Breaking News

ನಮ್ಮೂರಲ್ಲಿ ಲವ್..ಡವ್..ನಡ್ಯಾಂಗಿಲ್ಲ..ಮಾಡಿದ್ರೆ ಉರಲ್ಲಿ ಇರಾಂಗಿಲ್ಲ..!!!

ಬೆಳಗಾವಿ- ಪ್ರೀತಿ ಮಾಡಿ ಮದುವೆಯಾದ ಲವರ್ಸಗಳಿಗೆ ಗ್ರಾಮದ ಹಿರಿಯರು ಬದುಕಲು ಬಿಡುತ್ತಿಲ್ಲ ನಮ್ಮೂರಲ್ಲಿ ಲವ್.ಡವ್.ನಡ್ಯಾಂಗಿಲ್ಲ ಮಾಡಿದ್ರೆ ಉರಲ್ಲಿ ಇರಾಂಗಿಲ್ಲ ಅಂತ ಪ್ರೇಮಿಗಳಿಗೆ ಗ್ರಾಮ ಬಹಿಷ್ಕಾರ ಹಾಕಿದ ಘಟನೆ ನಡೆದಿದೆ

ಪ್ರೀತಿಸಿದವರಿಗೆ ಅಡ್ಡಿ ಆತಂಕಗಳಿಗೇನು ಕಮ್ಮಿ. ಎಲ್ಲವನ್ನ ಮೆಟ್ಟಿ ಮದುವೆಯಾದ್ರು ನೆಮ್ಮದಿ ಬದುಕು ಕಟ್ಟಿಕೊಳ್ಳಲು ನಮ್ಮ ವ್ಯವಸ್ಥೆ ಬಿಡುತ್ತಿಲ್ಲ. ಅಂತರಜಾತಿ ಎಂಬ ಕಾರಣಕ್ಕೆ ಈ ಜೋಡಿ ಹಕ್ಕಿಗಳನ್ನ ಊರಿಂದಲೆ ಬಹಿಷ್ಕಾರ ಹಾಕಿ ಜೀವನವೇ ನರಕಾಗಿಸಿದ್ದಾರೆ.

ಜೋಡಿ ಹಕ್ಕಿಗಳ ಹೆಸರು ಬಸವರಾಜ ಪೂಜಾರ, ಮಂಜುಳಾ ಪೂಜಾರ. ಬೆಳಗಾವಿ ಜಿಲ್ಲೆಯ ಸೌದವತ್ತಿ ತಾಲೂಕಿನ ಮೂಗಲಿಹಾಳ ಗ್ರಾಮದವರು. ಕಳೆದ ಮೂವರು ವರ್ಷದಿಂದ ಪ್ರೀತಿಸಿ, 8 ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಆದ್ರೆ ಮಂಜುಳಾ ಕುರುಬ ಸಮುದಾಯದವಳು. ಬಸವರಾಜ ಜೈನ ಸಮುದಾಯದವನು. ಮೂಗಲಿಹಾಳ ಗ್ರಾಮದಲ್ಲಿ ಕುರುಬ ಸಮುದಾಯದ ಮನೆತನಗಳು ಹೆಚ್ಚಾಗಿದ್ದರಿಂದ ಜಾತಿ ಇವರಿಗೆ ಅಡ್ಡಿಯಾಗಿದೆ. ವಿವಾಹವಾದ ದಿನದಿಂದ ಇಬ್ಬರು ಪ್ರೇಮಿಗಳು ಗ್ರಾಮದಲ್ಲಿ ಬದುಕು ಕಟ್ಟಿಕೊಳ್ಳದಂತೆ ಹಿಂಸೆ ನಿರ್ಮಿಸಲಾಗಿದೆ.

ಇನ್ನು ಮಂಜುಳಾ ಕುಟುಂಬಸ್ಥರು ನೀಡುತ್ತಿರುವ ಕಿರುಕುಳದ ಬಗ್ಗೆ ಪ್ರೇಮಿಗಳಿಬ್ಬರು ಸೌವದತ್ತಿಯ ಮುರಗೋಡ ಠಾಣೆಯಲ್ಲಿ ದೂರು ದಾಖಲಿಸಿ, ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾರೆ. ಕೇಸ್‌ ದಾಖಲಿಸಿ 15 ದಿನ ಕಳೆದ್ರು ಪೊಲೀಸ್ರು ಈ ಪ್ರೇಮಿಗಳಿಗೆ ನ್ಯಾಯ ಒದಗಿಸುತ್ತಿಲ್ಲ. ಹೀಗಾಗಿ ಕಳೆದ 8 ತಿಂಗಳಿಂದ ಬಸವರಾಜ ಮತ್ತು ಮಂಜುಳಾ ಸ್ವಗ್ರಾಮಕ್ಕೆ ಹೋಗಿ ಬದುಕು ಕಟ್ಟಿಕೊಳ್ಳಲು ಆಗುತ್ತಿಲ್ಲ. ಊರಿಗೆ ಬಂದ್ರೆ ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರೇಮಿಗಳು ತಮ್ಮ ಸಹಾಯಕತೆ ತೊಡಿಕೊಳ್ಳುತ್ತಾರೆ.

ಒಟ್ಟ್ನಲ್ಲಿ ಒಂದೆಡೆ ಸರ್ಕಾರಗಳು ಅಂತರಜಾತಿ ವಿವಾಹವಾದವರಿಗೆ ಪ್ರೋತ್ಸಾಹಿಸುವ ಅನೇಕ ಯೋಜನೆ ಜಾರಿಗೊಳಿಸಿದ್ರೆ. ಇನ್ನೊಂದೆಡೆ ಪ್ರೀತಿಸಿ ಮದುವೆ ಆದವರಿಗೆ ರಕ್ಷಣೆಯಿಲ್ಲ ಎಂಬುದಕ್ಕೆ ಈ ಪ್ರೇಮಿಗಳೇ ಸಾಕ್ಷಿ. ಇನ್ನಾದ್ರು ಪೊಲೀಸ್‌ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

 

Check Also

ಎರಡು ಗ್ರಾಮಗಳಿಗೆ ದೀಪಾವಳಿ ಗೀಫ್ಟ್ ಕೊಟ್ಟ ಸಾಹುಕಾರ್….!!

ತಿಗಡಿ ಮತ್ತು ಅವರಾದಿ ಗ್ರಾಮಗಳಿಗೆ ದಸರಾ ಹಬ್ಬದ ಗಿಫ್ಟ್ ಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಗಡಿ, ಅವರಾದಿಗೆ ಪದವಿ ಪೂರ್ವ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.