Breaking News
Home / Breaking News / ಆ ಕಡೆ ಅಂಕಲಗಿ ರಾಜ್….ಈ ಕಡೆ ಚನ್ನರಾಜ್. ಇಬ್ಬರಲ್ಲಿ ಯಾರಾಗ್ತಾರೆ ಜೈ ರಾಜ್…. ..!!

ಆ ಕಡೆ ಅಂಕಲಗಿ ರಾಜ್….ಈ ಕಡೆ ಚನ್ನರಾಜ್. ಇಬ್ಬರಲ್ಲಿ ಯಾರಾಗ್ತಾರೆ ಜೈ ರಾಜ್…. ..!!

ಬೆಳಗಾವಿ ತಾಲ್ಲೂಕಿನಲ್ಲಿ ರಾಜರ, ನಡುವೆ ಮಹಾಯುದ್ಧ…..!!

ಬೆಳಗಾವಿ – ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.ನಿರ್ದೇಶಕರಾಗಲು ಘಟಾನುಘಟಿಗಳು ತಯಾರಿ ನಡೆಸಿದ್ದು ಹಳೆ ಹುಲಿಗಳು,ಹೊಸ ಹುಲಿಗಳ ನಡುವೆ ಕದನ ನಡೆಯುವದು ಖಚಿತ.

ಡಿಸಿಸಿಸಿ ಬ್ಯಾಂಕಿಗೆ ಒಟ್ಟು 16 ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ,ಅದರಲ್ಲಿ ಹತ್ತು ಜನ ನಿರ್ದೇಶಕರು,ಪ್ರತಿ ತಾಲ್ಲೂಕಿಗೆ ಒಬ್ಬರಂತೆ,ಹತ್ತು ಜನ ನಿರ್ದೇಶಕರು ಆಯ್ಕೆಯಾಗುತ್ತಾರೆ.

ಈ ಹತ್ತು ಜನ ನಿರ್ದೇಶಕರನ್ನು ಆಯಾ ತಾಲ್ಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳು ಆಯ್ಕೆ ಮಾಡುತ್ತವೆ. ಈ ಬಾರಿ ಹತ್ತು ತಾಲ್ಲೂಕುಗಳಲ್ಲಿ ತೀವ್ರ ಪೈಪೋಟಿ ನಡೆಯುವ ಎಲ್ಲ ಲಕ್ಷಣಗಳು ಗೋಚರವಾಗಿವೆ.

ಅದರಲ್ಲಿಯೂ ಬೆಳಗಾವಿ ತಾಲ್ಲೂಕು,ಈಬಾರಿ ರಾಜ್ಯದ ಗಮನ ಸೆಳೆಯುವದರಲ್ಲಿ ಎರಡು ಮಾತಿಲ್ಲ.ಯಾಕಂದ್ರೆ ಉಮೇಶ್ ಕತ್ತಿ ಗುಂಪಿನ ರಾಜು ಅಂಕಲಗಿ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರ ನಡುವೆ,ಸಮರ ನಡೆಯಲಿದೆ.

ಒಂದು ಕಡೆ ಅಂಕಲಗಿ ರಾಜ್,ಇನ್ನೊಂದು ಕಡೆ ಚನ್ನರಾಜ್ ಈ ಬಾರಿ ಇಬ್ಬರೂ ರಾಜ್ ಗಳ ನಡುವೆ ಮಹಾಯುದ್ಧ ನಡೆಯುವದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.

ಚನ್ನರಾಜ್ ಹಟ್ಟಿಹೊಳಿ ಕಳೆದ ಒಂದು ವರ್ಷದಿಂದ ಬೆಳಗಾವಿ ತಾಲ್ಲೂಕಿನ ಸೊಸೈಟಿಗಳಲ್ಲಿ ಸಂಪರ್ಕ ಬೆಳೆಸಿದ್ದಾರೆ,ಜೊತೆಗೆ ಹೇಗಾದರೂ ಮಾಡಿ ಈ ಬಾರಿ ರಾಜು ಅಂಕಲಗಿ ಅವರನ್ನು ಸೋಲಿಸಿ ತಾವು ಗೆಲ್ಲಲೇಬೆಕೆಂಬ ಹಠಕ್ಕೆ ಬಿದ್ದಿರುವದರಿಂದ,ರಾಜು ಅಂಕಲಗಿ ಅವರಿಗೆ ಈಬಾರಿ ಗೆಲುವು ಅಷ್ಟು ಸುಲಭ ಅಲ್ಲ.

ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ನಗಣ್ಯ ಯಾಕಂದ್ರೆ ಇದು ವ್ಯೆಯಕ್ತಿಕ ವರ್ಚಸ್ಸು,ಹಣಬಲದ ಮೇಲೆ ನಡೆಯುವ ಚುನಾವಣೆಯಾಗಿದ್ದು,ರಾಜು ಅಂಕಲಗಿ ಅವರಿಗೆ ಉಮೇಶ್ ಕತ್ತಿ ಸೇರಿದಂತೆ ಹಲವು ಪ್ರಭಾವಿ ನಾಯಕರ ಸಪೋರ್ಟ್ ಇದೆ.ಇನ್ನೊಂದು ಕಡೆ ಚನ್ನರಾಜ್ ಕಡೆ, ಸಪೋರ್ಟ್ ಜೊತೆಗೆ ಏನು ಬೇಕೋ ಅದೆಲ್ಲವೂ ಇದೆ. ಈ ಮಹಾಯುದ್ಧ ದಲ್ಲಿ ಗೆಲುವು ಯಾರಾಗ್ತಾರೆ ಎನ್ನುವದನ್ನು ಕಾದು ನೋಡಬೇಕಾಗಿದೆ.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *