ಬೆಳಗಾವಿ-ಗೋದಾಮಿನಲ್ಲಿದ್ದ 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನ ಮಾಡಿದ ಘಟನೆ,ಬೆಳಗಾವಿ ತಾಲೂಕಿನ ದೇಸೂರು ರೇಲ್ವೆ ನಿಲ್ದಾಣ ಬಳಿ ನಡೆದಿದೆ.
12 ಲಕ್ಷ ಮೌಲ್ಯದ RCF DAP ರಾಸಾಯನಿಕ ಗೊಬ್ಬರ ನಿನ್ನೆ ರಾತ್ರಿ ಕಳವು ಆಗಿವೆ.ಗೋದಾಮಿನಲ್ಲಿದ್ದ ಗೊಬ್ಬರ ಚೀಲಗಳು ಏಕಾಏಕಿ ಮಾಯವಾಗಿದ್ದು ಹೇಗೆ? ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.
900 ಗೊಬ್ಬರ ಚೀಲ ಸಾಗಿಸಲು ಕನಿಷ್ಟ ಎರಡು ಲಾರಿಗಳಾದರೂ ಬೇಕು,ಪರಿಚಯಿಸ್ಥರಿಂದಲೇ ಗೋದಾಮಿನಲ್ಲಿದ್ದ ಗೊಬ್ಬರ ಚೀಲ ಕಳ್ಳತನ ಶಂಕೆ ವ್ಯಕ್ತವಾಗಿದೆ.ತಡರಾತ್ರಿ ಗೋದಾಮು ಬಳಿ ಯಾರೂ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಬರೊಬ್ಬರಿ 900 ಚೀಲ ಗೊಬ್ಬರವನ್ನು ದೋಚಿದ್ದಾರೆ.
ಬೆಳಗಾವಿ ಗ್ರಾಮೀಣ ಠಾಣೆಗೆ ಗೋದಾಮು ಮ್ಯಾನೇಜರ್ ಶಿವಾಜಿ ದೂರು ನೀಡಿದ್ದು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ