Breaking News

ನಕಲಿ ಚೈನು ಇಟ್ಟ…ಅಸಲಿ ಚೈನು ಕದ್ದ..ಪೋಲೀಸರ ಕೈಗೆ ಸಿಕ್ಕಿಬಿದ್ದ…!!!

ಬೆಳಗಾವಿ-ಕಳ್ಳರು ಯಾವ ಯಾವ ರೀತಿ ತಮ್ಮ ಕೈಚಳಕ ತೋರಿಸಿ ಕಳ್ಳತನ ಮಾಡ್ತಾರೆ ಎನ್ನುವದನ್ನು ಕಲ್ಪನೆ ಕೂಡಾ ಮಾಡಿಕೊಳ್ಳಲು ಸಾಧ್ಯವಿಲ್ಲ ಬೆಳಗಾವಿಯ ಗಣಪತಿ ಗಲ್ಲಿಯಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೇಲ್ಸಮನ್ ಯಾವ ರೀತಿ ತನ್ನ ಮಾಲೀಕನ ಕಣ್ಣಲ್ಲಿ ಮನ್ನೆರಚಿದ ಚಿನ್ನ ಕದ್ದ ಅನ್ನೋದರ ಬಗ್ಗೆ ಸ್ಟೋರಿ ಇಲ್ಲಿದೆ ಓದಿ

ಬೆಳಗಾವಿಯ ಗಣಪತಿ ಗಲ್ಲಿಯ ಮುತಗೇಗಕರ ಜ್ಯುವಲರ್ಸ ಅಂಗಡಿಯಲ್ಲಿ ಶಿವಾಜಿನಗರದ ಪ್ರಶಾಂತ ಓಬಳೇಶ್ವರ ದೈವಜ್ಞ ಎಂಬಾತ ಹಲವಾರು ವರ್ಷಗಳಿಂದ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕನಿಗೆ ದಂಧೆಯಲ್ಲಿ ಪೂರ್ಣ ಜ್ಞಾನ ಇಲ್ಲದ ಕಾರಣ ಇತ ಸೇಲ್ಸಮನ್ ಮೇಲೆ ನಂಬಿಕೆ ಇಟ್ಟಿದ್ದ

ಸೇಲ್ಸಮನ್ ಪ್ರಾಶಾಂತ ಶಾಂತವಾಗಿರದೇ ತನ್ನ ದುರ್ಬುದ್ಧಿ ತೋರಿಸಿ ಬಿಟ್ಟ ಅಂಗಡಿಯ ಕಪಾಟಿನಲ್ಲಿದ್ದ ಅಸಲಿ ಚಿನ್ನದ ಸರಗಳನ್ನು ತನ್ನ ಜೇಬಿಗೆ ಹಾಕಿ ನಕಲಿ ಚೈನುಗಳನ್ನ ಕಪಾಟಿನಲ್ಲಿಡುತ್ತಿದ್ದ ಹೀಗೆ ಈ ಚಾಲಾಕಿ ಸೇಲ್ಸಮನ್ ಬರೊಬ್ಬರಿ 640 ಗ್ರಾಂ ತೂಕದ ನಲವತ್ತು ಚೈನುಗಳನ್ನು ಕಳುವು ಮಾಡಿದ್ದ

ಒಮ್ಮೆ ಈ ಸೇಲ್ಸಮನ್ ರಜೆ ಇರುವಾಗ ಅಂಗಡಿ ಮಾಲೀಕ ನಕಲಿ ಚೈನು ಮಾರಾಟ ಮಾಡಿದ ಈ ಗಿರಾಕಿ ತಾನು ಖರೀಧಿಸಿದ ಚೈನು ಅಸಲಿ ಅಲ್ಲ ನಕಲಿ ಎಂದು ಅಂಗಡಿಯ ಎದುರು ರಂಪಾಟ ಮಾಡಿದ ನಂತರವೇ ಸೇಲ್ಸಮನ್ ಮಾಡಿದ ಕರಾಮತ್ತು ಬಯಲಾಗಿದೆ

ಗುಟ್ಟು ರಟ್ಟಾಗುತ್ತಿದ್ದಂತೆಯೇ ಈ ಸೇಲ್ಸಮನ್ ಪರಾರಿಯಾಗಿದ್ದ ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕಡಿದ್ದ ಸಿಸಿಬಿ ಪೋಲಿಸ್ ಇನೆಸ್ಪೆಕ್ಟರ್ ಗಡ್ಡೇಕರ ಕಳ್ಳ ಸೇಲ್ಸಮನ್ ನನ್ನು ಬಂಧಿಸಿ ನಲವತ್ತು ಅಸಲಿ ಚೈನುಗಳನ್ನು ವಶ ಪಡಿಸಿಕೊಂಡು ನಕಲಿ ಚೈನುಗಳನ್ನು ಇತನ ಕೊರಳಿಗೆ ಹಾಕಿ ಖಡೇಬಝಾರ ಪೋಲೀಸರಿಗೆ ಒಪ್ಪಿಸಿದ್ದಾರೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *