ದೋಷ ನಿವಾರಿಸುವದಾಗಿ ಹೇಳಿ ವಂಚಿಸಿದ ಜ್ಯೋತಿಷ್ಯ ಅರೆಸ್ಟ್…..
ಬೆಳಗಾವಿ-ಆನ್ ಲೈನ್ ನಲ್ಲಿ ಯಾವ,ಯಾವ ರೀತಿಯಲ್ಲಿ ವಂಚಿಸುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ.ಈಗ ಆನ್ ಲೈನ್ ಅಭಿಷೇಕ ಮಾಡಿಸುತ್ತೇವೆ. ಈ ಅಭಿಷೇಕ ಮಾಡಿದ ಬಳಿಕ ಮಕ್ಕಳಾಗುತ್ತವೆ,ಎಂದು ನಂಬಿಸಿ ಸಾವಿರಾರು ರೂ ಲಪಟಾಯಿಸಿದ ಭೂಪ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಭಟ್ ಹೆಸರಿನಲ್ಲಿ ಪಾಂಪ್ಲೆಟ್ ಮುದ್ರಿಸಿ ಎಲ್ಲ ದೋಷಗಳಿಗೆ ನಿವಾರಣೆ ಮಾಡುವ ವಿಧಾನ ನಮ್ಮಲ್ಲಿದೆ ಎಂದು ನಂಬಿಸಿ ಸಾವಿರಾರು ರೂ ಗಳನ್ನು ವಂಚಿಸಿದ ನಕಲಿ ಜ್ಯೋತಿಷ್ಯ ನೊಬ್ಬ ಈಗ ಬೆಳಗಾವಿ ಸೈಬರ್ ಪೋಲೀಸರ ಬಲೆಗೆ ಬಿದ್ದಿದ್ದಾನೆ.
ರಾಮ್ ಭಟ್ ಅವರ ಹೆಸರಿನಲ್ಲಿ ಪಾಂಪ್ಲೆಟ್ ಮುದ್ರಿಸಿ ಎಲ್ಲ ರೀತಿಯ ದೋಷ ನಿವಾರಣೆಗೆ ಸಂಪರ್ಕಿಸಿ ಎಂದು, ಸಾರ್ವಜನಿಕರಿಗೆ ಟೋಪಿ ಹಾಕಿದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಸವರಾಜ ದುರ್ಗಪ್ಪ ಬುಡಬುಡಕೇರ, (37) ಈಗ ಬೆಳಗಾವಿ ಸೈಬರ್ ಪೋಲೀಸರ ಅತಿಥಿಯಾಗಿದ್ದಾನೆ .
ಹ್ಯಾಂಡಬಿಲ್ ಗಳನ್ನು ದಿನಪತ್ರಿಕೆಯಲ್ಲಿ ಹಾಕಿ,ವಿತರಿಸಿ ಈತನಿಗೆ ಕಾಲ್ ಮಾಡಿದ ಮಹಿಳೆಯರಿಗೆ ಜ್ಯೋತಿಷ್ಯದ ಪಾಠ ಹೇಳಿ, ಮಕ್ಕಳಾಗಬೇಕಂದ್ರ ಅದಕ್ಕೆ ಅಭಿಷೇಕ ಮಾಡಬೇಕಾಗುತ್ತದೆ,ಫೋನ್ ಪೇ ಮಾಡಿ ಎಂದು ಹಲವಾರು ಜನರನ್ನು ವಂಚಿಸಿದ ಬಸವರಾಜ್ ದುರ್ಗಪ್ಪ ಬುಡಬುಡಕೇರ ವಿರುದ್ದ ಬೆಳಗಾವಿಯ ಸಿಇಎನ್ ಠಾಣೆಗೆ ದೂರು ನೀಡಿದ್ದರು ದೂರು ದಾಖಲಿಸಿಕೊಂಡು ತನಿಖೆ ಮಾಡಿದ ಸಿಇಎನ್ ಇನೆಸ್ಪಕ್ಟರ್ ಗಡ್ಡೇಕರ ಅವರು ಆರೋಪಿಯನ್ನು ಪತ್ತೆ ಮಾಡಿ ಆತನ ಅಕೌಂಟ್ ಸೀಜ್ ಮಾಡಿದ್ದಾರೆ.
ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ಬುಡಬುಡಕೇರ ಈಗ ಪೋಲೀಸರ ವಶದಲ್ಲಿದ್ದು ಸಾರ್ವಜನಿಕರು ಇಂತಹ ವಂಚನೆಯ ಬಗ್ಗೆ ಎಚ್ಚರಿಕೆ ವಹಿಸುವದು ಅತ್ಯಗತ್ಯ..