Breaking News

ಸಿನಿಮಾ ನೋಡಿ ಅದೇ ಮಾದರಿಯಲ್ಲಿ, ಮರ್ಡರ್ ಮಾಡಿದ ತ್ರೀ..ಇಡಿಯಟ್ಸ್…!!

ಬೆಳಗಾವಿ: ದೃಶ್ಯ ಸಿನೇಮಾ ನೋಡಿ ಅದೇ ಮಾದರಿಯಲ್ಲೇ ಹತ್ಯೆ ಮಾಡಿದರು, ಆ ಚಿತ್ರದಲ್ಲಿ ಹತ್ಯೆ ಮಾಡಿದವರು ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ಆದರೆ, ಇಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಿಯಲ್ ಎಸ್ಟೇಟ್ ಏಜೆಂಟ್ ಸುಧೀರ ಕಾಂಬಳೆ ಹತ್ಯೆ ಪ್ರಕರಣವನ್ನು ಬೇಧಿಸಿದ್ದಾರೆ. ಸುಧೀರನ ಪಾಲಿಗೆ ಹೆಂಡತಿ, ಮಗಳು, ಮಗಳ ಪ್ರಿಯಕರನೇ ವಿಲನ್ ಆಗಿದ್ದರು ಎನ್ನುವ ವಿಚಾರ ತಿಳಿಯಲು ಬಹಳ ದಿನವೇನೂ ಹಿಡಯಲಿಲ್ಲ.

ಸಿನಿಮಿಯ ರೀತಿಯಲ್ಲಿ ತನ್ನ ಗಂಡನನ್ನೇ ಮಗಳ ಪ್ರಿಯಕರನಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಹೆಂಡತಿಗೆ ತನ್ನ ಗಂಡನ ಬಗ್ಗೆ ಒಂದಿಷ್ಟು ಕನಿಕರವೇ ಇರಲಿಲ್ಲ. ಗಂಡನ ಹತ್ಯೆಗೆ ಆಕೆ ಮನಸ್ಸು ಮಾಡಿದ್ದಾರೋ ಯಾಕೆ? ಎನ್ನುವುದಕ್ಕೆ ತಟ್ಟನೇ ಉತ್ತರ ಆಕೆಯ ಮಗಳು. ಮಗಳಿನ ಪ್ರೇಮ ಪ್ರಣಯಕ್ಕೆತಂದೆ ಅಡ್ಡಿಯಾದ ಕಾರಣ ಆತನನ್ನೇ ಚಟ್ಟ ಕಟ್ಟಲು ಅವ್ವ, ಮಗಳು, ಆಕೆಯ ಪ್ರಿಯಕರ ಎಲ್ಲ ಸಿದ್ಧತೆಗಳನ್ನು ಮಾಡಿಬಿಟ್ಟಿದ್ದರು. ಕೊಲೆ ಹೇಗೆ ಮಾಡಬೇಕು?, ಕೊಲೆ ನಂತರ ಯಾವುದೇ ಸಾಕ್ಷಾಧಾರಗಳು ಪೊಲೀಸರ ಕೈಗೆ ಸಿಗಬಾರದು. ನಾವ್ಯಾರೂ ಈ ಪ್ರಕರಣದಲ್ಲಿ ಸಿಲುಕಬಾರದು ಎಂದು ಪ್ಲಾನ್ ಮಾಡಿದ್ದರು.

ಅವರಿಗೆ ತಟ್ಟನೇ ಹೊಳೆದಿದ್ದೇ. ವಿ.ರವಿಚಂದ್ರನ್, ನವ್ಯಾ ನಾಯರ ಪ್ರಮುಖ ಪಾತ್ರದಲ್ಲಿ ನಟಿಸಿರುವ ದೃಶ್ಯ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ರವಿಚಂದ್ರನ್ ತನ್ನ ಪುತ್ರಿಗೆ ಕಿರುಕುಳ ಕೊಟ್ಟಿದ್ದ ಪೊಲೀಸ್ ಅಧಿಕಾರಿಯ ಪುತ್ರ (ಹುಡಗ)ನ್ನು ಹತ್ಯೆ ಮಾಡಿ, ಸಾಕ್ಷ ನಾಶ ಪಡಿಸಿ, ಹುಡುಗರ ಕಳೆಬರಹವನ್ನು ಹೂತಿದ್ದ. ಆದರೆ, ಪೊಲೀಸರ ಕೈಗೆ ಮಾತ್ರ ಕೊನೆಯ ವರೆಗೂ ಸಿಗಲಿಲ್ಲ.

ಸುಧೀರ ಕಾಂಬಳೆ ಪತ್ನಿ ರೋಹಿಣಿ ಕಾಂಬಳೆ ಮತ್ತು ಪುತ್ರಿ ಸ್ನೇಹಾ ಕಾಂಬಳೆ ಹಾಗೂ ಆಕೆಯ ಸ್ನೇಹಿತ ಅಕ್ಷಯ ಮಹಾದೇವ ವಿಠಕರ ಬಂಧಿತ ಆರೋಪಿಗಳು. ಪುತ್ರಿ ಸ್ನೇಹಾಳ ಪ್ರೀತಿಗೆ ತಂದೆಯ ವಿರೋಧವಿತ್ತು. ಸುಧೀರ ಕಾಂಬಳೆ ದುಬೈನಲ್ಲಿ ಕೆಲಸಕ್ಕಿದ್ದ. ಆ ವೇಳೆ ಬೆಳಗಾವಿಯಲ್ಲಿ ತಾಯಿ, ಮಗಳು ಇಬ್ಬರೇ ವಾಸವಾಗಿದ್ದರು. ಇವರಿಬ್ಬರ ಜೀವನಕ್ಕೆ ಪತಿ ಸುಧೀರ ಪ್ರತಿತಿಂಗಳು ಲಕ್ಷ ಗಟ್ಟಲೇ ಹಣ ಕಳುಹಿಸಿಕೊಡುತ್ತಿದ್ದ. ಆ ವೇಳೆ ತಾಯಿ,ಮಗಳು ಬಂದ ಹಣದಲ್ಲಿ ಚೆನ್ನಾಗಿಯೇ ಮಜಾ ಮಾಡುತ್ತ ಬಂದಿದ್ದರು. ಸ್ವತಂತ್ರವಾಗಿದ್ದರು ಆದರೆ, ಅದ್ಯಾವ ಗಳಿಗೆಯಲ್ಲಿ ಮಹಾಮಾರಿ ಕೋವಿಡ್ ಬಂತು ನೋಡಿ, ಸುಧೀರ ದುಬೈನಲ್ಲಿದ್ದ ಕೆಲಸ ಕಳೆದುಕೊಂಡು ಮರಳಿ ಬೆಳಗಾವಿಗೆ ಬಂದ. ಆದರೆ, ಇಲ್ಲಿನ ಪತ್ನಿ, ಪುತ್ರಿಯ ನಡುವಳಿಕೆ, ಅವರ ಕಾರ್ಯಚಟುವಟಿಕೆಗಳನ್ನು ಅವರಿಬ್ಬರಿಗೂ ಕಡಿವಾಣ ಹಾಕಿದ.

ಇನ್ನು ಪುತ್ನಿ ಸ್ನೇಹಾ ಪುಣೆಯಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದಳು. ಇದು ಕೂಡ ಸುಧೀರನ ಕೆಂಗಣ್ಣಿಗೆ ಗುರಿಯಾಗಿತ್ತು. ಹಾಗಾಗಿ, ಬೆಳಗಾವಿಯಲ್ಲಿಯೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿದ್ದರೂ ಪುಣೆಯಲ್ಲೇಕೇ ವ್ಯಾಸಂಗ ಮಾಡುತ್ತಿದ್ದೀಯಾ? ಬೆಳಗಾವಿಯಲ್ಲೇ ವ್ಯಾಸಂಗ ಮಾಡುವಂತೆ ಸೂಚಿಸಿದ್ದ. ದಿನಗಳೆದಂತೆ ತಾಯಿ, ಮಗಳ ಎಲ್ಲ ಕಾರ್ಯಚಟುವಟಿಕೆಗಳಿಗೆ ನಿರ್ಬಂಧ ಹಾಕಿದ್ದ. ತಂದೆ ಹಾಕುತ್ತಿದ್ದ ನಿರ್ಬಂಧಗಳಿಂದ ಪುತ್ರಿ ಸ್ನೇಹಾ ರೋಸಿಹೋಗಿದ್ದಳು. ತನ್ನ ಎಲ್ಲ ಕಾರ್ಯಚಟುವಟಿಕೆಗಳಿಗೂ ತಂದೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾದರೆ ಪರಿಸ್ಥಿತಿ ಮತ್ತಷ್ಟು ಬೀಗಡಾಯಿಸುತ್ತದೆ ಎಂದು ಹೇಳಿ, ತಂದೆಯನ್ನೇ ಹತ್ಯೆ ಮಾಡಲು ಯೋಜನೆ ರೂಪಿಸಿದರು. ಇದಕ್ಕೆ ತಾಯಿ ಸಾಥ್ ನೀಡಿದಳು. ಪುತ್ರಿಯ ಪ್ರಿಯಕರ, ಪುಣೆಯ ಅಕ್ಷಯ ಮಹಾದೇವ ವಿಠಕರ ಜೊತೆಗೂಡಿ, ತಮ್ಮ ಎಲ್ಲ ಕಾರ್ಯಚಟುವಟಿಕೆಗೆ ಅಡ್ಡಿಯಾಗಿರುವ ತಂದೆಯನ್ನೇ ಮುಗಿಸಿಬಿಡುವ ಕುರಿತು ಚರ್ಚಿಸಿ, ಹತ್ಯೆ ಎಲ್ಲಿ ಮಾಡಬೇಕು, ಯಾವಾಗ ಮಾಡಬೇಕು ಎನ್ನುವುದರ ಬಗ್ಗೆ ಮೊದಲೇ ಪ್ಲಾನ್ ರೂಪಿಸಿದ್ದರು.

ಆದರೆ, ಎಲ್ಲಿ ನಾವು ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂದು ಪೊಲೀಸರ ಕೈಗೆ ಸಿಗದಂತೆ ಹತ್ಯೆ ಮಾಡುವ ಕುರಿತು ತಾಯಿ, ಮಗಳು ಮತ್ತು ಮಗಳ ಪ್ರಿಯಕರ ಮೂವರು ಹಂತಕರು ಸೇರಿ ವಿ.ರವಿಚಂದ್ರನ ಮತ್ತು ನವ್ಯಾ ನಾಯರ್ ಅವರ ಪ್ರಮುಖ ಪಾತ್ರದಲ್ಲಿರುವ ದೃಶ್ಯ ಕನ್ನಡ ಚಲನಚಿತ್ರವನ್ನು ವೀಕ್ಷಿಸಿದ್ದಾರೆ. ಬಳಿಕ ತಾವು ಅಂದುಕೊಂಡಂತೆಯೇ ಕ್ಯಾಂಪ್‌ನಲ್ಲಿ ಸುಧೀರ ಕಾಂಬಳೆ ಮೇಲೆ ಮಾರಕಾಸ್ತ್ರದಿಂದ ಥಳಿಸಲಾಗಿದೆ. ಈ ವೇಳೆ ಆತ ಕೂಡ ಪ್ರತಿಯಾಗಿ ದಾಳಿ ನಡೆಸಿರುವುದರಿಂದ ಆರೋಪಿ ಅಕ್ಷಯ ವಿಠಕರ ಕೂಡ ಗಾಯಗೊಂಡಿದ್ದಾನೆ.

ಆದರೆ, ಕೊಲೆ ನಂತರ ಆತ ಪುಣೆಗೆ ತೆರಳಿ, ಅಲ್ಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದ. ಆತ ಆಸ್ಪತ್ರೆಯಿಂದ ಡಿಸ್‌ಚಾರ್ಚ ಆದ ಮೇಲೆ ಪೊಲೀಸರು ವಿಚಾರಣೆ ನಡೆಸಿದ ವೇಳೆ, ಆತನ ಪ್ರೇಮ ಕಹಾನಿ ಜೊತೆಗೂ ಹತ್ಯೆ ಕಹಾನಿ, ಆತ ವಿವಾಹಿತ, ಇಬ್ಬರು ಮಕ್ಕಳ ತಂದೆಯೂ ಆಗಿದ್ದಾನೆ ಎಂಬುದು ಬಹಿರಂಗವಾಗುತ್ತದೆ.

ಇಷ್ಟೇಲ್ಲಾ ಘಟನೆಗಳು ಗೊತ್ತಿದ್ದರೂ ತಮಗೆ ಏನೂ ಗೊತ್ತಿಲ್ಲ. ಯಾರೋ ಕೊಲೆ ಮಾಡಿದ್ದಾರೆ ಎಂದು ತಾಯಿ, ಮಗಳು ನಾಟಕವಾಡಿದ್ದರು. ದೃಶ್ಯ ಸಿನಿಮಿಯ ಮಾದರಿಯಲ್ಲಿ ಪತಿಯನ್ನೇ ಹತ್ಯೆ ಮಾಡಿದ್ದರೂ ಆರೋಪಿಗಳು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *