Breaking News

ತೋರಿಸಿದ್ರೆ….ತ್ರಾಸ್…..ಆಗತೈತಿ….!!!!

ಬೆಳಗಾವಿ- ಫೇಸ್ ಬುಕ್ ,ಇನಸ್ಟಾಗ್ರಾಮ್ ನಲ್ಲಿ ನಿಮ್ಮ ಪೋಟೋ ನೋಡಿ,ಲೈಕ್ ಮಾಡಿ,ನಂತರ ಮೆಸ್ಸೇಂಜರ್ ನಲ್ಲಿ ಚಾರ್ಟಿಂಗ್ ಮಾಡಿ,ಆಮೇಲೆ ವಿಡಿಯೋ ಕಾಲ್ ಮಾಡಿ,ಅಶ್ಲೀಲ ಸಂಬಾಷಣೆ ಮಾಡಿ,ನಂತರ ಅಶ್ಲೀಲ ಫೋಜ್ ತೋರಿಸಿ, ನಿಮಗೂ ಫೋಜ್ ಕೊಡುವಂತೆ ಹೇಳಿ,ಅದನ್ನು ವಿಡಿಯೋ ರಿಕಾರ್ಡ್ ಮಾಡಿ,ಆ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಲೀಕ್ ಮಾಡ್ತೇವಿ ಅಂತಾ ಹೆದರಿಸಿ ಬ್ಲ್ಯಾಕ್ ಮೇಲ್ ಮಾಡುವ ಗ್ಯಾಂಗ್ ಬೆಳಗಾವಿಯಲ್ಲಿ ಕ್ರಿಯಾಶೀಲ ವಾಗಿದೆ.ಎಚ್ಚರ..ಎಚ್ಚರ..ಎಚ್ಚರ…

ಈ ವಿಡಿಯೋ ಕಾಲಿಂಗ್ ಗ್ಯಾಂಗ್ ಗೆ ಬೆಳಗಾವಿಯಲ್ಲಿ ಬಹಳಷ್ಟು ಜನ ಮೋಸ ಹೋಗಿದ್ದಾರೆ.ಅವರು ಕೇಳಿದಷ್ಟು ಹಣ ಕೊಟ್ಟು ವಂಚನೆಗೊಳಗಾಗಿದ್ದಾರೆ. ಕೆಲವರು ದುಡ್ಡು ಕೊಡಕ್ಕಾಗದೇ ಕಂಗಾಲ್ ಆಗಿ ,ಧೈರ್ಯ ಮಾಡಿ ತಮಗಾದ ಮೋಸದ ಕುರಿತು ಬೆಳಗಾವಿಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ಕೊಟ್ಟ ಬಳಿಕ,ಈ ಹೈಟೆಕ್ ಸೆಕ್ಸಿ ವಂಚನೆ ಬೆಳಕಿಗೆ ಬಂದಿದೆ.

ಸಿಪಿಐ ಗಡ್ಡೇಕರ ಸೈಬರ್ ಕ್ರೈಂ ,C E N ಠಾಣೆಯ ಇನಸ್ಪೆಕ್ಟರ್ ಆದ ಬಳಿಕ ,ಅನೇಕ ಸೈಬರ್ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿ,ಹಲವಾರು ಪ್ರಕರಣಗಳಲ್ಲಿ ವಂಚಕರಿಂದ ಹಣ ರಿಕವರಿ ಮಾಡಿದ ನಂತರ,ಸಾರ್ವಜನಿಕರು ಸೈಬರ್ ಕ್ರೈಂ ಠಾಣೆ ಎಲ್ಲಿದೆ ಅಂತಾ ಹುಡುಕಾಟ ಮಾಡಿ ಸೈಬರ್ ವಂಚನೆಯ ಬಗ್ಗೆ ದೂರು ಕೊಡಲು ಶುರು ಮಾಡಿದ್ದಾರೆ.

ವಿಡಿಯೋ ಕಾಲಿಂಗ್ ಜಾಲಕ್ಕೆ ಮರುಳಾಗಿ ಮೈ ಬಿಸಿ ಮಾಡಿಕೊಂಡು ,ನಂತರ ಜೇಬು ಖಾಲಿ ಮಾಡಿಕೊಂಡು,ತೋರಿಸಬಾರದ್ದನ್ನು ತೋರಿಸಿ,ನಂತರ ತ್ರಾಸ ಮಾಡಿಕೊಂಡು,ಈಗ ಸೈಬರ್ ಠಾಣೆಯ ಮೆಟ್ಟಲು ಹತ್ತಿದ್ದಾರೆ.

ಯಾರಾದ್ರು ವಿಡಿಯೋ ಕಾಲ್ ಮಾಡಿ,ಸೆಕ್ಸಿ ಸಂಬಾಷಣೆ ಮಾಡಿದ್ರೆ ಅದಕ್ಕೆ ರಿಸ್ಪಾನ್ಸ್ ಮಾಡಬೇಡಿ,ವಿಡಿಯೋ ಕಾಲಿಂಗ್ ನಲ್ಲಿ ಕಾಣುವ ದೃಶ್ಯ ನೋಡಿ ಕಾಲ್ ಕಟ್ ಮಾಡಿ, ನೋಡಬಾರ್ದನ್ನು,ನೋಡಿ,ತೋರಿಸಬಾರ್ದನ್ನು ತೋರಿಸಿ,ನಂತರ ತ್ರಾಸ ಮಾಡ್ಕೋಬೇಡಿ….

ಸೆಕ್ಸಿ ಕಾಲಿಂಗ್ ಜಾಲದಿಂದ ಬಚಾವ್ ಆಗಿ,ಈ ರೀತಿಯ ಜಾಲಕ್ಕೆ ಯಾರಾದ್ರು ಮೋಸ ಹೋಗಿದ್ದರೆ ಕೂಡಲೇ ಬೆಳಗಾವಿಯ ಮಾರ್ಕೆಟ್ ಠಾಣೆಯ ಪಕ್ಕದಲ್ಲೇ ಇರುವ ಸೈಬರ್ ಠಾಣೆಗೆ ದೂರು ಕೊಡಿ….

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *