ಲವರ್ ಜೊತೆ ಸೇರಿ ಗಂಡನ ಮರ್ಡರ್ ಮಾಡಿದ ಜೋಡಿ ಅರೆಸ್ಟ
ಬೆಳಗಾವಿ- ಲವರ್ ಜೊತೆ ಸೇರಿಕೊಂಡು ಗಂಡನನ್ನು ಗೋಕಾಕ ಗೊಡಚಿನಮಲ್ಕಿ ಯಲ್ಲಿ ಸುತ್ತಾಡಿಸಿ ಅತನ ಮರ್ಡರ್ ಮಾಡಿಸಿ ಗಂಡ ನಾಪತ್ತೆ ಯಾಗಿದ್ದಾನೆ ಎಂದು ತಾನೇ ಪೋಲೀಸರಿಗೆ ದೂರು ನೀಡಿದ್ದ ಅಂಜಲಿ ಮತ್ತು ಅವಳ ಪ್ರಿಯಕರ ಪ್ರಶಾಂತನನ್ನು ಮಾರಿಹಾಳ ಪೋಲೀಸರು ಬಂಧಿಸಿದ್ದಾರೆ.
ನನ್ನ ಗಂಡ ಯೋಧನಾಗಿದ್ದಾನೆ ಬೆಳಗಾವಿಗೆ ಹೋಗಿ ಬರುವದಾಗಿ ಹೇಳಿ ಹೋದವನ್ನು ಮನೆಗೆ ಬಂದಿಲ್ಲ ಎಂದು ಮಾರಿಹಾಳ ಪೋಲೀಸರಿಗೆ ದೂರು ನೀಡಿದ್ದ ಅಂಜಲಿಯ ಬಣ್ಣ ಬಯಲಾಗಿ ಈಗ ಪೋಲೀಸರ ಅತಿಥಿಯಾಗಿದ್ದಾಳೆ
ಅಂಜಲಿ ತಮ್ಮ ಮನೆಯ ಕಾರ್ ಚಾಲಕ ಹೊನ್ನಿಹಾಳ ಗ್ರಾಮದ ಪ್ರಶಾಂತ ದತ್ತಾತ್ರಯ ಪಾಟೀಲ ಜೊತೆ ಅನೈತಿಕ ಸಮಂಧ ಹೊಂದಿದ್ದಳು ಅಂಜಲಿ ತನ್ನ ಕಾರ್ ಚಾಲಕ ಕಮ್ ಲವರ್ ಜೊತೆ ಸೇರಿ ಮಾಡಿಕೊಂಡ ಗಂಡನನ್ನೇ ಮರ್ಡರ್ ಮಾಡಿ ಗೊಡಚಿನಮಲ್ಕಿ ಪ್ರದೇಶದಲ್ಲಿ ಶವ ಎಸೆದು ಬಂದಿದ್ದಳು
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾರಿಹಾಳ ಪೋಲೀಸರು ಆಂಜಲಿಯ ಅಸಲಿಯತ್ತು ಬಯಲು ಮಾಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ