ಬೆಳಗಾವಿಯಲ್ಲಿ ಕೋವೀಡ್ ಎರಡನೇಯ ಪರ್ವದ, ಮೊದಲ ಮೀಟೀಂಗ್ …!!
ಬೆಳಗಾವಿ- ಕೋವೀಡ್ ಮಹಾಮಾರಿ ಹೋಯ್ತಲ್ಲ ಎಂತು ನಿಟ್ಟುಸಿರು ಬಿಟ್ಟ ಜನರಿಗೆ ಮಹಾಮಾರಿಯ ಆತಂಕ ಮತ್ತೆ ಶುರುವಾಗಿದೆ.ಅತ್ತ ರಾಜಧಾನಿಯಲ್ಲಿ ಮುಖ್ಯಮಂತ್ರಿ ಸುದ್ರಾಮಯ್ಯ ಅಧಿಕಾರಿಗಳ ಸಭೆ ಕರೆದು ಕೋವೀಡ್ ಕುರಿತು ಮುಂಜಾಗ್ರತೆ ವಹಿಸುವಂತೆ ಸೂಚನೆ ಕೊಡುತ್ತಿದ್ದಂತೆಯೇ ಇತ್ತ ಬೆಳಗಾವಿಯಲ್ಲೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಭೀಮ್ಸ್ ಆಸ್ಪತ್ರೆಯ ಕಚೇರಿಯಲ್ಲಿ ಕೋವೀಡ್ ಮುಂಜಾಗ್ರತಾ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಶಾಸಕ ರಾಜು ಸೇಠ, ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಭೀಮ್ಸ್ ಆಸ್ಪತ್ರೆಯ ಅಧಿಕಾರಿಗಳು ಭಾಗವಹಿಸಿ ಕೋವಿಡ್ ಮತ್ತೆ ಉಲ್ಫಣಿಸಿದ್ರೆ ಯಾವ ರೀತಿಯ ಸಿದ್ಧತೆಗಳನ್ನು ಮುಂಜಾಗ್ರತವಾಗಿ ಮಾಡಿಕೊಳ್ಳಬಹುದು ಎನ್ನುವದರ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಸರ್ಕಾರ ಅರವತ್ತು ವರ್ಷ ತುಂಬಿದ ಹಿರಿಯರಿಗೆ ಮಾಸ್ಕ ಕಡ್ಡಾಯಗೊಳಿಸಿದ್ದು ಬೆಳಗಾವಿಯಲ್ಲೂ ಸರ್ಕಾರದ ಆದೇಶವನ್ನು ಕಡ್ಡಾಯಗೊಳಿಸುವಂತೆ ಡಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಜೊತೆಗೆ ಆಸ್ಪತ್ರೆಯಲ್ಲಿ 30 ಬೆಡ್ ಗಳನ್ನು ರಿಸರ್ವ್ ಮಾಡುವಂತೆ ಸಭೆಯಲ್ಲಿ ತೀರ್ಮಾಣಿಸಲಾಗಿದೆ.ಆಕ್ಸಿಜನ್, ಸೈನಿಟೈಸರ್, ಔಷಧಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮುಂಜಾಗ್ರತವಾಗಿ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಒಟ್ಟಾರೆ ರಾಜ್ಯದಲ್ಲಿ ಮತ್ತೆ ಕೋವೀಡ್ ಆತಂಕ ಎದುರಾಗಿದ್ದು ಸಾರ್ವಜನಿಕರು ಆತಂಕಪಡದೇ ಧೈರ್ಯದಿಂದ ಇದ್ದು ಆರೋಗ್ಯದ ದೃಷ್ಠಿಯಿಂದ ಸರ್ಕಾರದ ನಿಯಮಗಳನ್ನು ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಡಿಸಿ ನಿತೇಶ್ ಪಾಟೀಲ ಹಾಗೂ ಶಾಸಕ ರಾಜು ಸೇಠ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.