ಬೆಳಗಾವಿ- ಸರಾಯಿ ಕುಡಿದು ಇಬ್ಬರು ಗೆಳೆಯರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಇಂದು ರಾತ್ರಿ ಬೆಳಗಾವಿ ನಗರದ ಹಳೇಯ ಬೆಳಗಾವಿ ನಾಕಾ ಬಳಿ ಇದ್ದ ವೈನ್ ಶಾಪ್ ಗೆ ಗೆಳೆಯರು ಸರಾಯಿ ಕುಡಿಯಲು ಹೋಗಿದ್ದರು ಈ ಸಂಧರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರು ಪರಸ್ಪರ ಹೊಡೆದಾಡಿದ್ದಾರೆ,ಈ ಹೊಡೆದಾಟದಲ್ಲಿ ಸೂರಜ ಗೌಂಡವಾಡಕರ ಅವನ ತೆಲೆಗೆ ಗಾಯವಾಗಿ ಆತ ಅಸ್ವಸ್ಥನಾಗಿದ್ದಾನೆ. ಕೂಡಲೇ ಆತನನ್ನು ಯಳ್ಳೂರ ರಸ್ತೆಯಲ್ಲಿರುವ ಕೆಎಲ್ಇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದ್ರೆ ಸೂರಜ ಗೌಂಡವಾಡಕರ ಆಸ್ಪತ್ರೆಯಲ್ಲಿ ಸಾವನ್ನೊಪ್ಪಿದ ಘಟನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.
ಸ್ಥಳಕ್ಕೆ ಶಹಾಪೂರ ಠಾಣೆಯ ಪೋಲೀಸರು ದೌಡಾಯಿಸಿದ್ದು ಕೊಲೆಗೆ ಕಾರಣ ಏನು.? ಕೊಲೆ ಮಾಡಿದವರು ಯಾರು ? ಅನ್ನೋದರ ಬಗ್ಗೆ ಪೋಲೀಸರು ತನಿಖೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ