ಬೆಳಗಾವಿ- ತಮ್ಮನೊಬ್ಬ ರಾಡ್ ನಿಂದ ಅಣ್ಣನ ತಲೆಗೆ ಹೊಡೆದು ಹತ್ಯೆ ಮಾಡಿದ ಘಟನೆ ಮಾರಿಹಾಳ ಪೋಲೀಸ್ ಠಾಣೆ ವ್ಯಾಪ್ತಿಯ ಅಷ್ಟೇ ಗ್ರಾಮದ ಪಕ್ಕದಲ್ಲಿರುವ ಚಂದಗಡ ಗ್ರಾಮದಲ್ಲಿ ನಡೆದಿದೆ.
ಕೃಷ್ಣಾ ಕಾಲಕುಂದ್ರಿ30 ಹತ್ಯೆಯಾದ ದುರ್ದೈವಿಯಾಗಿದ್ದಾನೆ ಇತನ ತಮ್ಮ ಮಿಥುನ ಶಿವಾಜಿ ಕಾಲಕುಂದ್ರಿ ಕೊಲೆ ಮಾಡಿದ ಆರೋಪಿಯಾಗಿದ್ದು ಮಾರಿಹಾಳ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಿಥುನ ಕಾಲಕುಂದ್ರಿ ಪ್ರತಿದಿನ ಕುಡಿದ ಅಮಲಿನಲ್ಲಿ ಮನೆಯವರ ಜೊತೆ ನಿತ್ಯ ಜಗಳಾಡುತ್ತಿದ್ದ ಇವತ್ತು ಅಣ್ಣನ ಜೊತೆ ಜಗಳಕ್ಕಿಳಿದು ಅಣ್ಣನಿಗೆ ರಾಡ್ ನಿಂದ ತೆಲೆಗೆ ಹೊಡೆದು ಅಣ್ಣ ಕೃಷ್ಣಾ ಎಂಬಾತನ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿ,ಮಿಥುನ್ ಕಾಲಕುಂದ್ರಿಯನ್ನು ಬಂಧಿಸಲಾಗಿದೆ.
ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ