ಬೆಳಗಾವಿ-ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು ಈ ಚುನಾವಣಾ ಪ್ರಚಾರಕ್ಕೆ ಬೆಳಗಾವಿ ಜಿಲ್ಲೆಗೆ ಆಗಮಿಸಿರುವ ಸಿಎಂ ಬಿಎಸ್‌ವೈಅವರು ತೆರಳುತ್ತಿದ್ದ ಕಾರು ತಡೆದ ಹಿರೇಬಾಗೇವಾಡಿ ಚೆಕ್ ಪೋಸ್ಟ್ ಸಿಬ್ಬಂಧಿ ಕಾರು ತಪಾಸಣೆ ಮಾಡಿದರು.
ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ನಲ್ಲಿ ಸಿಎಂ ಕಾರನ್ನು ಸಹ ತಪಾಸಣೆ ಮಾಡಲಾಯಿತು. ಸಿಎಂಮುತ್ನಾಳ ಗ್ರಾಮದಿಂದ ಹಲಗಾ ಗ್ರಾಮಕ್ಕೆ ತೆರಳಿದರು.
ಮುತ್ನಾಳ ಗ್ರಾಮದಲ್ಲಿ ಶ್ರೀಗಳ ಆಶೀರ್ವಾದ.
ಮುತ್ನಾಳ ಗ್ರಾಮದ ಬಸದಿಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಬಾಲಾಲ ಆಚಾರ್ಯ ಸಿದ್ಧಸೇನಾ ಮುನಿ ಆಶೀರ್ವಾದ ಪಡೆದರುಎರಡೂವರೆ ವರ್ಷ ಸಿಎಂ ಆಗಿ ಅವಧಿ ಪೂರೈಸ್ತೀರಿ ಅಂತಾ ಬಿಎಸ್‌ವೈ ಗೆ ಜೈನಮುನಿ ಆಶೀರ್ವಾದ ಮಾಡಿದ್ರು.ಇದಾದ ಬಳಿಕ ಕರ್ನಾಟಕ ರಾಜ್ಯಪಾಲರಾಗುತ್ತೀರಿ,ಇಲ್ಲವೇ ಉಪರಾಷ್ಟ್ರಪತಿ, ರಾಷ್ಟ್ರಪತಿ ಆಗ್ತೀರಿ ಎಂದು ಸಿಎಂ ಬಿಎಸ್‌ವೈಗೆ ಜೈನಮುನಿ,ಹೇಳಿದ ಬಳಿಕ,ಈ ವೇಳೆ ಬೆಳಗಾವಿ ಲೋಕಸಭಾ ಗೆಲ್ತೀವಿ ಇಲ್ಲ ಎಂದು ಸಿಎಂ ಬಿಎಸ್‌ವೈ ಶ್ರೀಗಳಿಗೆ ಪ್ರಶ್ನೆ ಮಾಡಿದಾಗ,ಸುಮಾರು 40 ಸಾವಿರ ಮತಗಳ ಅಂತರದಿಂದ ಮಂಗಲ ಅಂಗಡಿ ಗೆಲ್ತಾರೆ ಎಂದ ಜೈನಮುನಿ ಹೇಳಿದ್ರು
ಕೆಲ ದಿನಗಳ ಹಿಂದೆ ಇದೇ ಜೈನಮುನಿ ಭೇಟಿಯಾಗಿದ್ದ ಡಿಕೆಶಿ,ಇದೇ ಶ್ರೀಗಳ ಆಶಿರ್ವಾದ ಪಡೆದಿದ್ದರು.ರಾಜ್ಯದ ಸಿಎಂ ಆಗುತ್ತೀರಿ ಅಂತಾ ಡಿಕೆಶಿಗೆ ಜೈನಮುನಿ ಆಶೀರ್ವಾದ ಮಾಡೀದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಕಾಂಗ್ರೆಸ್ ಸೋಲು ನಿಶ್ಚಯ…..
ಮುತ್ನಾಳ ಗ್ರಾಮದಲ್ಲಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ,ಮಸ್ಕಿಯಲ್ಲಿ ವಿಜಯೇಂದ್ರ ಹಣದ ಹೊಳೆ ಹರಿಸುತ್ತಿದ್ದಾರೆಂಬ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸೋಲು ನಿಶ್ಚಯವಾದ ಮೇಲೆ ಕಾಂಗ್ರೆಸ್ ನಾಯಕರು, ವಿಜಯೇಂದ್ರ ಮೇಲೆ ಆರೋಪ ಮಾಡುತ್ತಿದ್ದಾರೆ,ಎಲ್ಲಾ ಕಡೆ ಸೋಲು ನಿಶ್ಚಯವಾಗಿದೆ ಹೀಗಾಗಿ ಸಿದ್ದರಾಮಯ್ಯ ಆರೋಪ ಮಾಡ್ತಿದ್ದಾರೆ..ಮಸ್ಕಿ ಸಹಿತ ಮೂರು ಉಪಚುನಾವಣೆಯಲ್ಲಿ ನಾವೇ ಗೆಲ್ತೇವೆ ಎಂದು ಸಿಎಂ ವಿಶ್ವಾಸ ವ್ಯೆಕ್ತ ಪಡಿಸಿದರು.
6ನೇ ವೇತನ ಆಯೋಗ ಜಾರಿ ಸಾಧ್ಯನೇ ಇಲ್ಲ
ನಾಳೆಯಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ ವಿಚಾರವಾಗಿ ಮಾತನಾಡಿದ ಸಿಎಂ ಯಡಿಯೂರಪ್ಪ,6ನೇ ವೇತನ ಆಯೋಗ ಜಾರಿ ಸಾಧ್ಯನೇ ಇಲ್ಲ ಸಾರಿಗೆ ನೌಕರರ ಒಂಬತ್ತು ಬೇಡಿಕೆಯಲ್ಲಿ ಎಂಟು ಬೇಡಿಕೆ ಈಡೇರಿಸಿದ್ದೇವೆ. ಕೋವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲಿಯೂ ಸಂಬಳ ನೀಡಿದ್ದೇವೆ.ಸರ್ಕಾರದಿಂದಲೇ 1200 ಕೋಟಿ ರೂ. ಸಂಬಳ ಸಾರಿಗೆ ಇಲಾಖೆಗೆ ಕೊಟ್ಟಿದ್ದೇವೆ.ಸಾರಿಗೆ ನೌಕರರಲ್ಲಿ ಮುಷ್ಕರ ವಾಪಸ್ ಪಡೆಯಬೇಕೆಂದು ಮನವಿ ಮಾಡ್ತೇನೆ.ಎಂಟು ಬೇಡಿಕೆ ಈಡೇರಿಸಿದ ಮೇಲೂ ಹಠ ಮಾಡುವುದು ಸರಿಯಲ್ಲ,ದಯಮಾಡಿ ಹಠವನ್ನು ಬಿಡಿ ಸಾರ್ವಜನಿಕರಿಗೆ ತೊಂದರೆ ಆಗುತ್ತೆ,ಪರ್ಯಾಯ ವ್ಯವಸ್ಥೆ ಮಾಡ್ತೀವಿ ಅದು ಬೇರೆ ವಿಷಯ, ಟ್ರೇನ್ ಹೆಚ್ಚಿಗೆ ಓಡಿಸುತ್ತೇವೆ, ಖಾಸಗಿ ಬಸ್‌ಗಳಿಗೆ ಪರ್ಮೀಟ್ ಕೊಡ್ತೀವಿ ಅದು ಬೇರೆ ವಿಷಯ,ಕುಳಿತು ಚರ್ಚೆ ಮಾಡೋಣ, ಶ್ರೀಸಾಮಾನ್ಯರಿಗೆ ತೊಂದರೆ ಕೊಡೋದು ಸರಿಯಲ್ಲ ಎಂದು ಸಿಎಂ ಮನವಿ ಮಾಡಿಕೊಂಡರು.
ಸತ್ಯಾಗ್ರಹ ವಾಪಸ್ ಪಡೆಯಬೇಕೆಂದು ಸಾರಿಗೆ ನೌಕರರಲ್ಲಿ ಮನವಿ ಮಾಡುತ್ತೇನೆ.ಆರನೇ ವೇತನ ಜಾರಿಗೆ ತರುವ ಪ್ರಶ್ನೆಯೇ ಇಲ್ಲ, ಇದು ಸಾಧ್ಯವಾಗದ ಪ್ರಶ್ನೆ,ಎಂಟು ಪರ್ಸೆಂಟ್ ವೇತನ ಹೆಚ್ಚಳ ನೀಡಲು ಯೋಚನೆ ಮಾಡಿದ್ದೇವೆ ಅದನ್ನ ಕೊಡ್ತೇವೆ.ನಮ್ಮ ಮಾತಿಗೆ ಬೆಲೆ ಕೊಟ್ಟು ಮುಷ್ಕರ ವಾಪಸ್ ಪಡೀತಾರಾ ಕಾದುನೋಡೋಣ,ಎಂದರು.
ರಾಜ್ಯದಲ್ಲಿ ಲಾಕ್ ಡೌನ್ ಇಲ್ಲ….
ರಾಜ್ಯದಲ್ಲಿ ದಿನೇದಿನೇ ಕೊರೊನಾ ಹೆಚ್ಚಾಗುತ್ತಿದೆ.ಪ್ರಧಾನಿ ಅವರು ನಮ್ಮ ಜೊತೆಗೆ ಮಾತನಾಡುವವರಿದ್ದಾರೆ, ಮಹಾರಾಷ್ಟ್ರ ಗಡಿಯಿಂದ ಬರುವವರನ್ನ ತಡೆಯಬೇಕಾಗುತ್ತದೆ,ಮಹಾರಾಷ್ಟ್ರದಿಂದ ಬರುವವರು ತಪಾಸಣೆ ಮಾಡಿಕೊಂಡು ಬರಬೇಕಾಗುತ್ತದೆ.ಮಹಾರಾಷ್ಟ್ರದಲ್ಲಿ ಜಾಸ್ತಿ ಆಗಿದ್ದರಿಂದ ಇಲ್ಲೂ ಹಬ್ಬಿದೆ.ಜನರು ಕೋವಿಡ್ ನಿಯಮಗಳನ್ನು ಜನರು ಪಾಲಿಸಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಘೋಷಣೆ ಮಾಡುವುದಿಲ್ಲ ಎಂದು ಸಿಎಂ ಹೇಳಿದರು.