ಬೆಳಗಾವಿ- ಗ್ರಾಮೀಣ ಭಾಗದ ಶೇ ೮೦ ರಷ್ಟು ಜನ ಕೋ ಆಪರೇಟಿವ ಸೊಸಾಯಿಟಿಗಳ ಮೇಲೆ ಅವಲಂಭಿತರಾಗಿದ್ದಾರೆ ಸೊಸಾಯಿಟಿಗಳಿಗೆ ಹಳೆಯ ನೋಟು ಸ್ವಿಕರಿಸುವ ಅನುಮತಿ ಕೊಡದೆ ಹೊಸ ನೋಟುಗಳನ್ನು ಬಿಡುಗಡೆ ಮಾಡದೇ ಇರುವದರಿಂದ ಸಹಕಾರಿ ಕ್ಷೇತ್ರಕ್ಕೆ ಲಕ್ವಾ ಹೊಡೆದಂತಾಗಿದೆ ಕೂಡಲೇ ಕೇಂದ್ರ ಸರ್ಕಾರ ಸೊಸಾಯಿಟಿಗಳ ರಕ್ಷಣೆಗೆ ಧಾವಿಸಬೇಕು ಎಂದು ಸೊಸಾಯಿಟಿಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ
ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಸೊಸಾಯಿಟಿಗಳಿದ್ದು ರಿಸರ್ವ ಬ್ಯಾಂಕ ಮಾರ್ಗಸೂಚಿಯಿಂದಾಗಿ ಸೊಸಾಯಿಟಿಗಳಿಗೆ ಹೊಸ ನೋಟುಗಳು ಸಿಗುತ್ತಿಲ್ಲ ಹಳೆಯ ನೋಟುಗಳನ್ನು ಸ್ವೀಕರಿಸುವ ಅನುಮತಿ ಕೊಡದೇ ಇರುವದರಿಂದ ವ್ಯೆವಹಾರ ಸ್ಥಭ್ಧವಾಗಿದ್ದು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಹಕಾರಿ ಸಂಘಗಳಿಗೆ ನ್ಯಾಯದೊರಕಿಸಿ ಕೊಡುವಂತೆ ಸಹಕಾರಿ ಕ್ಷೇತ್ರ ಜಿಲ್ಲಾಡಳಿತಧ ಮೊರೆ ಹೋಗಿದೆ
ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಸಹಕಾರಿ ಕ್ಷೇತ್ರ ಎಚ್ಚರಿಕೆ ನೀಡಿದೆ ಹಳೆಯ ನೋಟಿನ ಪರಿತಾಪ ಹೊಸ ನೋಟಿನ ಬಿಸಿ ತಟ್ಟಲಾರಂಭಿಸಿದ್ದು ಬ್ಯಾಂಕುಗಳ ಮುಂದೆ ದೊಡ್ಡ ಸರದಿ ಕಾಣಲು ಸಿಗುತ್ತಿದೆ