ಬೆಳಗಾವಿ-ಬೆಳಗಾವಿ ಜಿಲ್ಲೆ ವಿಭಜನೆ ಯಾವಾಗ ? ಎಂದು ಬೆಳಗಾವಿಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡಿದಾಗ,ಕೈ ಮುಗಿದು ಸಿಎಂ ಹೊರಟೇ ಬಿಟ್ಟರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಮಾರ್ಗದರ್ಶನ ಮಾಡಲು ಇಂದು ಅರುಣ್ ಸಿಂಗ್ ರಾಜ್ಯಕ್ಕೆ. ಮೊದಲ ಸಹ ಉಸ್ತುವಾರಿಯಾದ ಬಳಿಕ ಬರ್ತಿದ್ದಾರೆ,
ಇಂದು, ನಾಳೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡುತ್ತೇವೆ
ರಾಜ್ಯದ ಅಧ್ಯಕ್ಷರ ಸಮಸಕ್ಷಮ ಚರ್ಚೆ ಮಾಡುತ್ತೇವೆ.
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತೇವೆ.ಒಂ ದು ಸುತ್ತು ಈಗಾಗಲೇ ಚರ್ಚೆ ನಡೆಸಲಾಗಿದೆ.ಗ್ರಾ ಮ ಪಂಚಾಯತಿ ಚುನಾವಣೆ ಸಂಘಟನೆ ಬಲಪಡಿಸಲು ಅನಕೂಲ ಆಗುತ್ತದೆ ಎಂದು ಸಿಎಂ ಹೇಳಿದರು.
ಅರುಣ ಸಿಂಗ್ ಬಂದ ಮೇಲೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಅವರ ಸಂದೇಶ ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಸಂಪುಟ ವಿಸ್ತರಣೆ ಸಂಬಂದ ಅರುಣ ಸಿಂಗ್ ಸಂದೇಶ ತಂದಿದ್ದಾರೆ.ಅವರ
ಸಂದೇಶ ಏನಿದೆ ನೋಡಿ ವಿಸ್ತರಣೆ, ಪುನರ್ ರಚನೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ.
ರಾಜ್ಯದ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲಾ ವಿಚಾರ ಚರ್ಚೆ ಮಾಡುತ್ತೇವೆ. ಬಿಬಿಎಂಪಿ ಚುನಾವಣಾ ಬಗ್ಗೆ ಹೈಕೋರ್ಟ್ ತೀರ್ಮಾನ. ಈ ಬಗ್ಗೆ ಮಾಹಿತಿ ಸಿಕ್ಕಿದೆ ನೋಡೊಣ ಎಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.