ಹಲವರ ಜೀವರಕ್ಷಿಸಿದ ಸಾಧಕನಿಗೆ ಚಿನ್ನದ ಪದಕ

ಬೆಳಗಾವಿ-. ಎಸ್. ನವೀನ್, ಅಗ್ನಿಶಾಮಕ ಚಾಲಕ, ಹೆಬ್ಬಾಳ, ಬೆಂಗಳೂರು ಇವರು ಇಂದು ಮಾನ್ಯ ಮುಖ್ಯಮಂತ್ರಿಯವರಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ “ಅತ್ಯುತ್ತಮ ಸೇವೆ” ಸಲ್ಲಿಸಿರುವುದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ “ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ” ವನ್ನು ಪಡೆದಿರುತ್ತಾರೆ.

ಸುಮಾರು 14 ವರ್ಷಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಚಾಲಕ ವೃತ್ತಿಯ ಜೊತೆಯಲ್ಲಿ ಅಧಿಕಾರಿಗಳೊಂದಿಗೆ ಹಾಗೂ ತಾಂತ್ರಿಕ ಸಿಬ್ಬಂದಿಯೊಂದಿಗೆ ಅಗ್ನಿ ಅವಘಡ/ ತುರ್ತು ಸೇವೆಯ ಸಂದರ್ಭದಲ್ಲಿ ಸಹಾಯ ಮಾಡಲು ಸದಾ ಸಿದ್ದರಿರುತ್ತಾರೆ. 2019 ರಲ್ಲಿ ಧಾರವಾಡದಲ್ಲಿ ನಡೆದ ಕಟ್ಟಡ ಕುಸಿದು ಸಂಭವಿಸಿದ ಅವಘಡದ ಸಂದರ್ಭದಲ್ಲಿ ತಮ್ಮ ಅಂಗನ್ನು ತೊರೆದು ಹಲವಾರು ಜೀವಗಳನ್ನು ರಕ್ಷಿಸಿದ ಕೀರ್ತಿಯು ಇವರದಾಗಿರುತ್ತದೆ. ಈ ರೀತಿ ತಮ್ಮ ಸೇವಾವಧಿಯಲ್ಲಿ, ಅನೇಕ ಅಗ್ನಿ ಅವಘಡ/ ತುರ್ತು ಸಂದರ್ಭ ಹಾಗು ಜೀವ ರಕ್ಷಣೆ ಕಾರ್ಯದಲ್ಲಿ ಸಲ್ಲಿಸಿರುವ ಅತ್ಯುನ್ನತ ಸೇವೆಯನ್ನು ಹಾಗೂ ಇವರ ಉತ್ತಮ ಕಾರ್ಯದ ನಿರ್ವಹಣೆಯನ್ನು ಪುರಸ್ಕರಸಿ ಕರ್ನಾಟಕ ರಾಜ್ಯ ಸರ್ಕಾರವು ಇಂದು ಮಾನ್ಯ ಮುಖ್ಯಮಂತ್ರಿಯವರಿಂದ “ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ” ವನ್ನು ನೀಡಿ ಗೌರವಿಸಿರುತ್ತದೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *