ಪಿ ಇ ಟೀಚರ್ ನಿಂದ ವಿಧ್ಯಾರ್ಥಿನಿಗೆ ಲೈಂಗಿಕ ಟಾರ್ಚರ್ ……!!!
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನ ಲವ್ವಿಡವ್ವಿಯ ಅಶ್ಲೀಲ ಪೋಟೋ ವೈರಲ್ ಆಗಿದ್ದು ಶಾಲೆಗೆ ಆಗಮಿಸಿದ ಗ್ರಾಮಸ್ಥರು ಶಿಕ್ಷಕನಿಗೆ ಧರ್ಮದೇಟು ಕೊಟ್ಟಿರುವ ಘಟನೆ ಸವದತ್ತಿ ತಾಲೂಕಿನಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು ಶಾಲೆಗೆ ಆಗಮಿಸಿದ ಜನರು ಹಿಗ್ಗಾಮುಗ್ಗಾ ಥಳಿಸಿದ್ದಲದೇ ಶಿಕ್ಷಕನ ವಿರುದ್ಧ ದೂರು ನೀಡಿ ಪೊಲೀಸರಿಗೆ ಒಪ್ಪಿಸಿದ‌್ದಾರೆ. ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಪಿ ಇ ಟೀಚರ್ ಮೇಲೆ ಗ್ರಾಮಸ್ಥರು, ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬೈರವಾಡ ಗ್ರಾಮದ ನಿವಾಸಿಯಾಗಿರೋ ಈ ಟೀಚರ್ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿನಿ ಜೊತೆ ಲವ್ವಿ ಡವ್ವಿ ಮಾಡಿದ ಪೋಟೋ ವೈರಲ್ ಆಗಿತ್ತು .ಶಾಲೆಗೆ ಬರುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪವಿದೆ.ಇದರ ಜೊತೆಗೆ ಶಾಲಾ ಅವಧಿಯಲ್ಲಿ ವಿದ್ಯಾರ್ಥಿನಿ ಜೊತೆಗೆ ಕಳೆದಿರುವ ಮಧುರ ಕ್ಷಣಗಳನ್ನ ಶಿಕ್ಷಕ ತನ್ನ ಮೊಬೈಲ್ ನಲ್ಲಿ ಸೆರೆ ಮಾಡಿಟ್ಟುಕೊಂಡಿದ್ದಾನೆ. ಇದಾದ ಬಳಿಕ ಶಾಲೆ ಮಗಿದ್ಮೇಲೆ ಅಂದ್ರೆ ಈಗ ಯುವತಿಗೆ ಬೇರೆ ಯವಕನೊಂದಿಗೆ ಮದುವೆಯ ದಿನಾಂಕ ನಿಗದಿಯಾಗಿದೆ. ಇತ್ತ ಮದುವೆ ನಿಲ್ಲಿಸುವ ಉದ್ದೇಶದಿಂದ ವಿದ್ಯಾರ್ಥಿಯೊಂದಿಗೆ ಕಳೆದಿದ್ದ ಮಧುರ ಕ್ಷಣಗಳನ್ನ ತನ್ನ ಮೊಬೈಲ್ ಪೋಟೋ ಸ್ಟೇಟಸ್ ಶಿಕ್ಷಕ ಇಟ್ಟುಕೊಂಡಿದ್ದನು.
ವಿದ್ಯಾರ್ಥಿ ಪೋಟೋ ಮಾತ್ರ ಕಾಣುವ ಹಾಗೇ.. ತನ್ನ ಮುಖವನ್ನ ಕಟ್ ಮಾಡಿ ಸ್ಟೇಟಸ್ ಹಾಕಿದ್ದನು.ಇದನ್ನ ಗಮನಿಸಿದ ಗ್ರಾಮಸ್ಥರು ಶಾಲೆಗೆ ಆಗಮಿಸಿ ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ.ಈ ಕುರಿತು
ಜೂ.7ರಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ಪ ದಾಖಲಿಸಿದ ಪೋಲೀಸರು ತನಿಖೆ ನಡೆಸಿದ್ದಾರೆ..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ