ಅಂಬೋಲಿಯ ಕಾರಿನಲ್ಲಿ ಭಸ್ಮವಾದ ಮಹಿಳೆ,ಅವನ ಹೆಂಡಿತಿ ಅಲ್ಲ…….
ಬೆಳಗಾವಿ – ನಿನ್ನೆ ರಾತ್ರಿ ಅಂಬೋಲಿಯ ಜಲಪಾತದ ಬಳಿ ಸಂಭವಿಸಿದ ಕಾರು ಅಗ್ನಿ ದುರಂತ ಬೆಳಗಾಗುವಷ್ಟರಲ್ಲಿ ಟ್ವಿಸ್ಟ್ ಪಡೆದುಕೊಂಡಿದೆ,ಕಾರಿನಲ್ಲಿ ಸುಟ್ಟು ಭಸ್ಮವಾದ ಮಹಿಳೆ ಆತನ ಹೆಂಡತಿ ಅಲ್ಲ ಎನ್ನುವದು ಗೊತ್ತಾಗಿದೆ.
ಅಂಬೋಲಿಯ ಜಲಪಾತದ ಬಳಿ ಕಾರಿನಲ್ಲಿ ಮೃತಪಟ್ಟ ಮಹಿಳೆ ,ಬೆಳಗಾವಿಯ ಕಂಗ್ರಾಳ ಗಲ್ಲಿಯ 41ವರ್ಷದ ರಿಜ್ವಾನಾ ಪಾತರವಾಟ ಎಂದು ಗುರುತಿಸಲಾಗಿದೆ.
ಈ ಮಹಿಳೆಯ ಜೊತೆ ಅಂಬೋಲಿಯ ರಿಸಾರ್ಟ್ ಗೆ ಹೋದ ದುಂಡಪ್ಪ ಪದ್ಮಣ್ಣವರ ಈತ ರಿಜ್ವಾನಾಳ ಗಂಡ ಅಲ್ಲ ಆತ ಫ್ಯಾಮೀಲಿ ಡಾಕ್ಟರ್,ಆಗಿದ್ದು ರಿಜ್ವಾನಾ ಸಾವು ಅನುಮಾನಸ್ಪದ ಎಂದು ರಿಜ್ವಾನಾ ಪಾತರವಾಟ ಅಳಿಯ ಅಂಬೋಲಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ
ಅಂಬೋಲಿ ಕಾರು ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ರಿಜ್ವಾನಾ ಪಾತರವಾಟ ಬೆಳಗಾವಿಯ ಕಾಂಗ್ರಾಳ ಗಲ್ಲಿಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದಳು,ಇವಳಿಗೆ ಒಬ್ಬಳು ಮಗಳಿದ್ದು ಅವಳನ್ನು ಮಹಾರಾಷ್ಟ್ರದ ಅಜರಾ ಗ್ರಾಮಕ್ಕೆ ಮದುವೆ ಮಾಡಿ ಕೊಟ್ಟಿದ್ದಾಳೆ,ಮಗ ಚೆನ್ನೈನಲ್ಲಿ ಜಾಬ್ ಮಾಡುತ್ತಿದ್ದಾನೆ .
ಅಜರಾ ಗ್ರಾಮದಲ್ಲಿರುವ ರಿಜವಾನಾಳ ಅಳಿಯ ಈಗ ರಿಜ್ವಾನಾ ದುಂಡಪ್ಪ ಪದ್ಮಣ್ಣವರ ಹೆಂಡತಿ ಅಲ್ಲ ಆತ ನಮ್ಮ ಫ್ಯಾಮಿಲಿ ಡಾಕ್ಟರ್ ಆಗಿದ್ದು ಇವರಿಬ್ಬರು ಎರಡು ದಿನ ಅಂಬೋಲಿಯ ರಿಸಾರ್ಟ್ ನಲ್ಲಿ ತಂಗಿದ್ದರು.ರಜ್ವಾನಾ ದುರಂತದ ಹಿಂದೆ ಅನೇಕ ಅನುಮಾನಗಳಿವೆ ಎಂದು ಅಂಬೋಲಿ ಪೋಲೀಸರಿಗೆ ದೂರು ನೀಡಿದ್ದಾನೆ .
ನಿನ್ನೆ ನಡೆದ ಕಾರು ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ದುಂಡಪ್ಪ ಪದ್ಮಣ್ಣವರ,ಗೋವಾದ ಬಾಂಬೋಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ,ಪಡೆಯುತ್ತಿದ್ದು ಈತ ಚೇರಿಸಿಕೊಂಡ ಬಳಿಕ ನೈಜ ಕಹಾನಿ ಗೊತ್ತಾಗಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ