ಬೆಳಗಾವಿ- ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯ ಒಟ್ಟು 1044 ಜನರ ಮೇಲೆ ನಿಗಾ ಇಟ್ಟಿದ್ದು 33 ಜನ ಕೊರೋನಾ ಶಂಕಿತರ ವರದಿ ನಿರೀಕ್ಷೆಯಲ್ಲಿದೆ
ಜಿಲ್ಲೆಯಲ್ಲಿ 7 ಜನರಿಗೆ ಕೊರೊನಾ ಸೋಂಕಿತರಿದ್ದು ಹೊಸದಾಗಿ 26 ಶಂಕಿತರ ಮಾದರಿ ರವಾನೆ ಮಾಡಲಾಗಿದೆ ಈವರೆಗೆ ಒಟ್ಟು 33 ಜನರ ವರದಿ ನಿರೀಕ್ಷೆಯಲ್ಲಿ ಇರುವ ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಸೊಂಕು ಹರಡದಂತೆ ಹಲವಾರು ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲೆಯಲ್ಲಿ 7 ಜನರಿಗೆ ಸೊಂಕು ತಗಲಿರುವ ರಿಪೋರ್ಟ್ ಬಂದ ಬಳಿಕ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 1044 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ 386 ಜನರಿಗೆ 14 ದಿನಗಳ ಹೋಮ್ ಕ್ವಾರಂಟೈನ್ ಮಾಡಲಾಗಿದೆ. 19 ಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಐಸೊಲೇಷನ್ ಮಾಡಲಾಗಿದ್ದು ಒಟ್ಟು 424 ಜನರಿಗೆ 14 ದಿನಗಳ ಹೋಮ್ ಐಸೊಲೇಷನ್ ಕಂಪ್ಲೀಟ್ ಆಗಿದೆ.
ಒಟ್ಟು 215 ಜನರಿಗೆ 28 ದಿನಗಳ ಹೋಮ್ ಐಸೊಲೇಷನ್ ಕಂಪ್ಲೀಟ್ ಆಗಿದ್ದು ಬೆಳಗಾವಿ ಜಿಲ್ಲೆಯಿಂದ ಈವರೆಗೂ 109 ಜನರ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. 7 ಜನರಿಗೆ ಕೊರೊನಾ ಪಾಸಿಟಿವ್, 69 ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ.
33 ಕೊರೊನಾ ಶಂಕಿತರ ವರದಿ ನಿರೀಕ್ಷೆಯಲ್ಲಿದೆ ಎಂದು ಬೆಳಗಾವಿ ಜಿಲ್ಲಾಡಳಿತ ಹೊರಡಿಸಿರುವ ಹೆಲ್ತ ಬುಲಿಟೀನ್ ನಲ್ಲಿ ತಿಳಿಸಿದೆ.
ಬೆಳಗಾವಿ ಜಿಲ್ಲೆಯ 7 ಜನ ಸೊಂಕಿತರ ಸೆಕೆಂಡ್ರಿ ಕಾಂಟ್ಯಾಕ್ಟ ಬಗ್ಗೆ ಮಾಹಿತಿ ಪಡೆಯುತ್ತಿರುವ ಜಿಲ್ಲಾಡಳಿತ ಸೊಂಕು ಹರಡದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಹಗಲುರಾತ್ರಿ ಶ್ರಮಿಸುತ್ತಿದೆ.