ಬೆಳಗಾವಿ- ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭೆ ಕ್ಷೇತ್ರಗಳು ಬೇ ವಾರಸಾ ಕ್ಷೇತ್ರಗಳೆಂದು ಬೆಂಗಳೂರಿನ ರಾಜಕಾರಣಿಗಳು ತಿಳಿದುಕೊಂಡಿದ್ದಾರೆ ಅಂತ ಕಾಣಿಸುತ್ತೆ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ಸಿನ ಎಂ ಡಿ ಲಕ್ಷ್ಮೀ ನಾರಾಯಣ ಸ್ಪರ್ದಿಸಲು ತಯಾರಿ ನಡೆಸಿದರೆ ಬೆಳಗಾವಿ ಉತ್ತರದ ಮೇಲೆ ವಾಕ್ ಪಟು ಸಿಎಂ ಇಬ್ರಾಹೀಂ ಕಣ್ಣಿಟ್ಟಿದ್ದಾರೆ
ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹೀಂ ಅವರು ಈಗಾಲೇ ಬೆಳಗಾವಿಗೆ ಹತ್ತು ಹಲವು ಬಾರಿ ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿ ಉತ್ತರದ ಸ್ಥಿತಿ ಗತಿ ಏನು ಇಲ್ಲಿಂದ ಸ್ಪರ್ದೆ ಮಾಡಿದ್ರೆ ಜನ ಸಪೋರ್ಟ್ ಮಾಡ್ತಾರೆ ಎನ್ನುವದನ್ನು ಸಿಎಂ ಇಬ್ರಾಹೀಂ ರಹಸ್ಯವಾಗಿ ಅಭ್ಯಾಸ ಮಾಡಿತ್ತಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದ ಸಂಧರ್ಭದಲ್ಲಿ ಸಿ ಎಂ ಇಬ್ರಾಹೀಂ ಬಹಳ ಸಿರಿಯಸ್ ಆಗಿ ಬೆಳಗಾವಿ ನಗರದಲ್ಲಿ ಓಡಾಡಿಕೊಂಡಿದ್ದರು ತಮ್ಮ ಆಪ್ತ ಬೆಂಬಲಿಗರ ಜೊತೆ ಸುತ್ತಾಡಿ ಬೆಳಗಾವಿ ಉತ್ತರ ಮತಕ್ಷೇತ್ರದ ಹಕೀಕತ್ತು ತಿಳಿದುಕೊಂಡು ಅಧಿವೇಶನ ಮುಗಿದ ಬಳಿಕ ಎರಡು ಬಾರಿ ಬೆಳಗಾವಿಗೆ ಭೇಟಿ ನೀಡಿ ಗಾಂಧೀ ನಗರದಲ್ಲಿ ಮಾಜಿ ನಗರ ಸೇವಕರ ಮನೆಯಲ್ಲಿ ಬಿರಿಯಾನಿ ತಿಂದು ಅಲ್ಲಿ ಕೂಡಿದ್ಸ ಮುಸ್ಲಿಂ ಮುಖಂಡರು ಹಾಗು ಕೆಲವು ಮಾಜಿ ನಗರ ಸೇವಕರು ಹೇಳಿದ ಮಾತುಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಿರುವ ಸಿಎಂ ಇಬ್ರಾಹೀಂ ತಾವು ವಿಧಾನಸಭೆ ಪ್ರವೇಶಿಸುವ ಪ್ರಶ್ನೆಗೆ ಬೆಳಗಾವಿ ಉತ್ತರ ಸೂಕ್ತ ಅಂತ ನಿರ್ಧಾರ ಮಾಡಿದ್ದಾರೆ ಎಂದು ಅವರ ಆಪ್ತ ಬೆಂಬಲಿಗರು ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಹೇಳಿಕೊಂಡಿದ್ದಾರೆ
ಬೆಳಗಾವಿಯಲ್ಲಿ ಸಿ ಎಂ ಇಬ್ರಾಹೀಂ ಅವರಿಗೆ ಭೋಜನ ಕೂಟ ಏರ್ಪಡಿಸಿ ಅವರಿಗೆ ಗೌರವ ಆತಿಥ್ತ ನೀಡಿದವರು ಶಾಸಕ ಫಿರೋಜ್ ಸೇಠ ಅವರ ರಾಜಕೀಯ ವಿರೋಧಿಗಳು ಅನ್ನೋದು ಮಹತ್ವದ ವಿಷಯ ಅವರೆಲ್ಲರೂ ಸಿಎಂ ಇಬ್ರಾಹೀಂ ಅವರಿಗೆ ಭೋಜನ ಕೂಟ ಏರ್ಪಡಿಸಿ ಬೆಳಗಾವಿಯಲ್ಲಿ ಮುಗ್ದ ಮುಸ್ಲೀಂ ಹುಡುಗರ ಮೇಲೆ ಕೇಸ್ ಹಾಕಿ ಜೇಲಿಗೆ ತಳ್ಳಲಾಗುತ್ತಿದೆ ಈ ಬಗ್ಗೆ ಮುಸ್ಲೀಂ ರ ಪರವಾಗಿ ಇಲ್ಲಿ ಹೆಳೋರು ಕೆಳೋರು ಯಾರೂ ಇಲ್ಲ ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಎಂದು ಬೆಳಗಾವಿಯ ಮುಸ್ಲಿಂ ಮುಖಂಡರು ಸಿ ಎಂ ಇಬ್ರಾಹೀಂ ಎದುರು ತಮ್ಮ ಅಳಲು ತೋಡಿಕೊಂಡು ಬೆಳಗಾವಿ ಉತ್ತರದಿಂದ ನಿವೇ ಸ್ಪರ್ಧಿಸಿ ನಾವೆಲ್ಲ ಸಪೋರ್ಟ್ ಮಾಡುತ್ತೇವೆ ಎಂದು ಬೆಳಗಾವಿ ಮುಸ್ಲಿಂ ಮುಖಂಡರು ಹೇಳಿದಾಗ ಸಿ ಎಂ ಇಬ್ರಾಹೀಂ ಅದಕ್ಕೆ ಉತ್ತರ ನೀಡದೇ ಮುಗುಳ್ಳ ನಗೆ ನಕ್ಕು ಹೋಗಿದ್ದಾರೆ
ಸತೀಶ ಜಾರಕಿಹೊಳಿ ಅವರು ಇತ್ತೀಚಿಗೆ ಬೆಳಗಾವಿಯ ಸ್ಮಶಾನದಲ್ಲಿ ನಡೆದ ಮೌಡ್ಯ ವಿರೋಧಿ ಸಂಕಲ್ಪ ದಿನಾಚರಣೆ ಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ನಡುವಳಿಕೆ ಕುರಿತು ನೊಂದು ಮಾತಾಡಿದ್ದಾರೆ ತಮಗೆ ಟಿಕೆಟ್ ಕೊಡಲಿ ಅಥವಾ ಬಿಡಲಿ, ಏಐಸಿಸಿ ಸಕ್ರೇಟರಿ ಸ್ಥಾನ ಕಿತ್ತುಕೊಂಡರೂ ನಾನು ಸ್ಮಶಾನದಲ್ಲಿ ನಡೆಸುತ್ತಿರುವ ಮೌಡ್ಯ ವಿರೋಧಿ ಸಂಕಲ್ಪ ದಿನ ಆಚರಿಸುವ ಕಾರ್ಯಕ್ರಮ ನಿಲ್ಲಿಸುವ ದಿಲ್ಲ ಎಂದು ಹೇಳುವ ಮೂಲಕ ಸತೀಶ ಜಾರಕಿಹೊಳಿ ಕಾಂಗ್ರೆಸ್ ಜೊತೆಗಿನ ತಮ್ಮ ಸಮಂಧ ಸರಿಯಾಗಿಲ್ಲ ಎನ್ನುವ ಸಂಕೇತ ನೀಡಿದ್ದಾರೆ
ಸಿ ಎಂ ಇಬ್ರಾಹೀಂ ಮತ್ತು ಸತೀಶ ಜಾರಕಿಜೊಳಿ ಅವರು ಆಪ್ತರು ಇವರಿಬ್ಬರ ನಡುವಿನ ದೋಸ್ತಿ ಹಳೆಯದು ಹೀಗಾಗಿ ಸಿಎಂ ಇಬ್ರಾಹೀಂ ಬೆಳಗಾವಿ ಉತ್ತರದಿಂದ ಸ್ಪರ್ದಿಸುವ ಇಂಗಿತ ವ್ಯೆಕ್ತ ಪಡಿಸಿದರೆ ಅದಕ್ಕೆ ಸತೀಶ್ ಜಾರಕಿಹೊಳಿ ಬೆಂಬಲ ಕೊಡಬಹುದಾ ಎನ್ನುವ ವಿಷಯ ಈಗ ಬೆಳಗಾವಿ ಉತ್ತರದಲ್ಲಿ ಯಕ್ಷ ಪ್ರಶ್ನೆಯಾಗಿದೆ
ಸಿಎಂ ಇಬ್ರಾಹೀಂ ಅವರು ರಾಜ್ಯ ಯೋಜನಾ ಆಯೋಗದ ಅಧ್ಯಕ್ಷರಾಗಿದ್ದರೆ ತಾವು ಹಿರಿಯರಾದರೂ ತಮಗೆ ಆ ಸಿದ್ರಾಮಣ್ಣ ಮಂತ್ರಿ ಮಾಡಲಿಲ್ಲ ಅಂತಾ ಸಿಎಂ ಇಬ್ರಾಹೀಂ ಅಸಮಾಧಾನ ರಾಗಿದ್ದಾರೆ ಇತ್ತ ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ಜೊತೆಗಿನ ತಮ್ಮ ಸಮಂಧ ಸರಿಯಾಗಿಲ್ಲ ಎಂದು ಸೂಕ್ಷ್ಮವಾಗಿ ಹೇಖಿಕೊಂಡಿದ್ದಾರೆ ಇದನ್ನೆಲ್ಲಾ ಗಮನಿಸಿದರೆ ಸತೀಶ ಜಾರಕಿಹೊಳಿ ಮತ್ತು ಸಿಎಂ ಇಬ್ರಾಹೀಂ ಇಬ್ಬರೂ ಸೇರಿಕೊಂಡು ಜೆಡಿಎಸ್ ಪಕ್ಷಕ್ಕೆ ಜಂಪ್ ಮಾಡಬಹುದಾ ಎನ್ನುವ ಸುದ್ಧಿ ಈಗ ಬೆಳಗಾವಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ
ಚುನಾವಣೆ ಸಮೀಪ ಬಂದಂತೆ ಬೆಳಗಾವಿ ಉತ್ತರ ಮತ್ತು ದಕ್ಷಿಣಕ್ಕೆ ರಾಜಕೀಯ ವಲಸಿಗರ ಸಂಖ್ಯೆ ಹೆಚ್ಚಾಗುತ್ತದೆ ದಕ್ಷಿಣಕ್ಕೆ ಎಂಡಿ ಲಕ್ಷ್ಮೀ ನಾರಾಯಣ ವಲಸೆ ಬರುತ್ತಿರುವದಕ್ಕೆ ಸತೀಶ ಜಾರಕಿಹೊಳಿ ಮತ್ತು ದಕ್ಷಿಣ ಕ್ಷೇತ್ರದ ನೇಕಾರ ಸಮಾಜದ ನಾಯಕರು ತೀವ್ರ ವಿರೋಧ ವ್ಯೆಕ್ತಪಡಿಸಿದ್ದಾರೆ