ಬೆಳಗಾವಿ- ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಎಂ.ಇಬ್ರಾಹಿಂ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಹಳಬರು, ಹೊಸಬರ ಪರಿಚಯ ಮಾಡಿಕೊಂಡಿದ್ದೇನೆ. ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆ ಕೆಟ್ಟು ಹೋಗಿದೆ, ಹೀಗಾಗಿ ಎಲ್ಲಾ ಸಮುದಾಯದ ಮುಖಂಡರ ಜೊತೆಗೆ ಚರ್ಚೆ ಮಾಡಿರುವೆ. ಅವರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ.ಮುಂದೆ ಒಂದು ರಾಜಕೀಯ ತೀರ್ಮಾನ ಮಾಡ್ತಿನಿ.ನಾನು ಬಿಜೆಪಿ ಸೇರಲ್ಲ.ನನ್ನದು ಬಸವ ಕೃಪ ಅದು ಕೇಶವ ಕೃಪಾ.. ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಕಾಂಗ್ರೆಸ್, ಜೆಡಿಎಸ ಯಥಾ ಪ್ರಕಾರ ನಡೆಯುತ್ತಿದೆ,ಬದಲಾವಣೆಗೆ ಜನರು ಸ್ಪಂದಿಸಬೇಕು ಕಾಂಗ್ರೆಸ್ ಪಕ್ಷವನ್ನು ಜನರು ಕೈ ಬಿಟ್ಟಿದ್ದಾರೆ.
ಬೆಂಗಳೂರು, ದೆಹಲಿಯಲ್ಲಿ ಕುಳಿತು ಚರ್ಚೆ ಮಾಡ್ತಾರೆ, ಇದರಿಂದ ಕಾಂಗ್ರೆಸ್ ಜನರಿಂದ ದೂರವಾಗಿದೆ. ಎಂದು ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷದ ನಡುವಳಿಕೆ ಕುರಿತು ಅಸಮಾಧಾನ ವ್ಯೆಕ್ತಪಡಿಸಿದರು.
ಕಾಂಗ್ರೆಸನಲ್ಲಿ ರಾಜಕೀಯವಾಗಿ ತುಳಿದ್ರಾ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ತುಳಿಯಲು ನಾನು ಹಗುರವಾಗಿಲ್ಲ.ನಾನು 110 ಕೆಜಿ ಇದ್ದೇನೆ
ಆದ್ರೆ ಕಾಂಗ್ರೆಸ್ ನಲ್ಲಿ ನನಗೆ ಪರದೇ ಹಾಕಿದ್ರು.ಸ್ಕ್ರೀನ್ ಹಾಕಿದ್ರು ಅದರಿಂದ ಹೊರಗೆ ಬಂದಿನಿ ಅಂದ್ರು ಸಿಎಂ ಇಬ್ರಾಹಿಂ.
ಸಿದ್ದರಾಮಯ್ಯನ್ನವರು ನನ್ನ ಸ್ನೇಹಿತರು ಅವರ ಬಗ್ಗೆ ಏನ ಮಾತನಾಡಲ್ಲ, ಆದ್ರೆ ಮನೆ ಕಟ್ಟಿದವರು ಮನೆಯಲ್ಲಿ ಇರಲ್ಲ ಮನೆ ಕಟ್ಟಿದವರನ್ನ ಒಂದೆರೆಡು ಮೋಸಂಬಿ ಕೊಟ್ಟು, ಶಾಲು ಹಾಕಿ ಹೊರಗ ಹಾಕ್ತಾರೆ. ಯಾವುದೇ ರಾಜಕೀಯ ಪಕ್ಷ ಮುಳುಗಲ್ಲ.ನಾನು ಬಿಜೆಪಿ ಸೇರಲ್ಲ.
ನನ್ನದು ಬಸವ ಕೃಪ ಅದು ಕೇಶವ ಕೃಪಾ.. ಅಂದ್ರು ಇಬ್ರಾಹಿಂ.
ರಾಜಕೀಯ ಸೈದ್ಧಾಂತಿಕ ಭಿನ್ನಾಭಿಪ್ರಾಯ ವಿದೆ. ಬಿಜೆಪಿ ಕಷ್ಟ. ಬಿಜೆಪಿಯಲ್ಲಿ ಕೆಲವರು ಒಳ್ಳೆಯದು ಇದ್ದಾರೆ.
ಹಸಿದವರಿಗೆ ಅನ್ನ ಕೊಟ್ಟಿಲ್ಲ ಕೇಂದ್ರ , ರಾಜ್ಯ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲವ್ ಜಿಹಾದ ಯಾಕ ಬೇಕು. ಮದುವೆ ಆಗುವ ಹುಡುಗು ಹುಡುಗಿ ಸಬ್ ರಜಿಸ್ಟಾರ್ ಮದುವೆ ಆಗ್ತಾರೆ. ಅದನ್ನ ಡಿಸಿಯಿಂದ ಅನುಮತಿ ಪಡೆಬೇಕು. ಗೋ ಹತ್ಯೆ ನಿಷೇಧ ಕಾಯ್ದೆ ಒಳ್ಳೆಯದು. ಹಸು ಹಾಲು ಕೊಡುವುದನ್ನ ನಿಲ್ಲಿಸಿದಾಗ ಏನ ಮಾಡೋದು ಎಂದು ಇಬ್ರಾಹಿಂ ಪ್ರಶ್ನೆ ಮಾಡಿದರು. ಇಲ್ಲಿ ನಿಮ್ಮ ಅವ್ವ, ಅಲ್ಲಿ ನಿಮ್ಮ ಚಿಗವ್ವ ನಾ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು
ದೆಹಲಿ ಬಹುತ್ತ ದೂರ ಹೈ ಅನ್ನುವಂತೆ ಈ ರಾಷ್ಟ್ರೀಯ ಪಕ್ಷಗಳಿಂದ ಆಗಿದೆ. ಪ್ರಾದೇಶಿಕ ಪಕ್ಷದಿಂದ ಜನರ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಿದೆ.
ದೇವೇಗೌಡರು, ಕುಮಾರಸ್ವಾಮಿ ಇಬ್ಬರದ್ದು ಒಂದು ವ್ಯಕ್ತಿತ್ವ ಇದೆ. ಇವರೇಲ್ಲರನ್ನ ಸಂಗಮ ಮಾಡಿ ಏನ ಮಾಡಲು ಸಾಧ್ಯವಿದೆ. ಎಂದರು ಸಿ.ಎಂ.ಇಬ್ರಾಹಿಂ