ಬೆಳಗಾವಿ- ಅಂತು ಇಂತೂ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು ಬಿಜೆಪಿ,ಮತ್ತು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ಗೂಡು ಬಿಟ್ಟು ಹೊರಬಂದಿದ್ದು,ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಶುರುವಾಗಿವೆ.
ಬಿಜೆಪಿ ಪಕ್ಷದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ,ಡಾ. ರವಿ ಪಾಟೀಲ,ಕಿರಣ ಜಾಧವ,ಮಹಾಂತೇಶ ಕವಟಗಿಮಠ,ಡಾ.ಸೋನವಾಲ್ಕರ್, ಎಂ.ಬಿ ಝಿರಲಿ,ಉಜ್ವಲಾ ಬಡವನ್ನಾಚೆ,ಬೈಲಹೊಂಗಲ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಸೇರಿದಂತೆ ಅಗಣಿತ ಆಕಾಂಕ್ಷಿಗಳು ಇದ್ದಾರೆ.
ಬಿಜೆಪಿಯ ಯುವ ಕಾರ್ಯಕರ್ತರ ವಲಯದಲ್ಲಿ,ರಾಜೀವ ಟೀಪಣ್ಣವರ,ವಿರೇಶ ಕಿವಡಸಣ್ಣವರ,ರುದ್ರಣ್ಣಾ ಚಂದರಗಿ ಸೇರಿದಂತೆ ಅನೇಕ ಜನ ಯುವ ನಾಯಕರು,ಬಿಜೆಪಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿ,ಲಾಭಿ ನಡೆಸಿದ್ದಾರೆ.
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಆಗಿರುವ ಶಂಕರಗೌಡ ಪಾಟೀಲ ಸಿಎಂ ಬಿ.ಎಸ್ ಯಡಿಯೂರಪ್ಪನವರಿಗೆ ಪರಮಾಪ್ತರಾಗಿದ್ದು,ಬಿಜೆಪಿಯಲ್ಲಿ ನಾನೇ ಸೀನೀಯರ್ ಟಿಕೆಟ್ ನನಗೆ ಕೊಡಬೇಕು,ಅಂತಾ ಅಪ್ಪಾಜಿಯ ಎದುರು ಪಟ್ಟು ಹಿಡಿದಿದ್ದಾರೆ.
ಬುಡಾ ಅದ್ಯಕ್ಷ ಗೂಳಪ್ಪಾ ಹೊಸಮನಿ ಸದ್ದಿಲ್ಲದೇ ಬಿಜೆಪಿ ಟಿಕೆಟ್ ಗಾಗಿ ಗಪ್ ಚುಪ್ ಲಾಭಿ ನಡೆಸಿದ್ದು,ಬುಡಾ ಚಟುವಟಿಕೆ ಮರೆತು ಪದೇ,ಪದೇ ಬೆಂಗಳೂರಿಗೆ ಹೋಗಿ ಅಪ್ಪಾಜಿಯವರ ಹತ್ತಿರ ಕೆಜೆಪಿ ಸೇವೆಯನ್ನು ಮೆಲಕು ಹಾಕುತ್ತಲೇ ಇದ್ದು,ಬುಡಾ ಅದ್ಯಕ್ಷ ಸ್ಥಾನ ಸಿಕ್ಕರೂ ಬಿಜೆಪಿ ಟಿಕೆಟ್ ಗಾಗಿ ಗುಪ್ತವಾಗಿಯೇ ನಿರಂತರ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿಯೂ ಅನೇಕ ಜನ ಆಕಾಂಕ್ಷಿಗಳಿದ್ದು ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಲಾಭಿ ನಡೆಸಿದ್ದು,ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಒಟ್ಟಾರೆ,ಬೆಳಗಾವಿ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಆಕಾಂಕ್ಷಿಗಳಲ್ಲಿ ಹೊಸ ಎನರ್ಜಿ ಬಂದಿದ್ದು ,ಬಿರುಸಿನ ಲಾಭಿ ಈಗ ಶುರುವಾಗಿದೆ.