ ಮಾಡಿ ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹ ಮಾಡಿದ ಪದ್ದತಿಯನ್ನು ಮೆಚ್ವಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಬೆಳಗಾವಿ ಪಾಲಿಕೆಗೆ ಪುರಸ್ಕಾರ ಘೇಷಿಸಿದೆ
ಕಳೆದ ವರ್ಷ ಬೆಳಗಾವಿ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ವಸೂಲಿ ಮಾಡುವ ಸಂಧರ್ಭದಲ್ಲಿ ಪ್ರಾಪರ್ಟಿಗಳನ್ನು ರೀ ಅಸೆಸ್ಸ ಮಾಡಿ ಹೆಚ್ಚುವರಿ ಟ್ಯಾಕ್ಸ ವಸೂಲಿ ಮಾಡಿತ್ತು ಪಾಲಿಕೆಯ ರೀ ಅಸೆಸ್ಸ ಪದ್ದತಿಯನ್ನು ಮೆಚ್ಚಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಆಡಳಿತದಲ್ಲಿ ಹೊಸ ಪದ್ಧತಿಗಳ ದಾಖಲೀಕರಣ ಎಂಬ ಪುರಸ್ಕಾರ ನೀಡಿದೆ
ಕಳೆದ ವರ್ಷ ಬೆಳಗಾವಿ ಮಹಾನಗರ ಪಾಲಿಕೆ ೩೨ ಕೋಟಿ ರೂ ದಾಖಲೆ ಪ್ರಮಾಣದ ಟ್ಯಾಕ್ಸ ವಸೂಲಿ ಮಾಡಿತ್ತು ಇಂಡಾಲ ಕಾರಖಾನೆಯವರು ಪ್ರಾಪರ್ಟಿ ರೀ ಅಸೆಸ್ಸಮೆಂಟನಲ್ಲಿ ಮೋಸ ಮಾಡಿ ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿದ್ದರು ಪಾಲಿಕೆ ಅಧಿಕಾರಿಗಳು ಇಂಡಾಲ ಪ್ರಾಪರ್ಟಿ ರೀ ಅಸೆಸ್ಸ ಮಾಡಿದಾಗ ಇದು ಬಯಲಾಗಿತ್ತು
ಇದೇ ರೀತಿ ಪಾಲಿಕೆ ಅಧಿಕಾರಿಗಳು ನಗರದ ಎಲ್ಲ ಆಸ್ತಿಗಳನ್ನು ರೀ ಅಸೆಸ್ಸ ಮಾಡಿದ್ದರು ಈ ಪದ್ದತಿಯನ್ನು ಮೆಚ್ಚಿರುವ ನಗರಾಭಿವೃದ್ಧಿ ಇಲಾಖೆ ಬೆಳಗಾವಿ ಮಹಾನಗರ ಪಾಲಿಕೆಗೆ ಪುರಸ್ಕಾರ ನೀಡಿದೆ