ಒಂದು ಕೋಟಿ ರೂ ಬಂಗಾರ ಸಮೇತ ಮೂವರು ಖದೀಮರ ಅರೆಸ್ಟ
ಬೆಳಗಾವಿ- ಬೆಳಗಾವಿಯ ಬಾಪಟ ಗಲ್ಲಿಯ ಕಾಳಿಕಾ ದೈವಜ್ಞ ಸೌಹಾರ್ದ ಸೊಸೈಟಿ ಯಲ್ಲಿ ಗ್ರಾಹಕರು ಅಡುವಿಟ್ಟ ನಾಲ್ಕು ಕೆಜಿ ಬಂಗಾರದ ಆಭರಣಗಳನ್ನು ಕದ್ದು ಈ ಆಭರಣಗಳನ್ನು ಮಣಿಪ್ಪುರಂ,ಮುತ್ತೂಟ ಫೈನಾನ್ಸಲ್ಲಿ ಅಡುವಿಟ್ಟು ಲಕ್ಷಾಂತರ ರೂ ಸಾಲ ಪಡೆದು ಮಜಾ ಮಾಡಿದ ಮೂವರು ಜನ ವಂಚರನ್ನು ಬಂಧಿಸಿರುವ ಖಡೇಬಝಾರ್ ಪೋಲೀಸರು ಬಂಧಿಸಿ ಒಂದು ಕೋಟಿ ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ
ಸೊಸೈಟಿಯ ಮ್ಯಾನೇಜರ್ ಮಂಗೇಶ ಶಿರೋಡಕರ ಹಾಗು ಇಬ್ಬರು ಸೇರಿ ಗ್ರಾಹಕರ ಚಿನ್ನವನ್ನು ಬೇರೆ ಬ್ಯಾಂಕಿನಲ್ಲಿ ಅಡುವಿಟ್ಡು ಮೋಸ ಮಾಡಿದ್ದರು ಈ ಕುರಿತು ಬ್ಯಾಂಕಿನ ಚೇರಮನ್ ಖಡೇಬಝಾರ್ ಪೋಲೀಸರಿಗೆ ದೂರು ನೀಡಿದ್ದರು ದೂರು ದಾಖಲಿಸಿಕೊಂಡ ಪೋಲೀಸರು ಮೂರೇ ದಿನದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಒಂದು ಕೋಟಿ ರೂ ಬೆಲೆಯ ಚಿನ್ನಾಭರಣ ವಶ ಪಡಿಸಿಕೊಂಡಿರುವ ಖಡೇಬಝಾರ್ ಪೋಲೀಸರು ಖಾಕಿ ಖದರ್ ತೋರಿಸಿದ್ದಾರೆ
ಸೊಸೈಟಿಯ ಮ್ಯಾನೇಜರ್ ಮಂಗೇಶ ಶಿರೋಡಕರ ,ಮಾರಿಹಾಳ ಗ್ರಾಮದ ಶ್ರೀಶೈಲ ಯಮನಪ್ಪಾ ತಾರಿಹಾಳ,ಮಾರುತಿ ರಾಯ್ಕರ್ ಬಂಧಿತ ಆರೋಪಿತರಾಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ