ಬೆಳಗಾವಿ ಗ್ರಾಮೀಣ ಕ್ಷೇತ್ರದ ವಾಘವಾಡೆ ಗ್ರಾಮದಲ್ಲಿ ನಾಲ್ಕು ಕಂಟ್ರಿ ಪಿಸ್ತೂಲ್ ಗಳ ಪತ್ತೆ….
ಬೆಳಗಾವಿ- ಕಸದ ರಾಶಿಯಲ್ಲಿ ನಾಲ್ಕು ಕಂಟ್ರಿ ಪಿಸ್ತೂಲ್‌ಗಳು ಪತ್ತೆಯಾಗಿವೆ ಬೆಳಗಾವಿ ತಾಲೂಕಿನ ವಾಘವಾಡೆ ಗ್ರಾಮದಲ್ಲಿ ಕಸದ ರಾಶಿಯನ್ನು ಡಂಪ್ ಮಾಡುವಾಗ ಈ ಪಿಸ್ತೂಲ್ ಗಳು ಪತ್ತೆಯಾಗಿವೆ.
ಫೆಬ್ರವರಿ 8ರಂದು ಪತ್ತೆಯಾಗಿರುವ ನಾಲ್ಕು ಕಂಟ್ರಿಮೇಡ್ ಪಿಸ್ತೂಲ್‌ಗಳ ಸುತ್ತ ಅನೇಕ ಅನುಮಾನದ ಹುತ್ತಗಳು ಹುಟ್ಡಿಕೊಂಡಿವೆ ಸ್ಥಳೀಯರು ಸ್ವಚ್ಛತಾ ಕಾರ್ಯ ಕೈಗೊಂಡ ವೇಳೆ ಪತ್ತೆ ಈ ಕಂಟ್ರಿ ಪಿಸ್ತೂಲ್ ಗಳು ಪತ್ತೆಯಾಗಿವೆ
ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು
ಬಹಳ ದಿನಗಳಿಂದ ಮಣ್ಣಲ್ಲಿದ್ದ ಕಾರಣ ಪಿಸ್ತೂಲ್‌ಗಳು ತುಕ್ಕು ಹಿಡಿದಿವೆ. ಆಯುಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಟ್ರಿಮೇಡ್ ಪಿಸ್ತೂಲ್‌ಗಳು ಪತ್ತೆಯಾದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ
ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಿಗೆ ಗನ್ ಟ್ರೇನಿಂಗ್ ನೀಡಲಾಗಿತ್ತು ಖಾನಾಪುರ ತಾಲೂಕಿನ ಅರಣ್ಯಪ್ರದೇಶದಲ್ಲಿ ತರಬೇತಿ ನೀಡಲಾಗಿತ್ತು
ತರಬೇತಿ ಪಡೆದ ಬಗ್ಗೆ ಎಸ್‌ಐಟಿ ಗೆ ಮಾಹಿತಿ ಆರೋಪಿಗಳು ಮಾಹಿತಿ ನೀಡಿದ್ದರು ಪತ್ತೆಯಾಗಿರುವ ನಾಲ್ಕು ಕಂಟ್ರಿ ಪಿಸ್ತೂಲ್ ಗಳನ್ನು ಗನ್ ಟ್ರೇನಿಂಗ್ ಗೆ ಬಳಿಸಲಾಗಿತ್ತು ಎನ್ನುವ ಶಂಕೆ ವ್ಯಕ್ತವಾಗಿದೆ.
ಕಂಟ್ರಿಮೇಡ್ ಪಿಸ್ತೂಲ್‌ಗಳು ಪತ್ತೆ ಹಲವು ಅನುಮಾನಗಳಿಗೆ ಎಡೆಮಾಡಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೋಲೀಸರು ತನಿಖೆ ಮುಂದುವರೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ