Breaking News

ನಿವೇ ಮುಂದಿನ ಪ್ರಧಾನಿಯಾಗಿ ಎಂದ ಸಭಿಕ….ಸದ್ಯಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಪ್ಪ ಮುಂದೆ ನೋಡೋಣ ಎಂದ ಸಿದ್ರಾಮಯ್ಯ

ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದುದ್ದಕ್ಕೂ ಪದೇ ಪದೆ ಮಿಸ್ಟರ್ ಮೋದಿ, ಮಿಸ್ಟರ್ ಯಡಿಯೂರಪ್ಪ… ಎಂದು ಸಂಭೋದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ನೀವೇ ಮುಂದಿನ ಪ್ರದಾನಮಂತ್ರಿ ಎಂದು ಹೇಳಿದ. ಇದಕ್ಕೆ ಪ್ರತ್ಯುತ್ತರ ನೀಡಿ ಸಿಎಂ ಸಿದ್ದರಾಮಯ್ಯ ಸದ್ಯ ಮುಖ್ಯಮಂತ್ರಿ ಮಾಡಿ, ಪ್ರಧಾನಿಗಾಗಿ ಮುಂದೋ ನೋಡೋಣ ಎಂದು ಹಾಸ್ಯ ಚಟಾಕಿ ಹಾಕುವ ಮೂಲಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರನ್ನು ನಗೆಗೆಡಲಿಲ್ಲ ತೇಲಿಸಿದರು.

ಬೆಳಗಾವಿ: ಮೋಜು, ಮಸ್ತಿಗಾಗಿ ವಿಧಾನಸಭೆಗೆ ಆಯ್ಕೆಯಾಗುವವರನ್ನು ಕ್ಷೇತ್ರದ ಜನತೆ ಈ ಬಾರಿ ತಿರಸ್ಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಬೆಳಗಾವಿ ಗ್ರಾಮೀಮ ವಿಧಾನಸಭೆ ಕ್ಷೇತ್ರದ ಬಾಳೇಕುಂದ್ರಿ ಕೆಎಚ್ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಅವರ ಪರ ಬಹಿರಂಗ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಕ್ಷೇತ್ರದ ಶಾಸಕ ಸಂಜಯ ಪಾಟೀಲ ಒಂದೇ ಒಂದು ಮಾತನ್ನು ಅಧಿವೇಶನದಲ್ಲಿ ಆಡಿಲ್ಲ. ಮೋಜು, ಮಸ್ತಿ ಮಾಡಲೇಂದೇ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಮತದಾರರು ಈ ಬಾರಿ ಇಂತಹವರನ್ನು ಆಯ್ಕೆಯಾಗದಂತೆ ತಡೆಯಬೇಕು ಎಂದರು.
ಲಕ್ಷ್ಮಿ ಹೆಬ್ಬಾಳಕರ ರಾಜ್ಯದ ಕಾಂಗ್ರೆಸ್ ಪಕ್ಷದ ಅತ್ಯಂತ ಕ್ರಿಯಾಶೀಲತೆಯುಳ್ಳ ಮಹಿಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ ಕಳೆದ ಬಾರಿ ವಿಧಾನಸಭೆ, ಲೋಕಸಭೆ ಎರಡೂ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಅವರು ಎದೆಗುಂದಲಿಲ್ಲ. ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳದೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಚುನಾವಣೆಯ ಹಳೆಯ ಇತಿಹಾಸ ಈ ಬಾರಿ ಪುನರಾವರ್ತನೆಯಾಗಬಾರದು. ಕ್ರಿಯಾಶೀಲ ವ್ಯಕ್ತಿತ್ವದ ಮಹಿಳೆಯಾದ ಹೆಬ್ಬಾಳಕರ ಅವರನ್ನು ಗೆಲ್ಲಿಸಬೇಕು. ನಿಮ್ಮ ಸೇವೆ ಮಾಡಿದ ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.
ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸುವುದು, ಕೋಮುವಾದ, ಕೋಮುಗಲಭೆ ಮಾಡುವುದೇ ಅವರ ಮುಖ್ಯ ಉz್ದÉೀಶವಾಗಿದೆ. ಆದರೆ, ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಕಾಳಜಿ ಮಾಡುತ್ತದೆ. ಜಾತಿ ಜಾತಿ, ಧರ್ಮ ಧರ್ಮಗಳ ನಡುವೆ ಸೌಹಾರ್ದಯುತ ಆಡಳಿತ ನೀಡುತ್ತದೆ. ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಹೇಳಿದ್ದರು. ಕಪ್ಪು ಹಣ ತರಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಅಚ್ಛೇ ದಿನವಂತೂ ಬರಲೇ ಇಲ್ಲ.ಪ್ರಧಾನಿ ಮೋದಿ ಮನ್ ಕೀ ಬಾತ್‍ದಿಂದ ಹೊಟ್ಟೆ ತುಂಬುವುದಿಲ್ಲ. ಕಾಮ್ ಕೀ ಬಾತ್ ಮಾಡಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಕಾಂಗ್ರೆಸ್ ಸರ್ಕಾರ ಐದು ವರ್ಷದ ಸಾಧನೆಗಳ ಬಗ್ಗೆ ನಾವು ಲೆಕ್ಕ ಕೊಡಲು ಸಿದ್ಧರಿz್ದÉೀವೆ. ಇದಕ್ಕಾಗಿ ನಾವು ಪ್ರಧಾನಿ ನರೇಂದ್ರ ಮೋದಿ, ಅಮಿತ ಶಾ, ಯಡಿಯೂರಪ್ಪ ಅವರಿಗೆ ಆಹ್ವಾನವನ್ನೂ ನೀಡಿz್ದÉೀವು. ಆದರೆ, ಅವರ್ಯಾರು ಬಹಿರಂಗ ಸಭೆಗೆ ಬರಲಿಲ್ಲ. ಈಗಲೂ ನಾವು ಐದು ವರ್ಷದ ನಮ್ಮ ಸಾಧನೆಯ ಲೆಕ್ಕ ಕೊಡಲು ಸಿದ್ಧ ಎಂದು ಹೇಳಿದರು.

ಸೂರ್ಯ, ಚಂದ್ರ ಹುಟ್ಟುವುದು ಎಷ್ಟೋ ಸತ್ಯವೋ ನಾನು ಸಿಎಂ ಆಗುವುದು ಅಷ್ಟೇ ಸತ್ಯ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮಿ ಹೆಬ್ಬಾಳಕರ ಆಯ್ಕೆಯಾಗುವುದು ಕೂಡ ಅಷ್ಟೇ ಸತ್ಯವಾಗಿದೆ ಎಂದ ಅವರು ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಹಗಲು ಗನಸು ಕಾಣುತ್ತಿದ್ದಾರೆ. ಅವರಪ್ಪಣಾನೆಗೂ ಅವರಿಬ್ಬರು ಮುಖ್ಯಮಂತ್ರಿಯಾಗಲ್ಲ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ಕ್ಷೇತ್ರದಲ್ಲಿ ಏಳು ವರ್ಷಗಳಿಂದ ಜನರೊಂದಿಗೆ ಇದ್ದಿz್ದÉೀನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿz್ದÉೀನೆ. 10 ವರ್ಷವಾದರೂ ಶಾಸಕ ಸಂಜಯ ಪಾಟೀಲ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಈ ಬಾರಿ ನನಗೆ ಆಶೀರ್ವಾದ ಮಾಡಿ ಆಯ್ಕೆ ಮಾಡಿದರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಲಕ್ಷ್ಮಿ ಹೆಬ್ಬಾಳಕರ ಅವರನ್ನು ಸೋಲಿಸಲು ಕೆಲವರು ಕುತಂತ್ರ ಮಾಡುತ್ತಿದ್ದು, ಅಂತಹವರ ಮಾತಿಗೆ ಕಿವಿಗೊಡಬೇಡಿ. ಜನರ ಸಮಸ್ಯೆಗೆ ಸ್ಪಂದಿಸುವ ಮಹಿಳೆ ಹೆಬ್ಬಾಳಕರ ಅವರನ್ನು ಬೆಂಬಲಿಸಿಸಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮೋಹನ್, ಮಹಾಂತೇಶ ಕೌಜಲಗಿ, ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ ಮೊದಲಾದವರು ಇದ್ದರು.

Check Also

ಹಾಡು‌ ಹಗಲೇ ಯುವಕನ ಬರ್ಬರ ಹತ್ಯೆ.

ಬೆಳಗಾವಿ- ಹಾಡು‌ ಹಗಲೇ ಯುವಕನ ಬರ್ಬರ ಹತ್ಯೆ ಮಾಡಿದ ಘಟನೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಹೊರ …

Leave a Reply

Your email address will not be published. Required fields are marked *