ಬೆಳಗಾವಿ- ನೀವು ಮಹಾರಾಷ್ಟ್ರದಿಂದ ಬಂದಿದ್ದೀರಾ,ನೀವು ಹೋಮ್ ಕ್ವಾರಂಟೈನ್ ಆಗಬೇಕು,ಎಂದು ತಿಳುವಳಿಕೆ ಹೇಳಲು ಹೋದ,ಪಿಡಿಓ ಮತ್ತು ತಲಾಠಿಯ ಮೇಲೆ ಹಲ್ಲೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮರಣಹೋಳ ಗ್ರಾಮದಲ್ಲಿ ನಡೆದಿದೆ.
ಮರಣಹೋಳ ಗ್ರಾಮದಲ್ಲಿ ಮಹಾರಾಷ್ಟ್ರದಿಂದ ಹನ್ನೆರಡು ಜನ ಬಂದಿರುವ ಸುದ್ಧಿ ಜಿಲ್ಲಾಡಳಿತಕ್ಕೆ ಗೊತ್ತಾಗಿದೆ.ಮಾಹಿತಿ ಗೊತ್ತಾದ ಬಳಿಕ ತಾಲೂಕಾ ಆರೋಗ್ಯ ಅಧಿಕಾರಿ ಡೂಮಗಳ ,ಮತ್ತು ತಹಶೀಲ್ದಾರ ಇಬ್ಬರೂ ಅಧಿಕಾರಿಗಳು ಮರಣಹೋಳ ಗ್ರಾಮಕ್ಕೆ ಭೇಟಿ ನೀಡಿ ಮಹಾರಾಷ್ಟ್ರದಿಂದ ಬಂದಿರುವ ಹನ್ನೆರಡು ಜನರನ್ನು ಕೂಡಿಸಿ ಸರ್ಕಾರದ ನಿಯಮಗಳನ್ನು ಪಾಲಿಸಿ ಆರೋಗ್ಯ ಇಲಾಖೆಯ ನಿಗಾದಲ್ಲಿ ಇರುವಂತೆ ತಾಕೀತು ಮಾಡಿ ಬಂದಿದ್ದಾರೆ.
ನಂತರ ಪಿಡಿಓ,ತಲಾಠಿ,ಮತ್ತು ಆರೋಗ್ಯ ಸಹಾಯಕಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಮರಣಹೋಳ ಗ್ರಾಮಕ್ಕೆ ಹೋಗಿ ಮಹಾರಾಷ್ಟ್ರದಿಂದ ಬಂದಿರುವ ಹನ್ನೆರಡು ಜನರನ್ನು ಕ್ವಾರಂಟೈನ್ ನಲ್ಲಿ ಇರುವಂತೆ ಹೇಳಿದಾಗ,ಪಿಡಿಓ ಮತ್ತು ತಲಾಠಿಯ ಮೇಲೆ ಹಲ್ಲೆ ಮಾಡಿದ್ದಾರೆ.ಈ ಗದ್ದಲದ ನಡುವೆ ಆರೋಗ್ಯ ಸಹಾಯಕಿ ಅಲ್ಲಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ ಎಂದು ತಿಳಿದು ಬಂದಿದೆ .
ಈ ಪ್ರಕರಣ ಈಗ ಕಾಕತಿ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದು ವಿಚಾರಣೆ ಮುಂದುವರೆದಿದೆ.