ಕೋರೋನಾ ಭೀತಿ ಬೆಳಗಾವಿಯಲ್ಲಿ ಒಂಬತ್ತು ಜನರ ಮೇಲೆ ಆರೋಗ್ಯ ಇಲಾಖೆಯ ನಿಗಾ….
ಬೆಳಗಾವಿ- ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ
ಬೆಳಗಾವಿಯಲ್ಲಿ ಒಂಬತ್ತು ಜನರ ಮೇಲೆ ಬೆಳಗಾವಿ ಜಿಲ್ಲಾಡಳಿತ ನಿಗಾವಹಿಸಿದೆ
ವಿದೇಶದಿಂದ ಭಾರತಕ್ಕೆ ಹಿಂದುರುಗಿದ ಒಂಬತ್ತು ಜನರನ್ನು ಮನಿಪಾಲದಲ್ಲಿ
ಕೊರೊನಾ ವೈರಸ್ ಸ್ಕ್ರೀನ್ ಟೆಸ್ಟ್. ಮಾಡಲಾಗಿತ್ತು ಈ ಒಂಬತ್ತು ಜನರಲ್ಲಿ ಕೋರೋನಾ ಸೊಂಕು ಇಲ್ಲ ಅಂತಾ ರಿಪೋರ್ಟ್ ಬಂದಿತ್ತು ಪರೀಕ್ಷೆಗೊಳಗಾದ ಒಂಬತ್ತು ಜನ ಕಳೆದ ಒಂದು ತಿಂಗಳಿನಿಂದ ಒಬ್ಬೊಬ್ಬರಾಗಿ ಬೆಳಗಾವಿಗೆ ಬಂದಿಳಿದಿದ್ದು ಬೆಳಗಾವಿಗೆ ಬಂದಿರುವ ಒಂಬತ್ರು ಜನರು ವಿದೇಶದಿಂದ ಬಂದಿದ್ದು ಅವರಲ್ಲಿ ಕೋರೋನಾ ಸೊಂಕು ಇಲ್ಲದಿದ್ದರೂ ಅವರಿಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಳಗಾವಿ ಜಿಲ್ಲಾಡಳಿತ ಒಂಬತ್ತು ಜನರಿಗೆ ಸೂಚನೆ ನೀಡಿದೆ.
ಒಂಬತ್ತು ಜನರಲ್ಲಿ ಮೂರು ಜನ ವಿದ್ಯಾರ್ಥಿಗಳು, ಮೂರು ಜನ ಯೋಧರು ಸೇರಿದಂತೆ ಒಂಬತ್ತು ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ
ಶ್ರೀಲಂಕಾ ಮತ್ತು ಚೀನಾ ದೇಶದಿಂದ ಮರಳಿದವರು.
ಒಂಬತ್ತು ಜನರಿಗೆ ಎರಡು ವಾರಗಳಿಂದ ನಿಗಾ ಇಡಲಾಗಿದೆ
ಸೋಂಕು ಪತ್ತೆಯಾಗದಿದ್ರೂ ಒಂಬತ್ತು ಜನರು ಮೂವತ್ತು ದಿನಗಳ ಕಾಲ ಮನೆಯಲ್ಲಿಯೇ ಇರಬೇಕು.ಮುಂಜಾಗೃತವಾಗಿ ಒಂಬತ್ತು ಜನ ಹೇಗಿರಬೇಕು ಎಂದು ಬೆಳಗಾವಿ ಏರ್ ಪೋರ್ಟನಲ್ಲಿ ಮಾರ್ಗದರ್ಶನ ಮಾಡಿದ್ದಾರೆ
ವಿದೇಶದಿಂದ ಬೆಳಗಾವಿಗೆ ಬಂದಿರುವ ಒಂಬತ್ತು ಜನರಿಗೆ ಸ್ಕ್ರೀನ್ ಟೆಸ್ಟ್ ಮಾಡಲಾಗಿದೆ ಈ ಒಂಬತ್ತು ಜನರಲ್ಲಿ ಕೋರೋನಾ ಸೊಂಕು ಇಲ್ಲವೇ ಇಲ್ಲ ಈ ಒಂಬತ್ರು ಜನರು ವಿದೇಶದಿಂದ ಮರಳಿ ಬಂದಿರುವದರಿಂದ ಅವರ ಮೇಲೆ ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ಮುಂಜಾಗೃತ ಕ್ರಮವಾಗಿ ಅವರ ಮೇಲೆ ನಿಗಾ ವಹಿಸಿದೆ
ಒಂಬತ್ತು ಜನರನ್ನು ಭೇಟಿಯಾದ ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಾಂತ ಮುನ್ಯಾಳ ಮತ್ತು ನುರಿತ ವೈದ್ಯರ ತಂಡ ಒಂಬತ್ತು ಜನರಿಗೆ ಮಾರ್ಗದರ್ಶನ ಮಾಡಿದೆ
ಬೆಳಗಾವಿಗೆ ಬಂದಿರುವ ಒಂಬತ್ತೂ ಜನರಿಗೆ ಕೋರೋನಾ ವೈರಸ್ ಸೊಂಕು ಇಲ್ಲ ಅವರು ವಿದೇಶದಿಂದ ಬಂದಿದ್ದಾರೆ ಅನ್ನೋ ಏಕೈಕ ಕಾರಣಕ್ಕಾಗಿ ಅವರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.