ಬೆಳಗಾವಿ-22 ವರ್ಷದ ಯುವಕನೊಬ್ಬ ಮನೆಯಲ್ಲಿ ಯಾರೂ ಇಲ್ಲದಿರುವಾಗ ಬಾಗಿಲು ಹಾಕಿಕೊಂಡು,ಡೆತ್ ನೋಟ್ ಬರೆದಿಟ್ಟು ,ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಪಕ್ಕದ ಪೀರನವಾಡಿಯಲ್ಲಿ ನಡೆದಿದೆ.
ಪೀರನವಾಡಿಯ 22 ವರ್ಷದ ಸೂರಜ್ ಅಶೋಕ ನಾಯಕ ಎಂಬಾತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.ಈತ ಮೂಲತಹ ಹುಕ್ಕೇರಿ ತಾಲ್ಲೂಕಿನ ಹಂಚಿನಾಳ ಗ್ರಾಮದವನಾಗಿದ್ದು,ತಂದೆ ತಾಯಿಯ ಜೊತೆ ಪೀರನವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ,ಈ ಕೂಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ.
ಈತನ ತಮ್ಮ ಮತ್ತು ತಂದೆ ತಾಯಿ ಕೆಲಸಕ್ಕೆ ಹೋದ ಸಂಧರ್ಭದಲ್ಲಿ,ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಾಯಿ ಕೆಲಸದಿಂದ ವಾಪಸ್ ಮನೆಗೆ ಮರಳಿದಾಗ ಸೂರಜ್ ಆತ್ಮಹತ್ಯೆ ಮಾಡಿರುವ ವಿಷಯ ಗೊತ್ತಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೂರಜ್ ಡೆತ್ ನೋಟ್ ಬರೆದಿದ್ದು,ನಾನೇ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ,ನನ್ನ ಸಾವಿನ ಕುರಿತು ಯಾರೂ ತೊಂದರೆಗೊಳಗಾಗಬೇಡಿ ಎಂದು ಬರೆದಿದ್ದಾನೆ.
ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ