Home / Breaking News / ಊರಿಗೆ ಉಪಕಾರಿಯಾದ,ಅಬಕಾರಿ ಇಲಾಖೆ 600 ಲೀ ಕಳ್ಳಬಟ್ಟಿ ಸರಾಯಿ ವಶ

ಊರಿಗೆ ಉಪಕಾರಿಯಾದ,ಅಬಕಾರಿ ಇಲಾಖೆ 600 ಲೀ ಕಳ್ಳಬಟ್ಟಿ ಸರಾಯಿ ವಶ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸರಾಯಿ ದಂಧೆಗೆ ಬ್ರೆಕ್ ಹಾಕಲು ಜಿಲ್ಲೆಯ ವಿವಿದೆಡೆ ದಾಳಿ ಮಾಡಿ 21 ಜನ ಆರೋಪಿಗಳನ್ನು ಬಂಧಿಸಿದೆ.

ಜಿಲ್ಲೆಯಲ್ಲಿ ಕಳ್ಳಬಟ್ಟಿ ಸರಾಯಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ,ಎನ್ನುವ ಆರೋಪ ಕೇಳಿ ಬರುತ್ತಿದ್ದಂತೆಯೇ ಕುಂಬಕರ್ಣ ನಿದ್ದೆಯಿಂದ ಎಚ್ಚೆದ್ದ ಅಬಕಾರಿ ಇಲಾಖೆ,ಜಿಲ್ಲೆಯ ವಿವಿದೆಡೆ ದಾಳಿ ಮಾಡಿ 37 ಪ್ರಕರಣ ದಾಖಲಿಸಿ,21 ಜನ ಆರೋಪಿಗಳನ್ನು ಬಂಧಿಸಿ ಸುಮಾರು 600 ಲೀಟರ್ ಸರಾಯಿ ವಶಪಡಿಸಿ 21 ವಾಹನಗಳನ್ನು ಜಪ್ತು ಮಾಡಿದೆ.

ಮಹಾಮಾರಿ ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ಕಳ್ಳಬಟ್ಟಿ ಸರಾಯಿ ದಂಧೆ ಬೆಳಗಾವಿ ಜಿಲ್ಲೆಯಲ್ಲಿ ಜೋರಾಗಿಯೇ ನಡೆದಿತ್ತು. ಸ್ಕ್ವಾಚ್ ಕುಡಿಯುತ್ತಿದ್ದವರು ಕಳ್ಳಬಟ್ಟಿ ಸರಾಯಿಯ ದಾಸರಾಗಿದ್ದರು.

ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಹೊರಡಿಸಿರುವುದರಿಂದ ಜಿಲ್ಲೆಯಾದ್ಯಂತ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಿಕೆಗಳು ನಡೆಯದಂತೆ ಅಬಕಾರಿ ತಂಡಗಳನ್ನು ರಚಿಸಿರುತ್ತದೆ.

ದಿನಾಂಕ 24-03-2020 ರಿಂದ ಇಲ್ಲಿಯವರೆಗೆ ಅಕ್ರಮ
ಕೇಂದ್ರಗಳಲ್ಲಿ ನಿರಂತರವಾಗಿ ಅಬಕಾರಿ ದಾಳಿ, ಹಗಲು ರಾತ್ರಿ ಗಸ್ತು. ರಸ್ತೆಗಾವಲು ನಡೆಸಿ, ವಾಹನಗಳನ್ನು
ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗಿರುತ್ತದೆ. ಒಟ್ಟಾರೆಯಾಗಿ ಬೆಳಗಾವಿ ಜಿಲ್ಲಾದ್ಯಂತ ಇಲ್ಲಿಯವರೆಗೆ ಒಟ್ಟು 353 ದಾಳಿಗಳನ್ನು ನಡೆಸಿ, 37 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು 21 ಆರೋಪಿಗಳನ್ನು ಬಂಧಿಸಿ 12.340ಅ ಮದ್ಯ, 27 ಗೋವಾ ಮದ್ಯ 40 ಸೇಂಧಿ, 50ಅ ಬೆಲ್ಲದ ಕೊಳೆ, 17.28೦೨೬ ಸಂತ್ರಾ.
10ಅ ಕಾಜು 537.900ಅ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡು 25 ದ್ವಿಚಕ್ರ ವಾಹನ. 01 ಆಟೋ
ರಿಕ್ಷಾ. 02 ಗೂಡ್ಸ್ ವಾಹನ ( ಒಟ್ಟು 27 ವಾಹನಗಳು) ಜಪ್ತುಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಒಟ್ಟು
ಮೌಲ್ಯ ರೂ. 22 ಲಕ್ಷ.ಗಳು ಆಗುತ್ತದೆ.

ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯಾದ್ಯಂತ ಜಿಲ್ಲಾಡಳಿತ, ಪೊಲೀಸ್
ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ವಾರ್ತಾ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಒಟ್ಟು 915೦ ೨e
ಸಾನಿಟೈಜರ್‌ನ್ನು ಹಂಚಿಕೆ ಮಾಡಿರುತ್ತದೆ ಎಯ ಅಬಕಾರಿ ಉಪ ಆಯುಕ್ತರಾದ ಬಸವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *